ನವದೆಹಲಿ: ಭಾರತ ವಿಶ್ವದಲ್ಲೇ ನಾಲ್ಕನೇ ಬಲಿಷ್ಠ ಸೇನಾಪಡೆ ಹೊಂದಿರುವ ದೇಶವಾಗಿದೆ. ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ರಷ್ಯಾ ಮತ್ತು ಚೀನಾ ಇದೆ ಎಂದು ಗ್ಲೋಬಲ್ ಫೈರ್‌ಪವರ್ ವರದಿ ತಿಳಿಸಿದೆ.
ಈ ಪಟ್ಟಿಯಲ್ಲಿ ಪಾಕಿಸ್ತಾನ ಒಂಬತ್ತನೇ ಸ್ಥಾನದಲ್ಲಿದೆ. ಇಟಲಿ ಹತ್ತನೇ ಸ್ಥಾನ ಪಡೆದಿದೆ. ಅತ್ಯಂತ ಕಡಿಮೆ ಶಕ್ತಿಶಾಲಿ ಸೇನೆ ಹೊಂದಿರುವ ದೇಶ ಭೂತನ್. ದಕ್ಷಿಣ ಕೊರಿಯಾ ಐದು, ಯುಕೆ ಆರು, ಜಪಾನ್ ಏಳು ಮತ್ತು ಟರ್ಕಿ ಎಂಟನೇ ಸ್ಥಾನದಲ್ಲಿದೆ.
ದೇಶದ ಸೇನಾ ಶಕ್ತಿಯನ್ನು 60 ಅಂಶಗಳಲ್ಲಿ ಅಳೆಯಲಾಗಿದೆ. ಸಿಬ್ಬಂದಿ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಪ್ರದೇಶ ಮತ್ತು ಲಭ್ಯವಿರುವ ಮಾನವ ಸಂಪನ್ಮೂಲಗಳು ಸೇರಿದಂತೆ ಹಲವು ಅಂಶಗಳನ್ನು ಇದು ಹೊಂದಿದೆ. ಈ ಅಂಶಗಳು ಪವರ್ಇಂಡೆಕ್ಸ್ ಸ್ಕೋರ್ ಅನ್ನು ನಿರ್ಧರಿಸುತ್ತದೆ. ಕಡಿಮೆ ಅಂಕಗಳು ಬಲವಾದ ಮಿಲಿಟರಿ ಸಾಮರ್ಥ್ಯವನ್ನು ಸೂಚಿಸುತ್ತದೆ.
ಗ್ಲೋಬರ್ ಫೈರ್‌ಪವರ್ ಸಂಸ್ಥೆಯು ಪ್ರತಿ ವರ್ಷ ದೇಶಗಳ ಮಿಲಿಟರಿ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂಬ ಕುರಿತು ಪರಿಶೀಲನೆ ನಡೆಸುತ್ತದೆ. 2022ರಲ್ಲಿದ್ದ ನಾಲ್ಕು ಅಗ್ರ ದೇಶಗಳ ಪಟ್ಟಿಯಲ್ಲಿ ಈ ವರ್ಷವೂ ಕೂಡ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ವರದಿ ಹೇಳುತ್ತದೆ.
ಅಮೆರಿಕ ವಿಶ್ವದ ಶಕ್ತಿಶಾಲಿ ಸೇನಾಪಡೆ ಹೊಂದಿದೆ ಎಂದು ವರದಿ ತಿಳಿಸಿದೆ. ಈ ವರದಿಯನುಸಾರ ಅಮೆರಿಕದ ಸೇನೆಯಲ್ಲಿ ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿ, ವೈದ್ಯಕೀಯ, ಏರೋಸ್ಪೇಸ್ ಮತ್ತು ಕಂಪ್ಯೂಟರ್, ಟೆಲಿಕಾಂ ವಲಯ ಅತ್ಯಂತ ಪ್ರಬಲವಾಗಿದೆ. ಅಮೆರಿಕ 13,300 ಯುದ್ಧ ವಿಮಾನಗಳನ್ನು ಹೊಂದಿದ್ದು, 983 ದಾಳಿ ನಡೆಸುವ ಹೆಲಿಕ್ಟಾಪರ್‌ಗಳನ್ನು ಹೊಂದಿದೆ.
ಭಾರತ ಬೃಹತ್ ಪ್ರಮಾಣದ ಭೂಸೇನೆ ಮತ್ತು ದೇಶೀಯ ಮಿಲಿಟರಿ ಪಡೆ ಹೊಂದಿದೆ. ರಷ್ಯಾ ದೇಶವು ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ತರಬೇತಿ ಪಡೆದ ಮಿಲಿಟರಿ ಹೊಂದಿದೆ. ಚೀನಾ ಕೂಡ ಗಮನಾರ್ಹ ಸೇನಾ ಬಲ ಹೊಂದಿದೆ ಎಂದು ಈ ವರದಿ ಹೇಳುತ್ತದೆ.(ಐಎಎನ್ಎಸ್)
ಇದನ್ನೂ ಓದಿ: ಭಾರತ - ಪಾಕಿಸ್ತಾನ ಗಡಿಯಲ್ಲಿ ಬಿಎಸ್ಎಫ್ ಪಡೆಯಿಂದ 'ಆಪರೇಷನ್ ಸರ್ದ್ ಹವಾ'