ETV Bharat / bharat

ಸ್ಟೋರ್ ರೂಂನಲ್ಲಿ ಪಟ್ಟಿಗೆಯ ಮೇಲೆ ನಾರಾಯಣ ಮೂರ್ತಿ ಅವರನ್ನು ಮಲಗಿಸಿದ್ದ ಅಮೆರಿಕದ ಕ್ಲೈಂಟ್ - ಸುಧಾ ಮೂರ್ತಿ

'An Uncommon Love: The Early Life of Sudha and Narayana Murthy' Book: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಕುರಿತು ಆಸಕ್ತಿದಾಯಕ ಪುಸ್ತಕವನ್ನು ಇಂಡಿಯನ್-ಅಮೆರಿಕನ್ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಹೊರತಂದಿದ್ದಾರೆ.

When Narayana Murthy was made to sleep in a window-less storeroom in US
ಸ್ಟೋರ್ ರೂಂನಲ್ಲಿ ಪಟ್ಟಿಗೆಯ ಮೇಲೆ ನಾರಾಯಣ ಮೂರ್ತಿರನ್ನು ಮಲಗಿಸಿದ್ದ ಅಮೆರಿಕದ ಕ್ಲೈಂಟ್
author img

By ETV Bharat Karnataka Team

Published : Jan 7, 2024, 10:41 PM IST

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಒಂದು ಕಾಲದಲ್ಲಿ ಅಮೆರಿಕದಲ್ಲಿ ಕಿಟಕಿಯಿಲ್ಲದ ಸ್ಟೋರ್ ರೂಂನಲ್ಲಿ ದೊಡ್ಡ ಪೆಟ್ಟಿಗೆಯ ಮೇಲೆ ಮಲಗಲು ಅಲ್ಲಿನ ಉದ್ಯಮಿಯೊಬ್ಬರು ಸೂಚಿಸಿದ್ದರಂತೆ. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರ ಜೀವನದ ಬಗ್ಗೆ ಇಂತಹ ಅನೇಕ ಆಸಕ್ತಿದಾಯಕ ವಿಷಯಗಳು ಪುಸ್ತಕದಿಂದ ಬಹಿರಂಗವಾಗಿವೆ.

ಇಂಡಿಯನ್-ಅಮೆರಿಕನ್ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು 'ಆ್ಯನ್ ಅನ್​ಕಾಮನ್ ಲವ್: ದಿ ಅರ್ಲಿ ಲೈಫ್ ಆಫ್ ಸುಧಾ ಮತ್ತು ನಾರಾಯಣ ಮೂರ್ತಿ' (An Uncommon Love: The Early Life of Sudha and Narayana Murthy) ಎಂಬ ಪುಸ್ತಕ ಹೊರತಂದಿದ್ದಾರೆ. ಇದರಲ್ಲಿ ನಾರಾಯಣ ಮೂರ್ತಿ ದಂಪತಿ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಪುಸ್ತಕದಲ್ಲಿ ಅವರು ತೆರೆದಿಟ್ಟಿದ್ದಾರೆ.

ಹಲವು ವರ್ಷಗಳ ಹಿಂದೆ ಎಂದರೆ ಇನ್ಫೋಸಿಸ್​ನ ಆರಂಭದ ದಿನಗಳಲ್ಲಿ ನಾರಾಯಣ ಮೂರ್ತಿ ಅವರು ಕೆಲಸದ ನಿಮಿತ್ತ ಮತ್ತು ತಮ್ಮ ಕ್ಲೈಂಟ್​ ಒಬ್ಬರನ್ನು ಭೇಟಿಯಾಗಲು ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಾರಾಯಣ ಮೂರ್ತಿ ಅವರಿಗೆ ಸ್ಟೋರ್ ರೂಂನ ಕಹಿ ಅನುಭವ ಆಗಿತ್ತು.

