ETV Bharat / bharat

ತಾನೇ ಮುಂದೆ ನಿಂತು ಮಗಳ ಮೇಲೆ ಅತ್ಯಾಚಾರ ಮಾಡಿಸಿದ ತಾಯಿ: ಕೊನೆಗೆ ಮಗುವಿಗೆ ಜನ್ಮ ನೀಡಿದ ಮಗಳು..! - ತಮಿಳುನಾಡಿನಲ್ಲಿ ಅಸಹ್ಯ ಹಾಗೂ ಅಮಾನವೀಯ ಘಟನೆ

ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟಿರುವ ಅತ್ಯಂತ ಹೀನಾಯ ಘಟನೆ ನಡೆದಿದೆ. ಅಷ್ಟೇ ಏಕೆ ಸ್ವಂತ ಮಗಳು ಮನೆಯಲ್ಲಿ ಮಗುವಿಗೆ ಜನ್ಮ ನೀಡುವಂತೆ ಮಾಡಿ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾಳೆ.

Woman allows lover to rape minor daughter, hides pregnancy
ತಾಯಿಯೇ ಮುಂದೆ ನಿಂತು ಮಗಳ ಮೇಲೆ ಅತ್ಯಾಚಾರ ಮಾಡಿಸಿದಳು: ಕೊನೆಗೆ ಮಗುವಿಗೆ ಜನ್ಮವನ್ನೂ ನೀಡಿದ ಮಗಳು..!
author img

By

Published : May 14, 2022, 11:07 PM IST

ಚೆನ್ನೈ: ತಮಿಳುನಾಡಿನಲ್ಲಿ ಅಸಹ್ಯ ಹಾಗೂ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟಿರುವ ಅತ್ಯಂತ ಹೀನಾಯ ಘಟನೆ ನಡೆದಿದೆ. ಅಷ್ಟೇ ಏಕೆ ಸ್ವಂತ ಮಗಳು ಮನೆಯಲ್ಲಿ ಮಗುವಿಗೆ ಜನ್ಮ ನೀಡುವಂತೆ ಮಾಡಿ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾಳೆ.

ಏನಿದು ಘಟನೆ?: ಚೆನ್ನೈನ ಒಟ್ಟೇರಿ ಪ್ರದೇಶದಲ್ಲಿ ನೆಲೆಸಿರುವ ಸುಮಿತಾ (40) (ಹೆಸರು ಬದಲಾಯಿಸಲಾಗಿದೆ) ಭಿನ್ನಾಭಿಪ್ರಾಯದಿಂದ ಪತಿಯಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಅವರಿಗೆ 17 ವರ್ಷದ ಮಗಳಿದ್ದಾಳೆ. ಪುಲಿಯಂತೋಪೆಯ ಮುತ್ತುಕುಮಾರ್ (50) ಎಂಬಾತ ಕಳೆದ ಕೆಲವು ತಿಂಗಳಿಂದ ಇವರ ಜತೆ ಅಕ್ರಮ ಸಂಬಂಧ ಹೊಂದಿದ್ದ.

ಇದಕ್ಕೆ ತಾಯಿ ಒಪ್ಪಿದ್ದರಿಂದ ಮುತ್ತುಕುಮಾರ್ ಕಳೆದ 1 ವರ್ಷದಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಹೀಗಾಗಿ ಪುಟ್ಟ ಬಾಲಕಿ ಗರ್ಭಿಣಿಯಾಗಿದ್ದಾಳೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಸುಮಿತಾ ಬಾಲಕಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಬಾಲಕಿ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾಳೆ.

ಆದರೆ, ಮಗುವಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆಗಾಗಿ ನಮ್ಮಾಳ್ವರಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಧಾರ್ ಕಾರ್ಡ್ ಇದ್ದರೆ ಮಾತ್ರ ಚಿಕಿತ್ಸೆ ನೀಡಬಹುದು ಎಂದು ನರ್ಸ್‌ಗಳು ಹೇಳಿದ್ದಾರೆ. ಆಧಾರ್ ಕಾರ್ಡ್ ತೋರಿಸಿದಾಗ ಮಗುವಿನ ತಾಯಿಗೆ 17 ವರ್ಷ ಎಂದು ತಿಳಿದುಬಂದಿದೆ. ನಂತರ ಮಕ್ಕಳ ಕಲ್ಯಾಣ ಸಂಸ್ಥೆಗೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ತಾಯಿ ಮತ್ತು ಆಕೆಯ ಪ್ರಿಯಕರ ಮುತ್ತುಕುಮಾರ್ ವಿರುದ್ಧ ಪುಳಿಯಂತೋಪೆ ಮಹಿಳಾ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಪುಳಿಯಂತೋಪೆಯ ಮುತ್ತುಕುಮಾರ್ (50) ಮತ್ತು ಆತನ ತಾಯಿಯನ್ನು ಪೊನ್ನೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಗೆ ನೀಡಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.