ನವದೆಹಲಿ: ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆಯು ಆರ್ಥಿಕ ಸುಧಾರಣೆಗಳ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದು, ಈ ಮೂರು ಕಾನೂನುಗಳ ಅನುಪಸ್ಥಿತಿಯಲ್ಲಿ ಕೃಷಿ ಕ್ಷೇತ್ರ ಸುಧಾರಿಸಲು ಪರ್ಯಾಯ ಸಲಹೆಗಳನ್ನು ಸೂಚಿಸಿದ್ದಾರೆ.
ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ಕೃಷಿ ಕ್ಷೇತ್ರ ಸುಧಾರಣೆಗೆ ಐದು ಸಲಹೆಗಳನ್ನು ನೀಡಿದ್ದಾರೆ. ರೈತರ ಉತ್ಪನ್ನದ ಶೇಕಡಾವಾರು ಖರೀದಿಯ ಖಾತರಿ, ಎಲೆಕ್ಟ್ರಾನಿಕ್ ಮಂಡಿಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ರಾಷ್ಟ್ರೀಯ ಬೆಲೆಯಾಗಿ ಪರಿಗಣಿಸುವುದು (ಇ-ನ್ಯಾಮ್), ಬೆಳೆ ವ್ಯರ್ಥವಾಗುವುದನ್ನು ತಡೆಯಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಮಂಡಿಗಳ ಬಲವರ್ಧನೆ ಈ ಐದು ಸಲಹೆಗಳಲ್ಲಿ ಪ್ರಮುಖವಾಗಿವೆ.
ಗುರು ಪುರಬ್ ಎಂದು ಕರೆಯಲ್ಪಡುವ ಮೊದಲ ಸಿಖ್ ಗುರು ಗುರುನಾನಕ್ ಜಯಂತಿ ದಿನದಂದೇ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಜೊತೆಗೆ, ಸಾರ್ವಜನಿಕ ಸಂಗ್ರಹಣೆಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸುವ ಕ್ರಮಗಳು ಸೇರಿದಂತೆ ಇತರ ಬಾಕಿ ಇರುವ ಸಮಸ್ಯೆಗಳನ್ನು ನಿರ್ಧರಿಸಲು ಸಮಿತಿಯನ್ನು ರಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ರೈತರಿಗೆ ತಮ್ಮ ಮನೆಗಳಿಗೆ ಮರಳುವಂತೆ ಪ್ರಧಾನಿ ಮನವಿ ಮಾಡಿದರೂ ಕೆಲವು ರೈತ ಸಂಘಟನೆಗಳನ್ನು, ವಿಶೇಷವಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರೈತ ಸಂಘಟನೆಗಳ ಜಂಟಿ ವೇದಿಕೆ) ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯ ಬೇಡಿಕೆ ಸೇರಿ ಹಲವು ಸಮಸ್ಯೆಗಳ ಈಡೇರಿಸುವ ವರೆಗೆ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿವೆ.
ಇದೇ ವಿಚಾರವಾಗಿ ಮಾತನಾಡಿರುವ ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಘೋಷ್, ಎಂಎಸ್‌ಪಿ ತಕ್ಷಣಕ್ಕೆ ಸ್ಥಗಿತವಾಗುವುದಿಲ್ಲ. ಇಂದು ಒಂದು ಟ್ರಿಕ್ಕಿ ಸಮಸ್ಯೆಯಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದರೆ, ಧಾನ್ಯಗಳ ಬೆಲೆ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಖಾಸಗಿ ಖರೀದಿದಾರರು ಮಾರಾಟಗಾರರೊಂದಿಗೆ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಾರೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿ ಮಂಡಿ ವ್ಯವಸ್ಥೆಯ ಮಾರುಕಟ್ಟೆ ಕೊರತೆ ಇದೆ ಎಂದಿದ್ದಾರೆ.
