ETV Bharat / bharat

ಹಿಂಡಿನಿಂದ ಬೇರ್ಪಟ್ಟ ಹೆಣ್ಣಾನೆ.. ಅರಣ್ಯ ಸಿಬ್ಬಂದಿ ಮೇಲೆ ರೋಷಾವೇಷ ತೋರಿಸಿದ ಗಜರಾಣಿ! - ತಮಿಳುನಾಡಿನಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ

ತಮಿಳುನಾಡಿನ ಕೊಯಮತ್ತೂರು ಬಳಿ ಅರಣ್ಯ ಸಿಬ್ಬಂದಿ ಮೇಲೆ ಹೆಣ್ಣು ಕಾಡಾನೆಯೊಂದು ದಾಳಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Wild Female Elephant attack forest workers in Coimbatore, Elephant attack forest worker in Tamil Nadu, Wild Female Elephant attack news, ಕೊಯಮತ್ತೂರಿನಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಕಾಡು ಹೆಣ್ಣು ಆನೆ ದಾಳಿ, ತಮಿಳುನಾಡಿನಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ, ಕಾಡು ಹೆಣ್ಣು ಆನೆ ದಾಳಿ ಸುದ್ದಿ,
ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ
author img

By

Published : Jun 15, 2022, 1:56 PM IST

ಕೊಯಮತ್ತೂರು: ಹಿಂಡಿನಿಂದ ಬೇರ್ಪಟ್ಟ ಹೆಣ್ಣು ಕಾಡಾನೆಯೊಂದು ಗ್ರಾಮದಲ್ಲಿ ಸುತ್ತಾಡಿ ಭಯದ ವಾತಾವರಣ ನಿರ್ಮಿಸಿದಲ್ಲದೇ ಅರಣ್ಯ ವೀಕ್ಷಕನ ಮೇಲೆ ದಾಳಿ ಮಾಡಿರುವ ಘಟನೆ ತಿತಿಪಾಳ್ಯಂ ಗ್ರಾಮದಲ್ಲಿ ನಡೆದಿದೆ.

ತಿತಿಪಾಳ್ಯಂ ಗ್ರಾಮ, ಕಲಮಪಾಳ್ಯಂ ಗ್ರಾಮ ಮತ್ತು ಅಣ್ಣೈ ವೇಲಂಕಣಿ ಪ್ರದೇಶದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಆನೆಗಳು ಬೀಡುಬಿಟ್ಟಿರುವ ಕಾರಣ ಮನೆಯಿಂದ ಹೊರಗೆ ಬಾರದಂತೆ ಅರಣ್ಯ ಇಲಾಖೆ ಸಿಬ್ಬಂದಿ ತಿತಿಪಾಳ್ಯ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಸೂಚನೆ ಕೂಡಾ ನೀಡಿತ್ತು.

ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ ದೃಶ್ಯ

ಓದಿ: ಕಣ್ಮರೆಯಾದ ಭೋಗೇಶ್ವರ: ‘ಶಕ್ತಿಮಾನ್​’ ದಂತ ಮಾತ್ರ ಅಜರಾಮರ..!?

ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುತ್ತಿದ್ದ ಸಮಯದಲ್ಲಿ ಹೆಣ್ಣಾನೆಯೊಂದು ಹಿಂಡಿನಿಂದ ಬೇರ್ಪಟ್ಟಿದೆ. ಈ ವೇಳೆ ಗ್ರಾಮದಲ್ಲಿ ಆನೆ ಸುತ್ತಾಡಿ ಭಯದ ವಾತಾವರಣ ಸೃಷ್ಟಿಸಿತ್ತು. ಅಷ್ಟೇ ಅಲ್ಲದೇ ಅರಣ್ಯ ವೀಕ್ಷಕನ ಮೇಲೆಯೇ ದಾಳಿ ನಡೆಸಿ ತನ್ನ ಕೌರ್ಯ ಹೊರ ಹಾಕಿತ್ತು. ಈ ಎಲ್ಲ ದೃಶ್ಯಗಳು ವ್ಯಕ್ತಿಯೊಬ್ಬರು ತಮ್ಮ ಮನೆಯ ಟೇರಸ್​ ಮೇಲೆ ನಿಂತುಕೊಂಡು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಷ್ಟೇ ಅಲ್ಲ ಅರಣ್ಯ ವೀಕ್ಷಕನ ಮೇಲೆ ದಾಳಿ ಮಾಡುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸುವಲ್ಲಿ ಸಹಾಯ ಮಾಡಿದ್ದಾರೆ.

ಆನೆ ದಾಳಿಯಿಂದ ಅರಣ್ಯ ವೀಕ್ಷಕನಿಗೆ ಗಾಯಗಳಾಗಿದ್ದು, ಕೊಯಮತ್ತೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಆನೆಗಳನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆಯನ್ನು ಅರಣ್ಯ ಮುನ್ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.