ನವದೆಹಲಿ: ಕೇಂದ್ರ ಸರ್ಕಾರ ಪೆಗಾಸಸ್ ವಿಚಾರವನ್ನು ಸಂಸತ್ನಲ್ಲಿ ಚರ್ಚಿಸಲು ಯಾಕೆ ಹೆದರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೆಗಾಸಸ್ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮೋದಿ- ಶಾ ಯಾಕೆ ಹೆದರುತ್ತಾರೆ. ಪೆಗಾಸಸ್ ಅನ್ನು ಆಂತರಿಕ ಭದ್ರತೆ, ಮಾದಕ ವಸ್ತು ಸಂಬಂಧಿತ ಅಪರಾಧಗಳಿಗೆ ಬಳಸಿದ್ದರೆ ಸ್ವಾಗತಾರ್ಹ. ಆದರೆ, ಇವರು ಯಾಕೆ ಭಯ ಪಡುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
-
That is why we in opposition want either the Home Minister or the Prime Minister to brief the House and assure the Nation that under no circumstances our National Security would be compromised by anyone who has Pegasus software. Would ModiShah please oblige?#Pegasus
— digvijaya singh (@digvijaya_28) July 27, 2021 " class="align-text-top noRightClick twitterSection" data="
">That is why we in opposition want either the Home Minister or the Prime Minister to brief the House and assure the Nation that under no circumstances our National Security would be compromised by anyone who has Pegasus software. Would ModiShah please oblige?#Pegasus
— digvijaya singh (@digvijaya_28) July 27, 2021That is why we in opposition want either the Home Minister or the Prime Minister to brief the House and assure the Nation that under no circumstances our National Security would be compromised by anyone who has Pegasus software. Would ModiShah please oblige?#Pegasus
— digvijaya singh (@digvijaya_28) July 27, 2021
2019 ರಲ್ಲೇ ನಾನು ಪೆಗಾಸಸ್ ವಿಚಾರ ಪ್ರಸ್ತಾಪಸಿದ್ದೆ, ಆಗಿನ ಐಟಿ ಸಚಿವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಇಂದು ಮತ್ತೆ ಈ ವಿಷಯ ಚರ್ಚೆಗೆ ಬಂದಿದ್ದು, ರಾಜ್ಯಸಭೆಗೆ ನೋಟಿಸ್ ನೀಡಿದ್ದೇನೆ. ಮೋದಿ ಮತ್ತು ಅಮಿತ್ ಶಾ ಚರ್ಚೆಗೆ ಒಪ್ಪುತ್ತಾರೆ ಎಂದು ಭಾವಿಸಿದ್ದೇನೆ. ಇದೊಂದು ತುರ್ತು ರಾಷ್ಟ್ರೀಯ ಭದ್ರತೆಯ ವಿಷಯ ಎಂದಿದ್ದಾರೆ.
ಅಮಿತ್ ಶಾ- ಮೋದಿ ಜೋಡಿ ಈ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ. ಅವರಿಗೆ ರಾಷ್ಟ್ರೀಯ ಭದ್ರತೆಯ ಬಗ್ಗೆ ಕಾಳಜಿಯಿಲ್ಲವೇ?. ಮಾರ್ಕ್ ಜುಕರ್ಬರ್ಗ್ ಅವರೇ ಎನ್ಎಸ್ಒ ವಿಚಾರದಲ್ಲಿ ದಯವಿಟ್ಟು ನಿಮ್ಮ ಆತ್ಮೀಯ ಗೆಳೆಯ ನರೇಂದ್ರ ಮೋದಿ ಅವರನ್ನು ನಿಮ್ಮ ವಿಷಯದಲ್ಲಿ ಸಹಾಯ ಮಾಡಲು ಕೇಳುತ್ತೀರಾ? ಇಲ್ಲದಿದ್ದರೆ, ದೇಶದಲ್ಲಿ ಕರಡಿ ಕುಣಿತ ಶುರುವಾಗಲಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ದೇಶವನ್ನು ಮತ್ತೊಮ್ಮೆ ವಿಫಲಗೊಳಿಸಿದ್ದಾರೆ.. ಕೇಂದ್ರದ ವಿರುದ್ಧ ಹರಿಹಾಯ್ದ ರಾಗಾ
ಪೆಗಾಸಸ್ ವಿಚಾರವಾಗಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.