ಮೇಷ: ಈ ವಾರದಲ್ಲಿ ವ್ಯವಹಾರದಲ್ಲಿ ಸಾಕಷ್ಟು ಸಕ್ರಿಯರಾಗಲಿದ್ದೀರಿ. ದೂರದ ಊರುಗಳಿಗೆ ಪ್ರಯಾಣಿಸಲು, ಹೊಸ ವ್ಯಕ್ತಿಗಳನ್ನು ಸಂಪರ್ಕಿಸಲು ಮತ್ತು ಹಳೆಯ ಸಂಬಂಧಗಳನ್ನು ಪರಿಶೋಧಿಸಲು ನೀವು ಯತ್ನಿಸಲಿದ್ದು ನಿಮ್ಮ ವ್ಯವಹಾರಕ್ಕೆ ಒಳ್ಳೆಯ ಡೀಲ್ ಅಂತಿಮಗೊಳಿಸಲಿದ್ದೀರಿ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ಕೆಲವು ಎದುರಾಳಿಗಳು ತಮ್ಮ ತಲೆ ಎತ್ತಬಹುದು. ಆದರೆ ನೀವು ತಾಳ್ಮೆಯಿಂದ ಇದ್ದು ನಿಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡಬೇಕು. ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವೈವಾಹಿಕ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಈ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಪರಿಸ್ಥಿತಿಯು ಕೈಮೀರಿ ಹೋಗಬಹುದು. ನಿಮ್ಮ ಪ್ರೇಮ ಬದುಕಿಗೆ ಇದು ಅತ್ಯುತ್ತಮ ಸಮಯ. ನಿಮ್ಮ ಸಂಬಂಧದಲ್ಲಿ ಪ್ರಣಯದ ಭಾವನೆಗಳು ಉಕ್ಕಿ ಹರಿಯಲಿದ್ದು ಆಕರ್ಷಣೆಯು ಹೆಚ್ಚಲಿದೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯುವುದನ್ನು ಆನಂದಿಸಲಿದ್ದಾರೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರವಲ್ಲ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ರಕ್ತದೊತ್ತಡ ಹೆಚ್ಚುವ ಅಥವಾ ಗಾಯ ಉಂಟಾಗುವ ಸಾಧ್ಯತೆ ಇದೆ.
ವೃಷಭ: ವಾರದ ಆರಂಭದಲ್ಲಿ ಕೆಲವೊಂದು ಅನಗತ್ಯ ಖರ್ಚು ವೆಚ್ಚಗಳು ಉಂಟಾಗಬಹುದು. ನೀವು ಸಾಲ ತೆಗೆದುಕೊಳ್ಳಬಹುದು. ಅನಗತ್ಯ ಮಾತುಗಳು ನಿಮ್ಮ ತಲೆ ಕೆಡಿಸಬಹುದು. ಏಕಾಗ್ರತೆ ಸಾಧಿಸುವುದು ನಿಮ್ಮ ಪಾಲಿಗೆ ಕಷ್ಟಕರವಾದೀತು. ಇದು ಕೆಲಸದಲ್ಲಿ ಅನಾನುಕೂಲತೆಯನ್ನುಂಟು ಮಾಡಬಹುದು. ವೃತ್ತಿಪರರಿಗೆ ಈ ವಾರವು ದುರ್ಬಲ ಎನಿಸಲಿದೆ. ನೀವು ಕಠಿಣ ಶ್ರಮ ಪಡಬೇಕು ಮತ್ತು ನಿಮ್ಮ ಕೆಲಸಕ್ಕೆ ಗಮನ ನೀಡಬೇಕು. ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಲಿದೆ. ಇದರಿಂದ ನಿಮಗೆ ಸಾಕಷ್ಟು ವೆಚ್ಚ ಉಂಟಾಗಬಹುದು. ವ್ಯವಹಾರದಲ್ಲಿ ಹೂಡಿಕೆ ಮಾಡುವ ಅವಕಾಶ ಒದಗಿ ಬರಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಮಾತ್ರವಲ್ಲದೆ ಖರ್ಚು ವೆಚ್ಚವೂ ಉಂಟಾಗಬಹುದು. ಸಂಬಂಧದಲ್ಲಿ ಪರಸ್ಪರ ಅನ್ಯೋನ್ಯತೆ ಮತ್ತು ನಂಬಿಕೆ ಹೆಚ್ಚಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ. ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ.
