ನವದೆಹಲಿ: ದೇಶದಲ್ಲಿ ಸಾವಿರಾರು ಜನರು ತಮ್ಮ ಪ್ರಾಣಕ್ಕಾಗಿ ಹೋರಾಡುತ್ತಿರುವಾಗ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಸ್ಪರ ಆಪಾದನೆ ಹೊರಿಸುವುದರಲ್ಲಿ ಹಾಗೂ ಜಗಳ ಮಾಡುವುದರಲ್ಲೇ ತೊಡಗಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಗೆ ಆಮ್ಲಜನಕ ಪೂರೈಕೆ ಕುರಿತು ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿದೆ. ಇಲ್ಲಿ ಆಮ್ಲಜನಕ ಉತ್ಪಾದಿಸುವ ಸ್ಥಾವರವಿಲ್ಲದಿದ್ದರೆ ದೆಹಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲವೇ? ದೆಹಲಿಗೆ ನಿಗದಿಪಡಿಸಿದ ಆಮ್ಲಜನಕ ಟ್ಯಾಂಕರ್ ಅನ್ನು ಬೇರೆ ರಾಜ್ಯಕ್ಕೆ ಕಳುಹಿಸಿದಾಗ ನಾನು ಕೇಂದ್ರ ಸರ್ಕಾರದಲ್ಲಿ ಯಾರೊಂದಿಗೆ ಮಾತನಾಡಬೇಕು ಎಂದು ದಯವಿಟ್ಟು ಸೂಚಿಸಿ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಗೆ ಆಮ್ಲಜನಕ ಪೂರೈಕೆ ಕುರಿತು ಕೇಂದ್ರ ಮತ್ತು ಇತರ ರಾಜ್ಯಗಳ ವಿರುದ್ಧ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.