ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮ ರೈಲ್ವೆಯ ಉಪನಗರ ಎಸಿ ಲೋಕಲ್ ಟ್ರೈನುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಅಲ್ಲದೆ ಪೀಕ್ ಟೈಮ್ ರೈಲು ಸೇವೆಗಳು ತನ್ನ ಪೂರ್ಣ ಸಾಮರ್ಥ್ಯದ ಮಟ್ಟದಲ್ಲಿ ಚಾಲನೆಯಲ್ಲಿವೆ.
ಪಶ್ಚಿಮ ರೈಲ್ವೆಯ ಲೋಕಲ್ ಎಸಿ ಟ್ರೈನ್ ಮೂಲಕ ಪ್ರಯಾಣಿಸುವ ಒಟ್ಟು ಪ್ರಯಾಣಿಕರ ಸಂಖ್ಯೆ ಅಕ್ಟೋಬರ್ 27 ರವರೆಗಿನ ಈ ಹಣಕಾಸು ವರ್ಷದಲ್ಲಿ 1 ಕೋಟಿ ಸಂಖ್ಯೆಯ ಮೈಲಿಗಲ್ಲನ್ನು ದಾಟಿದೆ ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ರೈಲ್ವೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ, ಏಪ್ರಿಲ್ 2022 ರಿಂದ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗಿನ ತಿಂಗಳುಗಳಲ್ಲಿ ಎಸಿ ಲೋಕಲ್ನಲ್ಲಿ ಪ್ರಯಾಣಿಸಿರುವ ಒಟ್ಟು ಪ್ರಯಾಣಿಕರ ಸಂಖ್ಯೆ ಸುಮಾರು 1.01 ಕೋಟಿ. ಇದು 2019-20 ರ ಆರ್ಥಿಕ ವರ್ಷದ ಸಂಪೂರ್ಣ ಅವಧಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಹೋಲಿಸಿದರೆ ಸುಮಾರು 85 ಶೇಕಡಾ ಹೆಚ್ಚು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: 'ಲೋಕಲ್ ಟ್ರೈನ್' ಏರಿ ಹೊರಟ ಮದರಂಗಿ ಕೃಷ್ಣನಿಗೆ ಅಪ್ಪು ಸಾಥ್!