ಮಿಥುನ: ಈ ವಾರದ ಆರಂಭದಲ್ಲಿ ನಿಮಗೆ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹೊಟ್ಟೆ ಹಾಳಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾದೀತು. ಇದು ನಿಮ್ಮ ಕೆಲಸದ ಸ್ಥಳದಲ್ಲಿಯೂ ಸಮಸ್ಯೆ ಉಂಟು ಮಾಡಬಹುದು. ಕೆಲಸದ ಸ್ಥಳದಲ್ಲಿನ ಪ್ರಗತಿಯು ನಿಮಗೆ ಹೆಚ್ಚು ತೃಪ್ತಿ ನೀಡದ ಕಾರಣ ನಿಮ್ಮ ಮನಸ್ಸಿನಲ್ಲಿ ಕೆಲಸ ಬದಲಾಯಿಸುವ ಯೋಚನೆ ಬರಬಹುದು. ವ್ಯವಹಾರಕ್ಕೆ ಇದು ಸಕಾಲ. ನಿಮ್ಮ ಮಹತ್ವಾಕಾಂಕ್ಷೆಗಳು ನಿಮಗೆ ಮುಂದೆ ಸಾಗಲು ಉತ್ತೇಜನ ನೀಡಲಿವೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನ ಒತ್ತಡ ಕಡಿಮೆಯಾಗಲಿದೆ. ಅಲ್ಲದೆ ತಮ್ಮ ಮನದಾಳದ ಭಾವನೆಗಳನ್ನು ಪರಸ್ಪರ ಸುಲಭವಾಗಿ ವ್ಯಕ್ತಪಡಿಸಲಿದ್ದಾರೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಸಂಘರ್ಷ ಉಂಟಾಗಿ ಸಂಬಂಧ ಹದಗೆಡುವ ಸಾಧ್ಯತೆ ಇರುವ ಕಾರಣ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರವಲ್ಲ. ನೀವು ಶಿಕ್ಷಣದಲ್ಲಿ ಕಠಿಣವಾಗಿ ದುಡಿಯಬೇಕಿದೆ.
ಕರ್ಕಾಟಕ: ವಾರದ ಆರಂಭದಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ಎಲ್ಲಾದರೂ ಹೋಗಿ ಅವರೊಂದಿಗೆ ಸಮಯವನ್ನು ಆನಂದಿಸಬಹುದು. ಇದು ನಿಮ್ಮನ್ನು ಚುರುಕುಗೊಳಿಸಲಿದೆ. ನೀವು ಚೊಕ್ಕದಾದ ಪ್ರವಾಸಕ್ಕೆ ಹೋಗಬಹುದು. ಹಳೆಯ ಗೆಳೆಯರೆಲ್ಲ ಇಲ್ಲಿ ಒಗ್ಗೂಡಿ ಹೊಸ ಯೋಜನೆಯನ್ನು ಜಾರಿಗೊಳಿಸಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಹಳೆಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ವೈವಾಹಿಕ ಜೀವನವು ಚೆನ್ನಾಗಿರಲಿದೆ. ಆದರೆ ಮನೆಯ ಸಮಸ್ಯೆಗಳು ನಿಮ್ಮ ವೈವಾಹಿಕ ಬದುಕಿನ ಮೇಲೆಯೂ ಪರಿಣಾಮ ಬೀರಬಹುದು. ಈ ಕುರಿತು ಕಾಳಜಿ ವಹಿಸಿ. ನಿಮ್ಮ ಗೆಳೆಯ/ಗೆಳತಿಯತ್ತ ನೀವು ಆಕರ್ಷಿತರಾಗಬಹುದು. ಉದ್ಯೋಗದಲ್ಲಿರುವವರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮನಸ್ಸಿನಲ್ಲಿರುವ ಅನೇಕ ವಿಷಯಗಳು ನಿಮ್ಮ ಚಿಂತೆಗೆ ಕಾರಣವಾಗಬಹುದು. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ರಿಯಲ್ ಎಸ್ಟೇಟ್ ನಲ್ಲಿ ಯಶಸ್ಸು ದೊರೆಯಬಹುದು. ವಿದ್ಯಾರ್ಥಿಗಳು ಅವರ ಮಾರ್ಗದರ್ಶಕರ ಅಥವಾ ಶಿಕ್ಷಕರ ನೆರವನ್ನು ಪಡೆಯಬೇಕು.
