ಲಂಡನ್: ಸಾನಿಯಾ ಮಿರ್ಜಾ ಮತ್ತು ಅವರ ಜೊತೆಗಾರ ಮೇಟ್ ಪಾವಿಕ್ ಅವರು ನಾಲ್ಕನೇ ಶ್ರೇಯಾಂಕದ ಕೆನಡಾ-ಆಸ್ಟ್ರೇಲಿಯನ್ ಜೋಡಿಯಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಮತ್ತು ಜಾನ್ ಪೀರ್ಸ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ವಿಂಬಲ್ಡನ್ 2022 ರ ಸೆಮಿಫೈನಲ್ಗೆ ಕಾಲಿಟ್ಟಿದ್ದಾರೆ.
ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಚ್ 6-4, 3-6, 7-5 ಸೆಟ್‌ಗಳಿಂದ ಗೇಬ್ರಿಯೆಲಾ ಡಬ್ರೊವ್ಸ್ಕಿ ಮತ್ತು ಜಾನ್ ಪಿಯರ್ಸ್ ಅವರನ್ನು ಸೋಲಿಸಿದ್ದಾರೆ. ಈ ಇಂಡೋ-ಕ್ರೊಯೇಟ್ ಜೋಡಿ ರಾಬರ್ಟ್ ಫರಾ ಮತ್ತು ಜೆಲೆನಾ ಒಸ್ಟಾಪೆಂಕೊ ಅವರನ್ನು ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ವಿಂಬಲ್ಡನ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದು, ಸಾನಿಯಾ ಮತ್ತು ಮೇಟ್ ಜೋಡಿ ಟೂರ್ನಿಯಲ್ಲಿ ಆರನೇ ಶ್ರೇಯಾಂಕಿತರಾಗಿದ್ದಾರೆ.
-
Watch | Quarter Final (MD) of Wimbledon Tennis Tournament
— Prasar Bharati News Services पी.बी.एन.एस. (@PBNS_India) July 4, 2022 " class="align-text-top noRightClick twitterSection" data="
One last time at @Wimbledon! India's tennis star, @MirzaSania in action today at #Wimbledon2022
Catch her LIVE in action on DD free Dish Home Channel. pic.twitter.com/AhdX4IeSdC
">Watch | Quarter Final (MD) of Wimbledon Tennis Tournament
— Prasar Bharati News Services पी.बी.एन.एस. (@PBNS_India) July 4, 2022
One last time at @Wimbledon! India's tennis star, @MirzaSania in action today at #Wimbledon2022
Catch her LIVE in action on DD free Dish Home Channel. pic.twitter.com/AhdX4IeSdCWatch | Quarter Final (MD) of Wimbledon Tennis Tournament
— Prasar Bharati News Services पी.बी.एन.एस. (@PBNS_India) July 4, 2022
One last time at @Wimbledon! India's tennis star, @MirzaSania in action today at #Wimbledon2022
Catch her LIVE in action on DD free Dish Home Channel. pic.twitter.com/AhdX4IeSdC
ಈ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಗ್ಯಾಬ್ರಿಯೆಲ್ ಡಬ್ರೊವ್ಸ್ಕಿ (ಕೆನಡಾ) ಮತ್ತು ಜಾನ್ ಪಿಯರ್ಸ್ (ಆಸ್ಟ್ರೇಲಿಯಾ) ಅವರನ್ನು ಸೋಲಿಸಿದೆ.
2022 ತನ್ನ ವೃತ್ತಿಜೀವನದ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಈಗಾಗಲೇ ಘೋಷಿಸಿದ್ದು, ಈ ಪಂದ್ಯ ಮುಗಿದ ಬಳಿಕ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ.
2015ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಸೆಮಿಫೈನಲ್ ತಲುಪುವ ಮೂಲಕ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ. ಮತ್ತೊಂದೆಡೆ, ಫ್ರೆಂಚ್ ಓಪನ್ ಸೆಮಿಫೈನಲ್ ಆಟಗಾರ ರೋಹನ್ ಬೋಪಣ್ಣ ಅವರು ವಿಂಬಲ್ಡನ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಬೃಹತ್ ಟಾರ್ಗೆಟ್ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್.. ಭಾರತದ ವಿರುದ್ಧ ಹೊಸ ದಾಖಲೆ ಬರೆದ ಆಂಗ್ಲರು