ಕೊಟ್ಟಾಯಂ(ಕೇರಳ): ಆಹಾರ ಮತ್ತು ನೀರಿನಲ್ಲಿ ಔಷಧಿ ಬೆರೆಸಿ ಪತಿಯನ್ನ ಕೊಲೆ ಮಾಡಲು ಯತ್ನಿಸಿರುವ ಆರೋಪದ ಮೇಲೆ ಮಹಿಳೆಯನ್ನ ಬಂಧನ ಮಾಡಲಾಗಿದೆ. ಆಶಾ ಸುರೇಶ್(36) ಬಂಧಿತ ಮಹಿಳೆ.
ಕೊಟ್ಟಾಯಂ ಜಿಲ್ಲೆಯ ಮುರುಕ್ಕುಂಪುಳ ಮಂದಿರದಲ್ಲಿ ಈಕೆಯನ್ನ ಬಂಧನ ಮಾಡಲಾಗಿದೆ. ಘಟನೆಗೆ ಸಂಬಂಧಿಸಿಂತೆ ಪತಿ ಸತೀಶ್(38) ದೂರು ನೀಡಿದ್ದನು.
ಚಿರಾಯಿಂಕೀಝ ಮೂಲದ ಸತೀಶ್ 2006ರಲ್ಲಿ ಆಶಾ ಸುರೇಶ್ ಜೊತೆ ಮದುವೆ ಮಾಡಿಕೊಂಡಿದ್ದನು. 2008ರಿಂದಲೂ ಪತ್ನಿ ಮನೆಯಲ್ಲೇ ವಾಸವಾಗಿದ್ದರು. ಮದುವೆಯಾದಾಗಿನಿಂದಲೂ ಇಬ್ಬರ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಇದರ ಮಧ್ಯೆ ಸತೀಶ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ವೈದ್ಯರ ಬಳಿ ತೋರಿಸಿದ ಬಳಿಕ ಕೂಡ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಇದರ ಮಧ್ಯೆ ಈ ವಿಚಾರವಾಗಿ ಸತೀಶ್ ತನ್ನ ಹೆಂಡತಿ ಸ್ನೇಹಿತೆ ಬಳಿ ಮಾತನಾಡಿದ್ದಾನೆ.
ಇದನ್ನೂ ಓದಿರಿ: ಪಿಎಂ ಕೇರ್ಸ್ ಫಂಡ್ನಲ್ಲಿ ₹10,990 ಕೋಟಿ ಸಂಗ್ರಹ... ಬಳಕೆಯಾಗಿದ್ದು ಮಾತ್ರ ₹3,976 ಕೋಟಿ!
ಇದಕ್ಕೆ ಸಂಬಂಧಿಸಿದಂತೆ ಗಂಡನಿಗೆ ಏನಾದ್ರೂ ಔಷಧಿ ನೀಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ 2015ರಿಂದಲೂ ಆಹಾರ ಮತ್ತು ನೀರಿನಲ್ಲಿ ಔಷಧಿ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಸತೀಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಇದರ ಬೆನ್ನಲ್ಲೇ ಆಕೆಯ ಬಂಧನ ಮಾಡಲಾಗಿದ್ದು, ಮನೆಯಲ್ಲಿ ಕೆಲವೊಂದಿಷ್ಟು ಔಷಧಿ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.