ETV Bharat / bharat

ಬಾರ್ಡರ್ ಗವಾಸ್ಕರ್ ಟ್ರೋಫಿ: ಇಶಾನ್ ಕಿಶನ್ ಅಥವಾ ಕೆಎಸ್ ಭರತ್.. ಯಾರಾಗಲಿದ್ದಾರೆ ಕೀಪರ್?

ಇದೇ ಫೆಬ್ರವರಿ 9 ರಂದು ಬಾರ್ಡರ್ ಗವಾಸ್ಕರ್ ಟ್ರೋಫಿ 2023 ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಇಶಾನ್ ಕಿಶನ್ ಅಥವಾ ಕೆಎಸ್ ಭರತ್ ಇಬ್ಬರಲ್ಲಿ ಯಾರನ್ನು ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

wicket-keeper-selection-on-turning-pitch-in-nagpur-ishan-kishan-or-ks-bharat

author img

By

Published : Feb 7, 2023, 4:10 PM IST

ನವದೆಹಲಿ: ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ 2023ಕ್ಕೂ ಮುನ್ನ ತಂಡದಲ್ಲಿ ವಿಕೆಟ್ ಕೀಪರ್ ಆಯ್ಕೆಯ ಬಗ್ಗೆ ಚಿಂತನ ಮಂಥನ ಮುಂದುವರೆದಿದ್ದು, ಕೆ.ಎಸ್. ಭರತ್ ಮತ್ತು ಇಶಾನ್ ಕಿಶನ್ ನಡುವೆ ಒಬ್ಬರಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸ್ಪಿನ್ ವಿಕೆಟ್‌ನಲ್ಲಿ ಕೆಎಲ್ ರಾಹುಲ್ ಅವರನ್ನು ವಿಕೆಟ್ ಹಿಂದೆ ನಿಲ್ಲಿಸಿ ತಂಡ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸದೇ ಇರಬಹುದು. ಹೀಗಾಗಿ ಕೆ.ಎಸ್. ಭರತ್ ಅವರೇ ವಿಕೆಟ್​ ಕೀಪರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎನಿಸುತ್ತಿದ್ದಾರೆ.

ಮೂಲತಃ ಆಂಧ್ರಪ್ರದೇಶದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿರುವ ಶ್ರೀಕರ್ ಭರತ್ ಅವರ ಪ್ರಥಮ ದರ್ಜೆ ಪಂದ್ಯಗಳ ದಾಖಲೆಯ ಪ್ರಕಾರ, 86 ಪಂದ್ಯಗಳ 135 ಇನ್ನಿಂಗ್ಸ್‌ಗಳಲ್ಲಿ 4,707 ರನ್ ಗಳಿಸಿದ್ದಾರೆ. 308 ರನ್‌ಗಳ ತ್ರಿವಳಿ ಶತಕ ಸೇರಿದಂತೆ 11 ಬಾರಿ ಅಜೇಯರಾಗಿ ಉಳಿದಿದ್ದಾರೆ. ಇದು ಭರತ್ ಅವರ ಗರಿಷ್ಠ ಸ್ಕೋರ್ ಆಗಿದೆ. ಭರತ್ 9 ಶತಕ ಮತ್ತು 27 ಅರ್ಧ ಶತಕಗಳನ್ನು ಒಳಗೊಂಡಂತೆ 37.95 ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ. ವಿಕೆಟ್ ಹಿಂದೆಯೂ ಅವರ ಕೆಲಸ ಅದ್ಭುತವಾಗಿದೆ. ಭರತ್ 296 ಕ್ಯಾಚ್‌ಗಳನ್ನು ತೆಗೆದುಕೊಂಡಿರುವ ಜೊತೆಗೆ 35 ಆಟಗಾರರನ್ನು ಸ್ಟಂಪ್ ಮಾಡಿದ್ದಾರೆ.