ಖರೀದಿ ಪ್ರಮಾಣವನ್ನು ಖಾತರಿಪಡಿಸಿ, ಬೆಲೆಯನ್ನಲ್ಲ: SBI ಸಂಶೋಧನೆ
ಸರ್ಕಾರ ಎರಡು ವಿಷಯಗಳನ್ನು ಪರಿಗಣಿಸಬೇಕು ಎಂದಿರುವ ಘೋಷ್, ರೈತರು ಕನಿಷ್ಠ ಬೆಂಬಲ ಬದಲಿಗೆ, ಸರ್ಕಾರವು ಕನಿಷ್ಠ ಐದು ವರ್ಷಗಳ ಅವಧಿಗೆ ಶೇಕಡಾವಾರು ಬೆಳೆ ಖರೀದಿಯ ಖಾತ್ರಿಯ ಷರತ್ತುಗಳನ್ನು ಸೇರಿಸಬಹುದು. ಪ್ರಸ್ತುತ ಸಂಗ್ರಹಿಸಲಾಗುತ್ತಿರುವ ಬೆಳೆಗಳ ಉತ್ಪಾದನೆಯ ಶೇಕಡಾವಾರು ಸಂಗ್ರಹಣೆಯು ಸುರಕ್ಷಿತವಾಗಿದೆ. 2014ರ ಆರ್ಥಿಕ ವರ್ಷದಲ್ಲಿ ಶೇ.26 ರಷ್ಟಿದ್ದ ಗೋಧಿ ಉತ್ಪಾದನೆ 2021ಕ್ಕೆ ಶೇ.36ಕ್ಕೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಭತ್ತದ ಸರಾಸರಿ ಸಂಗ್ರಹವು ಶೇ.30 ರಿಂದ 48ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಬರೆದಿದ್ದಾರೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ (eNAM) ಹರಾಜಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿವರ್ತಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು. ಕೃಷಿ ಇಲಾಖೆ, ಸಹಕಾರ ಇಲಾಖೆ ಹಾಗೂ ಎಸ್‌ಬಿಐ ಸಂಶೋಧನೆ ನಡೆಸಿದ್ದು, ನವೆಂಬರ್ 19 ರವರೆಗೆ ಇ-ನಾಮ್‌ನಲ್ಲಿ 9 ಬೆಳೆಗಳಿಗೆ ಸರಾಸರಿ ಬೆಲೆಯು ಎಂಎಸ್‌ಪಿಗಿಂತ ಗಣನೀಯವಾಗಿ ಕಡಿಮೆಯಾಗಿದೆ ಎಂತಲೂ ಘೋಷ್ ತಿಳಿಸಿದ್ದಾರೆ.
ಜೋಳ, ಬಾರ್ಲಿ, ಮೆಕ್ಕೆಜೋಳ, ರಾಗಿ ಹಾಗೂ ಭತ್ತ ಈ 9 ಬೆಳಗಳಲ್ಲಿ ಪ್ರಮುಖವಾಗಿವೆ. ಆದರೆ ಇ-ನಾಮ್‌ನಲ್ಲಿನ ಮಾದರಿ ಬೆಲೆಯಲ್ಲಿ ಸೋಯಾಬೀನ್ ಎಎಸ್‌ಪಿ ಬೆಲೆಗಿಂತ ಗಣನೀಯವಾಗಿ ಹೆಚ್ಚಾಗಿದೆ.
ಮಂಡಿ ವ್ಯವಸ್ಥೆಯನ್ನು ಬಲಪಡಿಸಿ:
ಎಪಿಎಂಸಿ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸುವುದನ್ನು ಸರ್ಕಾರ ಮುಂದುವರಿಸಬೇಕು. ನಮ್ಮ ಅಂದಾಜಿನ ಪ್ರಕಾರ, ಸಿರಿಧಾನ್ಯಗಳಿಗೆ ಕೊಯ್ಲು ಮತ್ತು ಸುಗ್ಗಿಯ ನಂತರದ ನಷ್ಟದಿಂದಾಗಿ ಸುಮಾರು 27,000 ಕೋಟಿ ರೂಪಾಯಿಗಳ ವಿತ್ತೀಯ ನಷ್ಟವಾಗಿದೆ. ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳಿಗೆ ಕ್ರಮವಾಗಿ 10,000 ಕೋಟಿ ಮತ್ತು 5,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಎಸ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಗುತ್ತಿಗೆ ಕೃಷಿ ಸಂಸ್ಥೆ ಸ್ಥಾಪನೆಯ ಸಲಹೆ ನೀಡಿರುವ ಘೋಷ್, ಬೆಲೆ ಅನ್ವೇಷಣೆಯನ್ನು ಮೇಲ್ವಿಚಾರಣೆ ಮಾಡುವ ವಿಶೇಷ ಹಕ್ಕನ್ನು ಈ ಸಂಸ್ಥೆ ಹೊಂದಿರುತ್ತದೆ. ಬೆಳೆಗಾರರಿಗೆ ಮಾರುಕಟ್ಟೆ ಮತ್ತು ಬೆಲೆ ಸ್ಥಿರತೆಯೊಂದಿಗೆ ಪೂರೈಕೆ ಸರಪಳಿಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಮತ್ತು ತಾಂತ್ರಿಕ ನೆರವು ನೀಡುವ ಮೂಲಕ ಅನೇಕ ದೇಶಗಳಲ್ಲಿ ಒಪ್ಪಂದದ ಕೃಷಿಯು ಪ್ರಮುಖವಾಗಿದೆ ಎಂದು ಅವರು ಹೇಳುತ್ತಾರೆ.