ETV Bharat / bharat

ಮುಂಬೈ ಪೊಲೀಸರ 'ಕಳಂಕಿತ ಚಿತ್ರಣ' ಇನ್ಮುಂದೆ ಸುಧಾರಿಸಲಿದೆ: ಹೊಸ ಆಯುಕ್ತರ ವಿಶ್ವಾಸ - ಮಹಾರಾಷ್ಟ್ರ-ಮುಂಬೈ ಪೊಲೀಸ್

ಮಹಾರಾಷ್ಟ್ರ-ಮುಂಬೈ ಪೊಲೀಸ್ ಪಡೆ ಬಗ್ಗೆ ಕಳೆದುಹೋದ ವಿಶ್ವಾಸಾರ್ಹತೆ ಪುನಃಸ್ಥಾಪನೆಯಾಗಲಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರಾಳೆ ಹೇಳಿದ್ದಾರೆ.

Hemant Nagrale
ಹೇಮಂತ್ ನಾಗ್ರೇಲ್
author img

By

Published : Mar 18, 2021, 1:17 PM IST

ಮುಂಬೈ (ಮಹಾರಾಷ್ಟ್ರ): ಮುಂಬೈ ಪೊಲೀಸರ ಮೇಲಿರುವ 'ಕಳಂಕಿತ ಚಿತ್ರಣ' ಸುಧಾರಿಸಲಿದ್ದು, ಅವರ ಮೇಲಿನ ವಿಶ್ವಾಸಾರ್ಹತೆ ಮರುಸ್ಥಾಪನೆಯಾಗಲಿದೆ ಎಂದು ಹೊಸದಾಗಿ ನೇಮಕಗೊಂಡ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರಾಳೆ ಭರವಸೆ ನೀಡಿದ್ದಾರೆ.

ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್​ ಬೀರ್ ಸಿಂಗ್ ಅವರನ್ನು ರಾಜ್ಯ ಗೃಹರಕ್ಷಕ ದಳಕ್ಕೆ ಮಹಾರಾಷ್ಟ್ರ ಸರ್ಕಾರ ವರ್ಗಾಯಿಸಿದ ಬಳಿಕ ಈ ಹುದ್ದೆಯ ಜವಾಬ್ದಾರಿಯನ್ನು ಹೇಮಂತ್ ನಾಗರಾಳೆ​ ವಹಿಸಿಕೊಂಡಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ಮುಂಬೈ ಪೊಲೀಸರು ಕಠಿಣ ಸಮಯ ಎದುರಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಹಕಾರದಿಂದ ಈ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಜ್ಯ ಸರ್ಕಾರ ನನ್ನನ್ನು ನೇಮಿಸಿದೆ ಎಂದು ಹೇಮಂತ್ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನಗಳಲ್ಲಿ ಕೊರೊನಾ ನಿಯಮ ಪಾಲಿಸಿದ 7 ಮಂದಿ ಪ್ರಯಾಣಿಕರು ಡಿ - ಬೋರ್ಡ್

ಸುಶಾಂತ್​ ಸಿಂಗ್​ ಸಾವಿನ ಪ್ರಕರಣ, ಡ್ರಗ್​ ಕೇಸ್​, ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಕಾರು ಪತ್ತೆ ಪ್ರಕರಣ ಸೇರಿದಂತೆ ಅನೇಕ ಕೇಸ್​ಗಳಲ್ಲಿ ಮುಂಬೈ ಪೊಲೀಸರ ವಿರುದ್ಧ ಆರೋಪಗಳು ಕೇಳಿ ಬಂದಿವೆ.

ಸ್ಫೋಟಕ ಕಾರು ಪತ್ತೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೇಮಂತ್ ನಾಗರಾಳೆ, ಎನ್‌ಐಎ ಮತ್ತು ಎಟಿಎಸ್ ತನಿಖೆ ನಡೆಸುತ್ತಿವೆ. ಮನ್ಸುಖ್ ಹಿರೇನ್​ ಸಾವು ಹಾಗೂ ಸಚಿನ್​ ವಾಝೆ ಬಗ್ಗೆ ಸರಿಯಾದ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರ-ಮುಂಬೈ ಪೊಲೀಸ್ ಪಡೆ ಬಗ್ಗೆ ಕಳೆದುಹೋದ ವಿಶ್ವಾಸಾರ್ಹತೆ ಪುನಃಸ್ಥಾಪನೆಯಾಗಲಿದೆ ಎಂದು ಅವರು ಇದೇ ವೇಳೆ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.