ETV Bharat / bharat

ನಾಲ್ಕು ಕಾಲಿರುವ ಹೆಣ್ಣು ಶಿಶುವಿಗೆ ಮಹಿಳೆ ಜನ್ಮ.. ಮಗು ಸಂಪೂರ್ಣ ಆರೋಗ್ಯಕರ ವೈದ್ಯರು ಸ್ಪಷ್ಟನೆ - ಶಸ್ತ್ರಚಿಕಿತ್ಸೆ

ಮಧ್ಯೆಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಸಿಕಂದರ್ ಕಂಪೂ ನಗರದ ಮಹಿಳೆಯೊಬ್ಬರು ನಾಲ್ಕು ಕಾಲು ಇರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

baby girl with four legs
ನಾಲ್ಕು ಕಾಲಿರುವ ಹೆಣ್ಣು ಶಿಶು
author img

By

Published : Dec 16, 2022, 2:02 PM IST

ಗ್ವಾಲಿಯರ್ (ಮಧ್ಯಪ್ರದೇಶ): ರಾಜ್ಯದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲು ಇರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಜನರಲ್ಲಿ ಕುತೂಹಲ ಸೃಷ್ಟಿಸಿದೆ. ಸಿಕಂದರ್ ಕಂಪೂ ಪ್ರದೇಶದ ನಿವಾಸಿ ಆರತಿ ಕುಶ್ವಾಹ ಎಂಬ ಮಹಿಳೆ ಇಲ್ಲಿನ ಕಮಲ್​ರಾಜ ಆಸ್ಪತ್ರೆಯಲ್ಲಿ ಬುಧವಾರ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ನವಜಾತ ಶಿಶು ತೂಕ 2.3 ಕೆಜಿ ಇದ್ದು, ಆರೋಗ್ಯಕರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹೆಚ್ಚುವರಿ ಎರಡು ಕಾಲು : ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಯ ಅಧೀಕ್ಷಕರು ಹಾಗೂ ವೈದ್ಯರ ತಂಡವು ಆಗಮಿಸಿ, ನಾಲ್ಕು ಕಾಲಿರುವ ಹೆಣ್ಣು ಶಿಶುವನ್ನು ಪರೀಕ್ಷಿಸಿದೆ. ಮಗುವಿಗೆ ನಾಲ್ಕು ಕಾಲುಗಳಿವೆ. ಆದರೆ, ದೈಹಿಕ ವಿಕಲತೆ ಇದೆ.

ಕೆಲವು ಭ್ರೂಣಗಳು ಹೆಚ್ಚುವರಿ ಆಗಿರುತ್ತವೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಗೊಂಡು ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್(ಅವಳಿಜನನ) ಎಂದು ಕರೆಯಲ್ಪಡುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ತಿಳಿಸಿದ್ದಾರೆ.

ಇದೀಗ ಮಕ್ಕಳ ವೈದ್ಯರು, ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ಭಾಗದಲ್ಲಿ ಅಂಗವಿಕಲತೆ ಇದೆಯೋ ಅದನ್ನು ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಬಳಿಕ ಹೆಣ್ಣು ಶಿಶು ಆರೋಗ್ಯವಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಆ ಕಾಲುಗಳನ್ನು ಹೊರತೆಗೆಯಬಹುದಾಗಿದೆ. ಇದರಿಂದ ಆ ಮಗು ಸಹಜ ಜೀವನ ನಡೆಸಬಹುದು. " ಡಾ.ಧಕಡ್ ಹೇಳಿದ್ದಾರೆ.

ವಿಶೇಷ ನವಜಾತ ನಿಗಾ ಘಟಕ: ಸದ್ಯ ಕಮಲರಾಜ ಆಸ್ಪತ್ರೆಯ ಶಿಶು ವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಹೆಣ್ಣು ಶಿಶುವನ್ನು ದಾಖಲಿಸಲಾಗಿದೆ. ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರ ಗಮನಿಸಲಾಗುತ್ತಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣು ಶಿಶುವಿನ ಹೆಚ್ಚುವರಿ ಕಾಲುಗಳನ್ನು ತೆಗೆಯುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ ಹೆಣ್ಣು ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದರು.

ಇದನ್ನೂಓದಿ:ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ: ಡಿ ಕೆ ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.