ಕರ್ನಾಲ್(ಹರಿಯಾಣ): ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಮುಂದುವರೆಸಿದ್ದಾರೆ. ಸರ್ಕಾರ ಕಾನೂನುಗಳನ್ನು ಹಿಂಪಡೆಯುವವರೆಗೆ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸರ್ಕಾರದೊಂದಿಗೆ ಕೃಷಿ ಕಾಯ್ದೆ ಸಂಬಂಧಿ ಮಾತುಕತೆಗಳು ವಿಫಲಗೊಂಡ ಬಳಿಕ ಕರ್ನಾಲ್ನಲ್ಲಿರುವ ಮಿನಿ ಸೆಕ್ರೆಟರಿಯೇಟ್ ಬಳಿ ಸಂಯುಕ್ತ ಕಿಸಾನ್ ಮೋರ್ಚಾದ ರೈತರು ಧರಣಿ ನಡೆಸಲು ಮುಂದಾದರು. ಈ ವೇಳೆ, ಪೊಲೀಸರು ಅವರನ್ನು ತಡೆದಿದ್ದಾರೆ. ನಂತರ ಮಿನಿ ಸೆಕ್ರೆಟರಿಯೇಟ್ ಹೊರಗೆ, ರಸ್ತೆ ಬದಿಯಲ್ಲಿ ಶಿಬಿರಗಳನ್ನು ಸ್ಥಾಪಿಸಿ, ರೈತರು ಅಲ್ಲಿಯೇ ಉಳಿದುಕೊಂಡಿದ್ದಾರೆ.
ಈ ವೇಳೆ ಈಟಿವಿ ಭಾರತದೊದಿಗೆ ಮಾತನಾಡಿದ ಅವರು, ಮೂರೂ ಕೃಷಿ ಕಾನೂನುಗಳು ರದ್ದಾಗಬೇಕು. ನಾವು ಅಲ್ಲಿಯವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದಿದ್ದು, ಕರ್ನಾಲ್ನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಯೋಜಿತವಾಗಿದ್ದ ಪೊಲೀಸರು ರೈತರನ್ನು ಥಳಿಸಿದ್ದಾರೆ ಎಂದು ಇದೇ ವೇಳೆ ಅವರು ಆರೋಪಿಸಿದ್ದಾರೆ.
ಭಾರತವು ಮಾತ್ರ ಕೃಷಿ ಪ್ರಧಾನ ದೇಶವಾಗಿದೆ ಮತ್ತು ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದಿರುವ ಸರ್ಕಾರವು ಅವರಿಗೆ ಅನ್ಯಾಯ ಮಾಡುತ್ತಿದೆ ಎಂದು ಹಿರಿಯ ರೈತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Just ಕಮೆಂಟ್ನಿಂದ ಕನಸು ನನಸಾಯ್ತು..: ಜ್ಯುವೆಲ್ಲರಿ ಕಂಪನಿಯ 'ಹೃದಯ' ಮಿಡಿದ ಕತೆ!