ETV Bharat / bharat

Women With Long COVID Infection : ದೀರ್ಘಕಾಲ ಕೋವಿಡ್​ಗೆ ಒಳಗಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ-ಕಾಳಜಿ ಅಗತ್ಯ - ದೀರ್ಘಕಾಲ ಕೋವಿಡ್​ಗೆ ಒಳಗಾದ ಮಹಿಳೆಯರು

ನಿರ್ದಿಷ್ಟವಾಗಿ ಹೇಳುವುದಾದರೆ, ದೈಹಿಕ ಪರಿಶ್ರಮದ ಸಮಯದಲ್ಲಿ ಹೃದಯ ಬಡಿತ ಕಡಿಮೆಯಾಗುತ್ತದೆ ಮತ್ತು ಚೇತರಿಕೆ (ಅಂದರೆ, ಹೃದಯ ಬಡಿತವನ್ನು ನಿಧಾನಗೊಳಿಸುವುದು) ಪ್ರಮಾಣವು ದೀರ್ಘಕಾಲ ಕೋವಿಡ್​ಗೆ ಒಳಗಾಗಿ ಚೇತರಿಸಿಕೊಂಡ ಮಹಿಳೆಯರಲ್ಲಿ ದೈಹಿಕ ಪರಿಶ್ರಮವಿದ್ದರೂ ವಿಳಂಬವಾಗುತ್ತದೆ ಎಂದು ಈ ವರದಿ ಹೇಳುತ್ತದೆ..

Women With Long COVID Infection
Women With Long COVID Infection
author img

By

Published : Nov 13, 2021, 5:28 PM IST

ಕೋವಿಡ್​-19ಗೆ (Covid-19) ಹೆಚ್ಚು ಒಳಗಾದವರು ಅಥವಾ ಕೊರೊನಾ ಸೋಂಕಿನಿಂದ ಹೆಚ್ಚು ಮೃತಪಟ್ಟವರು ಪುರುಷರಾಗಿದ್ದರೂ ಕೂಡ ವೈರಸ್​ಗೆ ತುತ್ತಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಹಾಗೂ ಕಾಳಜಿಯ ಅಗತ್ಯವಿದೆ. ಯಾಕೆಂದರೆ, ದೀರ್ಘಕಾಲ ಕೋವಿಡ್​ಗೆ ಒಳಗಾದ ಮಹಿಳೆಯರು (Women With Long COVID Infection) ಚೇತರಿಸಿಕೊಂಡ ಕೆಲವು ತಿಂಗಳುಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳ ( lung-related limitations) ಸುಳಿಯಲ್ಲಿ ಸಿಲುಕುತ್ತಿದ್ದಾರೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಯಸ್ಸಿಗೆ ಸಂಬಂಧಿಸಿದ ದೈಹಿಕ ಅಸಾಮರ್ಥ್ಯಕ್ಕೆ ಬೇಗನೆ ಒಳಗಾಗುತ್ತಾರೆ. ದೀರ್ಘಕಾಲದ ಕೊರೊನಾ ಸೋಂಕು ಹೊಂದಿರುವ ಮಹಿಳೆಯರು ನಿರಂತರ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು Experimental Physiology ಎಂಬ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುತ್ತದೆ. ಹೀಗಾಗಿ, ಮಹಿಳೆಯರ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಇದನ್ನೂ ಓದಿ: ವಿವಾಹ- ಗರ್ಭಧಾರಣೆ ವಿಳಂಬ: ಮಹಿಳೆಯರಲ್ಲಿ ಬಂಜೆತನ ಹೆಚ್ಚಳ

ಅಮೆರಿಕದ ಬ್ಲೂಮಿಂಗ್ಟನ್​​ನ ಇಂಡಿಯಾನಾ ವಿಶ್ವವಿದ್ಯಾಲಯದ ( Indiana University Bloomington, US) ಶರೀರಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಸೋಂಕಿತರಲ್ಲದ, ಸೌಮ್ಯ ಲಕ್ಷಣಗಳುಳ್ಳ ಸೋಂಕಿತ ಮಹಿಳೆಯರು ಹಾಗೂ ತೀವ್ರ ಸೋಂಕಿಗೆ ಒಳಗಾದ ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಗಿದೆ.

