ETV Bharat / bharat

ಚುಡಾಯಿಸಲು ಬಂದವನಿಗೆ ಚಪ್ಪಲಿಯಿಂದ ಬಾರಿಸಿದ ಮಹಿಳೆ.. ಕಾಲಿಗೆ ಬಿದ್ದು ಕ್ಷಮೆ ಕೇಳಿದ ಆರೋಪಿ

ಮಹಿಳೆ ಒಂಟಿಯಾಗಿದ್ದನ್ನು ಕಂಡ ಕಿಡಿಗೇಡಿ ಯುವಕನೊಬ್ಬ ಆಕೆಯನ್ನು ಚುಡಾಯಿಸಲು ಆರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಚಪ್ಪಲಿಯಿಂದ ಬಾರಿಸಿ ತಕ್ಕ ಶಾಸ್ತಿ ಮಾಡಿದ್ದಾಳೆ.

woman beaten men in madhya pradesh
ಮಧ್ಯಪ್ರದೇಶದಲ್ಲಿ ಚುಡಾಯಿಸಲು ಬಂದವನಿಗೆ ಚಪ್ಪಲಿಯಿಂದ ಬಾರಿಸಿದ ಮಹಿಳೆ
author img

By

Published : Jun 11, 2022, 7:25 PM IST

ಬೆತುಲ್ (ಮಧ್ಯಪ್ರದೇಶ): ಒಂಟಿಯಾಗಿರುವುದನ್ನು ನೋಡಿ ಕಿರುಕುಳ ನೀಡಲು ಮುಂದಾಗಿದ್ದಾಗ ಯುವಕನೋರ್ವನಿಗೆ ಮಹಿಳೆಯೊಬ್ಬಳು ಮನಬಂದಂತೆ ಥಳಿಸಿ ತಕ್ಕ ಶಾಸ್ತಿ ಮಾಡಿರುವ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ.

ಮಾರುಕಟ್ಟೆಗೆ ಬಂದಿದ್ದ ಮಹಿಳೆ ಮರಳಿ ಮನೆಗೆ ಹೋಗುತ್ತಿದ್ದಳು. ಈ ವೇಳೆ ರಾತ್ರಿಯಾಗಿದ್ದ ಕಾರಣ ಮತ್ತು ಮಹಿಳೆ ಒಂಟಿಯಾಗಿದ್ದುದನ್ನು ಕಂಡ ಕಿಡಿಗೇಡಿ ಯುವಕನೊಬ್ಬ ಆಕೆಯನ್ನು ಚುಡಾಯಿಸಲು ಆರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಚಪ್ಪಲಿಯಿಂದ ಹೊಡೆಯಲು ಶುರು ಮಾಡಿದ್ದಾಳೆ.

ಮಧ್ಯಪ್ರದೇಶದಲ್ಲಿ ಚುಡಾಯಿಸಲು ಬಂದವನಿಗೆ ಚಪ್ಪಲಿಯಿಂದ ಬಾರಿಸಿದ ಮಹಿಳೆ

ಅವನ ಮುಖ-ಮೂತಿ ನೋಡದೆ ಮನಸೋಇಚ್ಛೆ ನಡುರಸ್ತೆಯಲ್ಲೇ ಸುಮಾರು ಅರ್ಧ ಗಂಟೆ ಚಪ್ಪಲಿಯಿಂದಲೇ ಬಾರಿಸಿ ಸರಿಯಾದ ಬುದ್ಧಿ ಕಲಿಸಿದ್ದಾಳೆ. ಕೊನೆಗೆ ಆ ಯುವಕ ತಪ್ಪಾಯಿತು ಎಂದು ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಬಳಿಕ ಅವನನ್ನು ಮಹಿಳೆ ಬಿಟ್ಟು ಕಳುಹಿಸಿದ್ದಾಳೆ. ಆರೋಪಿಯೊಂದಿಗೆ ಮತ್ತೊಬ್ಬ ಯುವಕ ಕೂಡ ಇದ್ದು, ಅವನೂ ಸಹ ಮಹಿಳೆಯ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿ ಆರೋಪ: ಶಾಲೆಗೆ ಹೋಗುವುದಕ್ಕೂ ಹೆದರುತ್ತಿರುವ ಬಾಲಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.