ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ನೋಟಿಸ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, 10 ಸೋಕಾಸ್ ನೋಟಿಸ್ ನೀಡಿದರೂ ಸಹ ನಾನು ಧಾರ್ಮಿಕ ದೃಷ್ಟಿಯಿಂದ ಮತದಾರರ ವಿಭಜನೆಗೆ ವಿರುದ್ಧವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಒಗ್ಗೂಡಿ ಮತ ಚಲಾಯಿಸುವಂತೆ ಮುಸ್ಲಿಮರನ್ನು ಒತ್ತಾಯಿಸುವ ಮೂಲಕ ಮಾದರಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಉತ್ತರ ನೀಡುವಂತೆ ನೋಟಿಸ್ ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಚುನಾವಣೆ ಆಯೋಗ ನಿರ್ಲಕ್ಷಿಸಿದೆ. 10 ಸೋಕಾಸ್ ನೋಟಿಸ್ ಸ್ವೀಕರಿಸಿದರೂ ಸಹ ಧಾರ್ಮಿಕ ದೃಷ್ಟಿಯಿಂದ ಮತದಾರರ ವಿಭಜನೆಗೆ ವಿರುದ್ಧವಾಗಿ ನಿಲ್ಲುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಪ್ರಶ್ನಿಸಿ ಪಿಐಎಲ್ : ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ
ನೀವು (ಇಸಿ) ನನಗೆ ಸೋಕಾಸ್ ನೋಟಿಸ್‌ಗಳನ್ನು ನೀಡಬಹುದು. ಆದರೆ ನನ್ನ ಉತ್ತರ ಒಂದೇ ಆಗಿರುತ್ತದೆ. ಹಿಂದೂ, ಮುಸ್ಲಿಂ ಮತಗಳಲ್ಲಿನ ಯಾವುದೇ ಶಕ್ತಿಯ ವಿರುದ್ಧ ನಾನು ಯಾವಾಗಲೂ ಮಾತನಾಡುತ್ತೇನೆ. ಧಾರ್ಮಿಕ ದೃಷ್ಟಿಯಿಂದ ಮತದಾರರ ವಿಭಜನೆಗೆ ನಾನು ಯಾವಾಗಲೂ ನಿಲ್ಲುತ್ತೇನೆ ಎಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಪ್ರತಿದಿನ ಹಿಂದೂ ಮತ್ತು ಮುಸ್ಲಿಂ (ಮತ ಬ್ಯಾಂಕ್ಗಳು) ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರ ವಿರುದ್ಧ ಏಕೆ ಯಾವುದೇ ದೂರು ದಾಖಲಾಗಿಲ್ಲ? ನಂದಿಗ್ರಾಂ ಪ್ರಚಾರದ ಸಮಯದಲ್ಲಿ 'ಮಿನಿ-ಪಾಕಿಸ್ತಾನ' ಎಂಬ ಪದವನ್ನು ಉಚ್ಚರಿಸಿದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ಎಂದು ಸರಣಿ ಪ್ರಶ್ನೆ ಹಾಕಿದರು.