ಇಂತಹ ಘಟನೆಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ 'ಡೇಟಾ ಬೇಸಿಕ್ಸ್ ಕಾರ್ಪೊರೇಷನ್'ನ ಡಾನ್ ಲೈಲ್ಸ್ ಎಂಬ ಕ್ಲೈಂಟ್​ ಅನೇಕ ಸಂದರ್ಭಗಳಲ್ಲಿ ನಾರಾಯಣ ಮೂರ್ತಿ ಅವರಿಗೆ ಕಠೋರವಾಗಿದ್ದರು. ಗ್ರಾಹಕರು ಆಗಾಗ್ಗೆ ಪಾವತಿಗಳನ್ನು ವಿಳಂಬಗೊಳಿಸುತ್ತಿದ್ದರು. ಈ ವಿಷಯದ ಬಗ್ಗೆ ನಾರಾಯಣ ಮೂರ್ತಿ ಅವರು ಬಗ್ಗುತ್ತಿರಲಿಲ್ಲ. ಇದೇ ಕಾರಣಕ್ಕೆ ಮೂರ್ತಿ ಅವರು ಲೈಲ್ಸ್​ ಅವರಿಗೆ​ ಟಾರ್ಗೆಟ್​ ಆಗುತ್ತಿದ್ದರು.

ನಾರಾಯಣ ಮೂರ್ತಿ ಅಥವಾ ಅವರ ಸಹೋದ್ಯೋಗಿಗಳು ಮ್ಯಾನ್‌ಹ್ಯಾಟನ್‌ನಲ್ಲಿದ್ದ ಲೈಲ್ಸ್‌ ಅವರ ಭೇಟಿಗೆ ಹೋದಾಗಲೆಲ್ಲಾ ಅವರು ಹೋಟೆಲ್ ಬುಕಿಂಗ್‌ಗೆ ಸಮಯೋಚಿತ ಅನುಮತಿಯನ್ನು ಪಡೆಯುತ್ತಿರಲಿಲ್ಲ. ಒಮ್ಮೆ, ನಾಲ್ಕು ಬೆಡ್‌ರೂಮ್‌ಗಳ ಮನೆ ಇದ್ದಾಗಲೂ ನಾರಾಯಣ ಮೂರ್ತಿ ಅವರಿಗೆ ಸ್ಟೋರ್ ರೂಂನಲ್ಲಿ ದೊಡ್ಡ ಪೆಟ್ಟಿಗೆಯ ಮೇಲೆ ಮಲಗುವಂತೆ ಮಾಡಲಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಪುಸ್ತಕದ ಪ್ರಕಾರ, ಕಂಪನಿಗಾಗಿ ನಾರಾಯಣ ಮೂರ್ತಿ ಅವರು ಲೈಲ್ಸ್ ಅವರ ನಡವಳಿಕೆಯನ್ನು ಸಹಿಸಿಕೊಳ್ಳುತ್ತಿದ್ದರು. ಆದರೆ, ಈ ಘಟನೆಯು ಅವರನ್ನೂ ನಿಜಕ್ಕೂ ಬೆಚ್ಚಿ ಬೀಳಿಸಿತ್ತಂತೆ. ಈ ವಿಷಯವನ್ನು ಸುಧಾ ಮೂರ್ತಿ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ, ''ಅತಿಥಿಗಳು ದೇವರಿದ್ದಂತೆ ಮತ್ತು ನಿಮ್ಮ ಅತಿಥಿಯನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರಿಂದ ನೀವು ಏನೆಂದು ತೋರಿಸುತ್ತದೆ" ಎಂದು ತಮ್ಮ ತಾಯಿ ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದರು. ಜೊತೆಗೆ ನಾರಾಯಣ ಮೂರ್ತಿ ಅವರು ತಮ್ಮ ತಾಯಿ ಅತಿಥಿಗಳಿಗೆ ಊಟ ಬಡಿಸಿ, ತಾವು ಊಟ ಮಾಡದೆ ಮಲಗಿದ್ದನ್ನೂ ಸ್ಮರಿಸಿದ್ದರು.

ಜಗ್ಗರ್​ನಾಟ್ ಬುಕ್ಸ್ ಪ್ರಕಟಿಸಿದ ಈ ಪುಸ್ತಕದಲ್ಲಿ ದಿವಾಕರುಣಿ ಅವರು ಕರ್ನಾಟಕದ ಅಪ್ರತಿಮ ಮೂರ್ತಿ ದಂಪತಿಯ ಕಥೆ, ಇನ್ಫೋಸಿಸ್‌ನ ಆರಂಭಿಕ ದಿನಗಳು ಮತ್ತು ಉದಾರೀಕರಣದ ಮೊದಲು ಭಾರತೀಯ ವ್ಯವಹಾರ ಸನ್ನಿವೇಶವನ್ನು ವಿವರಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿರುತ್ತಿದ್ದೆ, ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ: ಎನ್‌.ಆರ್‌.ನಾರಾಯಣ ಮೂರ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.