ಜೈಪುರ(ರಾಜಸ್ಥಾನ): ರಾಜಸ್ಥಾನ ರಾಜಧಾನಿಯ ನಹರ್ಗಡ್ ಜೈವಿಕ ಉದ್ಯಾನವನದಲ್ಲಿದ್ದ ಏಕೈಕ ಬಿಳಿ ಹುಲಿ 'ಚಿನು' ಜಗತ್ತಿಗೆ ವಿದಾಯ ಹೇಳಿದೆ. ಉದ್ಯಾನವನದ ಬಿಳಿ ಹುಲಿ ಇಂದು ಮಧ್ಯಾಹ್ನ ಸಾವನ್ನಪ್ಪಿದೆ.
ಬಿಳಿ ಹುಲಿ ಚಿನು ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅದಕ್ಕೆ ಕಿಡ್ನಿ ಸಂಬಂಧಿ ಕಾಯಿಲೆಯಿತ್ತು. ಅನಾರೋಗ್ಯದ ಕಾರಣ ಹುಲಿ ಒಂದು ವಾರದಿಂದ ಆಹಾರ ನೀರು ಸೇವಿಸುವುದನ್ನು ಬಿಟ್ಟಿತ್ತು. ಇದರಿಂದಾಗಿ ಹುಲಿ ಬಹಳ ದುರ್ಬಲಗೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ ಉದ್ಯಾನವನದಲ್ಲಿ ಚಿನು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಹುಲಿ ಸಾವಿನಿಂದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರೇಮಿಗಳಲ್ಲಿ ದುಃಖ ಮನೆ ಮಾಡಿದೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ. 2021ರ ಮಾರ್ಚ್ 17ರಂದು ಬಿಳಿ ಹುಲಿ ಚಿನುವನ್ನು ಒಡಿಶಾದ ನಂದಂಕನನ್ ಮೃಗಾಲಯದಿಂದ ಜೈಪುರ ನಹರ್‌ಗಢ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು.
ಇದನ್ನೂ ಓದಿ: 25 ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ.. ವಿಧವೆಯಂತೆ ಜೀವನ ಸಾಗಿಸುತ್ತಿದ್ದ ಮಹಿಳೆ ಬಾಳಲ್ಲಿ ಹೊಸ ಬೆಳಕು