ಚೇತರಿಕೆಯ ಹಲವು ತಿಂಗಳ ಬಳಿಕ ಈ ಮಹಿಳೆಯರ ಆರು ನಿಮಿಷಗಳ ನಡಿಗೆ ಪರೀಕ್ಷೆಯಿಂದ ಹೃದಯ ಬಡಿತದ ಮಾಹಿತಿ ಕಲೆ ಹಾಕಿ ಅಧ್ಯಯನ ಕೈಗೊಳ್ಳಲಾಗಿದೆ. ಇದರಲ್ಲಿ ಸೌಮ್ಯ ಲಕ್ಷಣಗಳಿದ್ದ ಸೋಂಕಿತ ಮಹಿಳೆಯರಿಗೂ ಹಾಗೂ ದೀರ್ಘಕಾಲ ಕೋವಿಡ್​ಗೆ ಒಳಗಾಗಿ ಚೇತರಿಸಿಕೊಂಡ ಮಹಿಳೆಯರಿಗೂ ಗಮನಾರ್ಹ ವ್ಯತ್ಯಾಸಗಳನ್ನು ವರದಿ ಮಾಡಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ದೈಹಿಕ ಪರಿಶ್ರಮದ ಸಮಯದಲ್ಲಿ ಹೃದಯ ಬಡಿತ ಕಡಿಮೆಯಾಗುತ್ತದೆ ಮತ್ತು ಚೇತರಿಕೆ (ಅಂದರೆ, ಹೃದಯ ಬಡಿತವನ್ನು ನಿಧಾನಗೊಳಿಸುವುದು) ಪ್ರಮಾಣವು ದೀರ್ಘಕಾಲ ಕೋವಿಡ್​ಗೆ ಒಳಗಾಗಿ ಚೇತರಿಸಿಕೊಂಡ ಮಹಿಳೆಯರಲ್ಲಿ ದೈಹಿಕ ಪರಿಶ್ರಮವಿದ್ದರೂ ವಿಳಂಬವಾಗುತ್ತದೆ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ತ್ವಚೆ ಕಪ್ಪಾಗುವುದನ್ನು ತಡೆಯಲು ಇಲ್ಲಿವೆ ಸುಲಭ ಮಾರ್ಗಗಳು

ಆರು ನಿಮಿಷಗಳ ನಡಿಗೆ ಪರೀಕ್ಷೆಯ ಸಮಯದಲ್ಲಿ ಈಗಾಗಲೇ ಉಸಿರಾಟದ ತೊಂದರೆ, ಕೀಲು/ಸ್ನಾಯು ನೋವುಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗಿಂತಲೂ ಸೋಂಕಿನಿಂದ ಚೇತರಿಸಿಕೊಂಡ ಮಹಿಳೆಯರು ಹೆಚ್ಚಿನ ಸಮಸ್ಯೆ ಎದುರಿಸಿದ್ದಾರೆ.

ಇದಲ್ಲದೆ, ಹೆಚ್ಚು ಅಸಹಜ ಹೃದಯ ಬಡಿತದ ಪ್ರತಿಕ್ರಿಯೆಗಳು ಕೂಡ ಇವರಲ್ಲಿ ನಡೆದಿದೆ. ಹೀಗಾಗಿ, ದೀರ್ಘ ಕೋವಿಡ್ ಸೋಂಕು ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಹಾಗೂ ಕಾಳಜಿ ಅಗತ್ಯ ಎಂಬುದನ್ನು ಈ ಅಧ್ಯಯನ ಒತ್ತಿ ಹೇಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.