ETV Bharat / bharat

'ಅವೇಕ್ ಕ್ರ್ಯಾನಿಯೊಟಮಿ' ಶಸ್ತ್ರಚಿಕಿತ್ಸೆ ಎಂದರೇನು?

author img

By PTI

Published : Jan 7, 2024, 7:07 AM IST

ದೆಹಲಿಯ ಏಮ್ಸ್‌ನಲ್ಲಿ ಅವೇಕ್ ಕ್ರ್ಯಾನಿಯೊಟಮಿ ಎಂಬ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡ ವೈದ್ಯರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ವಿಜ್ಞಾನದಲ್ಲೇ ಹೊಸ ಹೆಗ್ಗುರುತು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಶಸ್ತ್ರಚಿಕಿತ್ಸೆ

ನವದೆಹಲಿ: 'ಅವೇಕ್​ ಕ್ಯಾನಿಯೊಟಮಿ' ಅಂದರೆ, ರೋಗಿಗೆ ಎಚ್ಚರದ ಜಾಗೃತಾವಸ್ಥೆಯಲ್ಲಿಯೇ ನಡೆಸಬೇಕಾದ ಶಸ್ತ್ರಚಿಕಿತ್ಸೆ. ಮೆದುಳಿನ ನರಗಳ ಕಾರ್ಯಾಚರಣೆ ನಿಂತಲ್ಲಿ ಈ ಶಸ್ತ್ರಚಿಕಿತ್ಸೆಗೆ ಅಡ್ಡಿ ಉಂಟಾಗುತ್ತದೆ. ಹೀಗಾಗಿ ಪೂರ್ಣವಾಗಿ ಆಪರೇಷನ್​ ಮುಗಿಯುವವರೆಗೂ ರೋಗಿ ಎಚ್ಚರದಿಂದಲೇ ಇರಬೇಕು. ಇಂತಹ ಪ್ರಕರಣಗಳಲ್ಲಿ ಅರಿವಳಿಕೆ ನೀಡುವುದೂ ಸವಾಲಿನ ವಿಷಯವಾಗಿರುತ್ತದೆ. ಆದರೆ 5 ವರ್ಷದ ಪುಟ್ಟ ಬಾಲಕಿಗೆ ಇಂತಹದ್ದೊಂದು ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌) ವೈದ್ಯರ ತಂಡ ಕಠಿಣ ಮತ್ತು ವಿಶೇಷವಾದ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಕಿಗೆ ಜಾಗೃತಾವಸ್ಥೆಯಲ್ಲಿ ಬ್ರೈನ್​ ಟ್ಯೂಮರ್​ (ಮೆದುಳಿನಲ್ಲಿ ಉಂಟಾಗುವ ಗೆಡ್ಡೆ) ಆಪರೇಷನ್​ ನಡೆಸಿದ್ದಾರೆ. ಈ ರೀತಿಯ ಚಿಕಿತ್ಸೆಗೊಳಗಾದ ವಿಶ್ವದ ಅತಿ ಚಿಕ್ಕ ವಯಸ್ಸಿನ ರೋಗಿ ಈಕೆ ಎಂಬುದು ಕುತೂಹಲದ ಸಂಗತಿ.

ಮೆದುಳಿನ ಎಡಭಾಗದಲ್ಲಿ ಕಂಡುಬಂದಿದ್ದ ಪೆರಿಸಿಲ್ವಿಯನ್ ಇಂಟ್ರಾಕ್ಸಿಯಲ್ ಬ್ರೈನ್ ಟ್ಯೂಮರ್‌ಗೆ, ಅವೇಕ್ ಕ್ರ್ಯಾನಿಯೊಟಮಿ (ಪ್ರಜ್ಞಾವಸ್ಥೆಯಲ್ಲಿ ಶಸ್ತ್ರಚಿಕಿತ್ಸೆ) ತಂತ್ರ ಬಳಸಿ ಜನವರಿ 4ರಂದು ಆಪರೇಷನ್​ ಮಾಡಲಾಗಿದೆ. ಅರಿವಳಿಕೆ ನೀಡಲು ತೆಗೆದುಕೊಂಡ ಸಮಯವೂ ಸೇರಿ ಮೂರು ಗಂಟೆಗಳಲ್ಲಿ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎಂಆರ್​ಐ ನಡೆಸಿದಾಗ ಮೆದುಳಿನಲ್ಲಿ ಬಾಲಕಿಯ ಎಡಭಾಗದ ಮೆದುಳಿನಲ್ಲಿ ಗೆಡ್ಡೆ ಇರುವುದು ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿತ್ತು. ಆದರೆ, ಬಾಲಕಿಗೆ ಇಂತಹ ಕಠಿಣ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಾಗಿತ್ತು. ಮೊದಲು ಬಾಲಕಿ ಮತ್ತು ಆಕೆಯ ಪೋಷಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಒಪ್ಪಿಗೆ ಪಡೆದ ಬಳಿಕ ಈ ಆಪರೇಷನ್​ ನಡೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸವಾಲೇಕೆ?​: ಪುಟ್ಟ ಬಾಲಕಿಗೆ ಈ ಆಪರೇಷನ್​ ಮಾಡುವುದು ಸವಾಲಾಗಿತ್ತು. ಆಕೆ ಎಚ್ಚರವಾಗಿರಲು ಹಲವಾರು ಆಟಿಕೆಗಳು, ಪ್ರಾಣಿಗಳ ಚಿತ್ರಗಳನ್ನು ತೋರಿಸಲಾಯಿತು. 1 ತರಗತಿ ಓದುತ್ತಿರುವ ಆಕೆಯ ಆರೋಗ್ಯ ಸದ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಏಮ್ಸ್​ನ ನರಶಸ್ತ್ರಚಿಕಿತ್ಸೆ ಪ್ರಾಧ್ಯಾಪಕ ಡಾ.ದೀಪಕ್ ಗುಪ್ತಾ ತಿಳಿಸಿದರು.

ಡಾ.ಮಿಹಿರ್ ಪಾಂಡಿಯಾ ಮತ್ತು ಡಾ.ಜ್ಞಾನೇಂದ್ರ ಪಾಲ್ ಸಿಂಗ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದೆಹಲಿ ಏಮ್ಸ್‌ನಲ್ಲಿ ಪುಟ್ಟ ಬಾಲಕಿಯೊಬ್ಬಳಿಗೆ ಜಾಗೃತಾವಸ್ಥೆಯಲ್ಲೇ ಯಶಸ್ವಿ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ನಡೆಸಿರುವುದು ವಿಶ್ವದಲ್ಲೇ ಇದು ಮೊದಲ ಪ್ರಕರಣ. ಮಗು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಥಟ್ಟನೆ ಗುರುತಿಸಬಲ್ಲಳು. ಇನ್ನು ಮುಂದೆ ಆಕೆಗೆ ಈ ಸಮಸ್ಯೆ ಬಾಧಿಸದು ಎಂದು ಡಾ.ಗುಪ್ತಾ ಹೇಳಿದರು.

ಇದನ್ನೂ ಓದಿ: ಜ.22ರಂದು ಅಯೋಧ್ಯೆಯ 'ರಾಮಲಲ್ಲಾ' ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಅದೇ ದಿನದಂದು ಹೆರಿಗೆಗೆ ಗರ್ಭಿಣಿಯರ ಬಯಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.