ETV Bharat / bharat

ಮತ್ತೆ ಸಂಭೋಗ ಹೊಂದಲು ನಿರಾಕರಿಸಿದ ಪತ್ನಿ: ಕೋಪದಲ್ಲಿ ಕೊಲೆಗೈದ ಪಾಪಿ ಪತಿ - ಆರೋಪಿ ಪತಿ ಅನ್ವರ್‌

ಪತ್ನಿ ತನ್ನೊಂದಿಗೆ ಮತ್ತೊಮ್ಮೆ ಸಂಭೋಗ ಹೊಂದಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕುಪಿತ ಗಂಡ ಆಕೆಯನ್ನು ಕೊಲೆ ಮಾಡಿದ್ದಾನೆ.

ಕೊಲೆ
ಕೊಲೆ
author img

By

Published : Dec 9, 2022, 8:24 PM IST

ಅಮ್ರೋಹ (ಉತ್ತರ ಪ್ರದೇಶ): ಪತ್ನಿಯು ಗಂಡನೊಂದಿಗೆ ಮತ್ತೊಮ್ಮೆ ಸಂಭೋಗ ಹೊಂದಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಆತ ಕೋಪಗೊಂಡು ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ. ಕೊಲೆಗೈದ ನಂತರ ಆರೋಪಿ ಪತಿ ಆಕೆಯ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಎಸೆದಿದ್ದಾನೆ.

ಪೊಲೀಸರ ಪ್ರಕಾರ, ದಂಪತಿ ಅಮ್ರೋಹಾದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಗಿನ ಜಾವ 3.45ರ ಸುಮಾರಿಗೆ ಆರೋಪಿ ಪತಿ ಅನ್ವರ್ ತನ್ನ ಪತ್ನಿಯನ್ನು ಮನೆಯ ಕೆಳಗಿರುವ ನೆಲಮಾಳಿಗೆಗೆ ಕರೆಸಿಕೊಂಡು ಸಂಭೋಗ ಬೆಳೆಸಿದ್ದಾನೆ ಎನ್ನಲಾಗ್ತಿದೆ. ಸ್ವಲ್ಪ ಸಮಯದ ನಂತರ ಪತಿ ಮತ್ತೆ ಸಂಭೋಗಕ್ಕಾಗಿ ಪತ್ನಿಯನ್ನು ಪೀಡಿಸಿದ್ದು ಆಕೆ ನಿರಾಕರಿಸಿದ್ದಾಳೆ.

ಇದರಿಂದ ಕುಪಿತಗೊಂಡು ಹಗ್ಗದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಗೋಣಿ ಚೀಲದಲ್ಲಿ ಹಾಕಿ 50 ಕಿಲೋಮೀಟರ್ ದೂರದ ಮೊರಾದಾಬಾದ್ ಗ್ರಾಮದ ಬಳಿಯ ರಸ್ತೆ ಪಕ್ಕ ಎಸೆದಿದ್ದಾನೆ.

ಇದನ್ನೂ ಓದಿ: ಪತ್ನಿ ಕೊಲೆ.. ಹಳ್ಳದಲ್ಲಿ ಗುಂಡಿ ತೋಡಿ ಗರ್ಭಿಣಿಯ ಕಥೆ ಮುಗಿಸಿದ ಗಂಡ

ಮೃತ ಮಹಿಳೆಯ ತಾಯಿ ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗೆ ಹುಡುಕುವಾಗ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಆಕೆಯ ಪತಿಯನ್ನು ವಿಚಾರಣೆ ನಡೆಸಿದಾಗ, ಆತ ನಡೆದ ಸಂಗತಿ ಬಾಯ್ಬಿಟ್ಟಿದ್ದಾನೆ.

ಅನ್ವರ್‌ನನ್ನು ಪೊಲೀಸರು ಬಂಧಿಸಿದಾಗ, ಮದುವೆಯಾದಾಗಿನಿಂದ ಪತ್ನಿಯೊಂದಿಗೆ ಮನಸ್ತಾಪ ಇತ್ತು ಎಂದು ಹೇಳಿದ್ದಾನೆ. ಮದುವೆಯಾಗಿ ಒಂಬತ್ತು ವರ್ಷವಾಗಿದ್ದು, ಮೂವರು ಮಕ್ಕಳಿದ್ದಾರೆ. ಸೋಮವಾರ ಬೆಳಗಿನ ಜಾವ 3:45ರ ಸುಮಾರಿಗೆ ಸಂಭೋಗ ಹೊಂದಿದ್ದು, ಬಳಿಕ ಮತ್ತೆ ಕೇಳಿದಾಗ ಆಕೆ ನಿರಾಕರಿಸಿದಳು. ಈ ಕಾರಣದಿಂದ ಕೊಂದಿರುವುದಾಗಿ ಹೇಳಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.