ಮತ್ತೊಂದೆಡೆ ಇಶಾನ್ ಕಿಶನ್ ಅವರ ದಾಖಲೆಯನ್ನು ನೋಡಿದರೆ, ಈ ಎಡಗೈ ಬ್ಯಾಟ್ಸ್‌ಮನ್ 48 ಪಂದ್ಯಗಳ 82 ಇನ್ನಿಂಗ್ಸ್‌ಗಳಲ್ಲಿ ಒಟ್ಟು 2,985 ರನ್ ಗಳಿಸಿದ್ದಾರೆ. 5 ಬಾರಿ ಅಜೇಯರಾಗಿ ಉಳಿದಿದ್ದಾರೆ, ಇದರಲ್ಲಿ 273 ರನ್‌ಗಳ ದ್ವಿಶತಕ ಅವರ ಗರಿಷ್ಠ ಸ್ಕೋರ್ ಆಗಿದೆ. ಈ ಸಮಯದಲ್ಲಿ ಕಿಶನ್ 6 ಶತಕ ಮತ್ತು 16 ಅರ್ಧ ಶತಕಗಳನ್ನು ಒಳಗೊಂಡಂತೆ 38.76 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ವಿಕೆಟ್ ಹಿಂದೆ ಇಶಾನ್ ಕಿಶನ್ ಒಟ್ಟು 99 ಕ್ಯಾಚ್ ಮತ್ತು 11 ಆಟಗಾರರನ್ನು ಸ್ಟಂಪ್ ಮಾಡಿದ್ದಾರೆ.

ಉತ್ತಮ ಕೀಪರ್​ಗೆ ಅವಕಾಶ ನೀಡಿ ಎಂದ ರವಿಶಾಸ್ತ್ರಿ: ಹೀಗಾಗಿಯೇ ಕೆ.ಎಸ್. ಭರತ್ ಮತ್ತು ಇಶಾನ್ ಕಿಶನ್ ನಡುವೆ ಉತ್ತಮ ಕೀಪರ್‌ಗೆ ಅವಕಾಶ ನೀಡಬೇಕೆಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಪ್ರತಿಪಾದಿಸಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್​ ಪಂತ್ ಅನಿರ್ದಿಷ್ಟಾವಧಿಗೆ ಮೈದಾನದಿಂದ ದೂರ ಉಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫೆಬ್ರವರಿ 9 ರಂದು ನಾಗ್ಪುರದಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್‌ಗೆ ಮೊದಲು ಭಾರತವು ಇಬ್ಬರು ಅನ್‌ಕ್ಯಾಪ್ಡ್ ವಿಕೆಟ್‌ ಕೀಪರ್‌ಗಳಾದ ಭರತ್ ಮತ್ತು ಇಶಾನ್ ಅವರ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ.

ಭಾರತ ಎ ಪಂದ್ಯಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವುದರ ಹೊರತಾಗಿ, ಭರತ್ ಸುಮಾರು ಮೂರು ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಎರಡನೇ ವಿಕೆಟ್-ಕೀಪರ್ ಆಗಿದ್ದಾರೆ. ಆದರೆ ಇಶಾನ್ ಪಂತ್ ಬದಲಿಗೆ ಚಾಲನೆಯಲ್ಲಿದ್ದಾರೆ. ಇಶಾನ್ ಕಿಶನ್ ಅಥವಾ ಕೆಎಸ್ ಭರತ್ ಆಯ್ಕೆಯ ವಿಷಯಕ್ಕೆ ಬಂದರೆ, ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಇದು ಟರ್ನಿಂಗ್ ಪಿಚ್ ಆಗಲಿದೆಯೇ ಎಂಬುದನ್ನು ನೋಡಬೇಕು.

ನಂತರ ಉತ್ತಮ ವಿಕೆಟ್‌ಕೀಪರ್‌ಗೆ ಅವಕಾಶ ನೀಡುವ ಬಗ್ಗೆ ಯೋಚಿಸಬೇಕು. ಅಂತಿಮವಾಗಿ ತಂಡದ ಮ್ಯಾನೇಜ್‌ಮೆಂಟ್‌ ನಿರ್ಧಾರಕ್ಕೆ ಬರಲಿದೆ ಎಂದು ರವಿ ಶಾಸ್ತ್ರಿ ಹೇಳಿದರು. ಉತ್ತಮ ಕೀಪರ್ ಕೂಡ ಅಗತ್ಯವಿದೆ. ಏಕೆಂದರೆ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಅವರಂತಹ ಆಟಗಾರರಿಗೆ ಸ್ಟಂಪ್‌ನ ಹಿಂದೆ ಉತ್ತಮ ಕೀಪರ್ ಅಗತ್ಯವಿದೆ. ಇದು ಬೌಲರ್‌ಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಚ್ ಮತ್ತು ಸ್ಟಂಪಿಂಗ್ ಮಾಡುವ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ ಶಾಸ್ತ್ರಿ.

ಇದನ್ನೂ ಓದಿ: ರಿಷಭ್​​ ಪಂತ್ ಸ್ಥಾನ ಯಾರೂ ತುಂಬಲಾರರು: ಇಯಾನ್ ಚಾಪೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.