ETV Bharat / bharat

ಟೋಕಿಯೋ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್: ಶುಭಹಾರೈಸಿದ ಪತ್ನಿ ರಿತು - ಟೋಕಿಯೋ

ಪ್ಯಾರಾಲಿಂಪಿಕ್ಸ್​ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ - 4 ಈವೆಂಟ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡಿದ ಸುಹಾಸ್​ ಯತಿರಾಜ್ ಮತ್ತಷ್ಟು ಸಾಧನೆ ಮಾಡಲಿ ಎಂದು ಪತ್ನಿ ರಿತು ಶುಭ ಕೋರಿದ್ದಾರೆ.

tokyo-paralympics
ಬೆಳ್ಳಿ ಗೆದ್ದ ಸುಹಾಸ್- ಪತ್ನಿ ರಿತು
author img

By

Published : Sep 6, 2021, 8:54 AM IST

Updated : Sep 6, 2021, 1:40 PM IST

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ - 4 ಈವೆಂಟ್‌ನಲ್ಲಿ ಬೆಳ್ಳಿ ಗೆದ್ದ ಸುಹಾಸ್​ ಯತಿರಾಜ್​ಗೆ ಪತ್ನಿ ರಿತು ಶುಭಕೋರಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದರು.

ಇನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್‌ವೈ ಅವರ ಪತ್ನಿ ರಿತು ಸುಹಾಸ್, ಗಾಜಿಯಾಬಾದ್‍ನಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿದ್ದಾರೆ. ಪತಿಯ ಸಾಧನೆ ಬಗ್ಗೆ ಮಾತನಾಡಿದ ಅವರು, "ಸುಹಾಸ್​ ಪದಕ ಗೆದ್ದ ಕ್ಷಣ ನನಗೆ ಮಾತ್ರವಲ್ಲ ಇಡೀ ದೇಶಕ್ಕೆ ಸಂತೋಷದ ಕ್ಷಣವಾಗಿದೆ. 6 ವರ್ಷಗಳಲ್ಲಿ ನನ್ನ ಪತಿ ಆಟ ಆಡುವುದನ್ನು ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ, ಪ್ಯಾರಾಲಿಂಪಿಕ್ಸ್​ನಲ್ಲಿ ಆಟವನ್ನು ನೋಡುವಾಗ ಆತ ತನ್ನನ್ನು ತಾನು ತೊಡಗಿಸಿಕೊಂಡ ರೀತಿ ಬಗ್ಗೆ ನನಗೆ ಮನವರಿಕೆ ಆಯಿತು" ಎಂದು ಹೇಳಿದರು.

"ನನ್ನ ಪತಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಸಾಧನೆ ಮಾಡಲು ಸಾಧ್ಯವಾಯಿತು. ಇನ್ನಷ್ಟು ಸಾಧನೆ ಮಾಡಲಿ. ಪತ್ನಿಯಾಗಿ ಅವರ ಸಾಧನೆಗಾಗಿ ಪ್ರಾರ್ಥಿಸುತ್ತೇನೆ" ಎಂದರು.

ಸುಹಾಸ್​ ಮೂಲತಃ ಹಾಸನದವರು

ಇನ್ನು ಸುಹಾಸ್​ ಮೂಲತಃ ಹಾಸನದವರಾದರೂ, ಹುಟ್ಟಿ-ಬೆಳೆದಿದ್ದೆಲ್ಲ ಶಿವಮೊಗ್ಗದಲ್ಲಿ. ತಂದೆ ಗಾಜನೂರು ಜಲಾಶಯದಲ್ಲಿ ಇಂಜಿನಿಯರ್ ಆಗಿದ್ದರು. ಹೀಗಾಗಿ, ಇವರ ಇಡೀ ಕುಟುಂಬ ಶಿವಮೊಗ್ಗಕ್ಕೆ ಬಂದು ನೆಲೆಸಿತ್ತು. ಬಳಿಕ ಸುಹಾಸ್ ಪ್ರಾಥಮಿಕ, ಪದವಿ ಪೂರ್ವ ಶಿಕ್ಷಣವನ್ನೂ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲೇ ಪೂರೈಸಿದರು. ಇದೀಗ ಪ್ಯಾರಾಲಿಂಪಿಕ್​ನಲ್ಲಿ ಬೆಳ್ಳಿಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

Last Updated : Sep 6, 2021, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.