ETV Bharat / bharat

ಮಾರುಕಟ್ಟೆ ಮಧ್ಯದಲ್ಲೇ ಮಹಿಳೆಯಿಂದ ಯುವಕನಿಗೆ ಚಪ್ಪಲಿ ಏಟು.. ಕಾರಣ ನಿಗೂಢ - ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಉತ್ತರಪ್ರದೇಶದ ಹತ್ರಾಸ್​ನಲ್ಲಿ ಮಾರ್ಕೆಟ್ ಮಧ್ಯದಲ್ಲಿ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

woman beat youth with slippers in Hathras  Woman beat youth in Hathras  Woman thrashed in Uttara Pradesh  Youth beaten with slippers  Video of youth beating  Viral video of Hathras Woman beat youth  Viral video of beating in Hathras  ಮಾರುಕಟ್ಟೆ ಮಧ್ಯದಲ್ಲೇ ಮಹಿಳೆಯಿಂದ ಯುವಕನಿಗೆ ಚಪ್ಪಲಿ ಏಟು  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಯುವಕನಿಗೆ ಚಪ್ಪಲಿಯಿಂದ ಥಳಿಸಿದ ಪ್ರಕರಣ
ಮಾರುಕಟ್ಟೆ ಮಧ್ಯದಲ್ಲೇ ಮಹಿಳೆಯಿಂದ ಯುವಕನಿಗೆ ಚಪ್ಪಲಿ ಏಟು
author img

By

Published : Oct 17, 2022, 5:33 PM IST

ಹತ್ರಾಸ್(ಉತ್ತರಪ್ರದೇಶ): ಜಿಲ್ಲೆಯ ಲಕ್ಷ್ಮೀ ಟಾಕೀಸ್ ಬಳಿ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕನ ಸಹಚರರು ಹತ್ರಾಸ್ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ.

ಮಹಿಳೆ ತನ್ನ ಅತ್ತೆ ಮನೆಯವರ ಸೂಚನೆ ಮೇರೆಗೆ ಯುವಕನಿಗೆ ಥಳಿಸಿದ್ದಾಳೆ ಎಂಬುದು ಸ್ಥಳದಲ್ಲಿದ್ದವರ ಮಾತಾಗಿದೆ. ಮಾರುಕಟ್ಟೆಯ ಮಧ್ಯದಲ್ಲಿ ಗಲಾಟೆಯಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಹೆಸರು ಕೇಳುತ್ತಿದ್ದಂತೆ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

ಫಿರೋಜಾಬಾದ್‌ನ ಗ್ರಾಮದ ನಿವಾಸಿಯಾಗಿರುವ ಯುವಕ, ಬೆಳಗ್ಗೆ ಪಾಳಿಯಲ್ಲಿ ಪಿಇಟಿ ಪರೀಕ್ಷೆ ಬರೆಯಲು ನಗರದ ಬಾಗ್ಲಾ ಇಂಟರ್ ಕಾಲೇಜಿಗೆ ಬಂದಿದ್ದ. ಪರೀಕ್ಷೆ ಮುಗಿಸಿ ಮಧ್ಯಾಹ್ನದ ವೇಳೆ ಸ್ನೇಹಿತರೊಂದಿಗೆ ಬೇರೆ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಸಂತ್ರಸ್ತ ಯುವಕ ಮತ್ತೊಬ್ಬ ಯುವಕನನ್ನು ಭೇಟಿ ಮಾಡಿದ್ದಾನೆ. ಆ ಯುವಕ ಮೂರ್ನಾಲ್ಕು ಜನರನ್ನು ಕರೆದು ಸಂತ್ರಸ್ತನ ಮೇಲೆ ದಾಳಿ ಮಾಡಿದ್ದಾನೆ. ಅಷ್ಟೇ ಅಲ್ಲ, ಸುತ್ತುವರೆದು ಹೊಡೆಯಲು ಪ್ರಾರಂಭಿಸಿದ್ದಾರೆ. ಇದೇ ವೇಳೆ ಮಹಿಳೆ ಮಾರುಕಟ್ಟೆ ಮಧ್ಯದಲ್ಲೇ ಸಂತ್ರಸ್ತ ಯುವಕನಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ.

ಮಾರುಕಟ್ಟೆ ಮಧ್ಯದಲ್ಲೇ ಮಹಿಳೆಯಿಂದ ಯುವಕನಿಗೆ ಚಪ್ಪಲಿ ಏಟು

ಯಾವ ಯುವಕರು ನನಗೆ ಹೊಡೆಯಲು ಸುತ್ತುವರೆದಿದ್ದರೋ, ಅವರೇ ಮಹಿಳೆಗೆ ಫೋನ್​ ಮಾಡಿ ಕರೆಸಿದ್ದಾರೆ. ಅಲ್ಲದೇ ನನಗೆ ಚಪ್ಪಲಿಯಿಂದ ಹೊಡೆಸಿದ್ದಾರೆ ಎಂದು ಸಂತ್ರಸ್ತ ಯುವಕ ಹೇಳಿದ್ದಾನೆ.

ಮಾರುಕಟ್ಟೆಯಲ್ಲಿ ನೆರೆದಿದ್ದ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹರಿಬಿಟ್ಟಿದ್ದಾರೆ. ಬಳಿಕ ಸಂತ್ರಸ್ತ ಯುವಕನ ಸ್ನೇಹಿತರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ನೇಹಿತರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಓದಿ: ಅಕ್ರಮ ಸಂಬಂಧ ಶಂಕೆ.. ಯುವಕನ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.