ಸಿಂಹ: ಮನೆಯು ಚಟುವಟಿಕೆಗಳಿಂದ ಕೂಡಿರಲಿದೆ. ಮನೆಗೆ ಅತಿಥಿಗಳು ಬರುವುದರಿಂದ ಸಂತಸ ನೆಲೆಸಲಿದೆ. ವಿವಾಹ ಉಂಟಾಗುವ ಸಾಧ್ಯತೆ ಇದೆ. ಗೆಳೆಯರೊಂದಿಗೆ ಉತ್ತಮ ಬಾಂಧವ್ಯ ನೆಲೆಸಲಿದೆ. ಹೀಗಾಗಿ ನೀವು ಎಲ್ಲಾದರೂ ವಾಕ್ಗೆ ಹೋಗಬಹುದು. ಆರೋಗ್ಯವು ಚೆನ್ನಾಗಿರಲಿದೆ. ವಿವಾಹಿತ ಜೋಡಿಗಳ ಬದುಕಿನಲ್ಲಿ ಒತ್ತಡವು ಕಡಿಮೆಯಾಗಲಿದೆ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ. ಈ ವಾರದಲ್ಲಿ ನಿಮ್ಮ ಪ್ರೇಮ ನಿವೇದನೆ ಮಾಡಲು ಒಳ್ಳೆಯ ಅವಕಾಶ ಪಡೆಯಲಿದ್ದೀರಿ. ಈ ಸಂದರ್ಭದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಎಚ್ಚರಿಕೆಯಿಂದ ಇರಬೇಕು. ಮಾರುಕಟ್ಟೆಯಲ್ಲಿರುವ ಇತರರು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೂ ನೀವು ಲಾಭ ಗಳಿಸಲಿದ್ದೀರಿ. ಅಂತಿಮವಾಗಿ ವಿಜಯವು ನಿಮ್ಮದೇ. ಉದ್ಯೋಗದಲ್ಲಿರುವವರು ಈ ವಾರದಲ್ಲಿ ಸಾಕಷ್ಟು ಕ್ರಿಯಾಶೀಲರಾಗಲಿದ್ದಾರೆ. ಹೊಸ ಜನರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ಸಾಕಷ್ಟು ಕಠಿಣ ಶ್ರಮ ಪಡಬೇಕು. ಆದರೆ ನೀವು ಇದಕ್ಕೆ ತಕ್ಕುದಾದ ಲಾಭ ಗಳಿಸಲಿದ್ದೀರಿ.
ಕನ್ಯಾ: ನಿಮ್ಮ ಖರ್ಚು ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ಆದಾಯದಲ್ಲಿ ಏರಿಕೆ ಉಂಟಾಗಲಿದೆ. ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಹಿಂದಿಗಿಂತಲೂ ಹೆಚ್ಚಿನ ಹಣ ಇರಲಿದೆ. ಆದರೆ ಕೌಟುಂಬಿಕ ಬದುಕಿನಲ್ಲಿ ಒತ್ತಡ ಉಂಟಾಗಬಹುದು. ಮನೆಯಲ್ಲಿ ಏನಾದರೂ ವಿವಾದ ಉಂಟಾಗಬಹುದು. ಇದರಿಂದ ಹೊರಬರಲು ನೀವು ತಾಳ್ಮೆಯಿಂದ ವರ್ತಿಸಬೇಕು ಹಾಗೂ ಮಾತಿನ ಮೇಲೆ ನಿಗಾ ಇರಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ನಿಮಗೆ ಹೊಟ್ಟೆ ಅಥವಾ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಉತ್ತಮ ಆಹಾರಕ್ರಮ ಉತ್ತಮ ಆರೋಗ್ಯ ಎರಡಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು. ಅದನ್ನು ಸರಿಪಡಿಸಲು ಯತ್ನಿಸಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ಈ ನಡುವೆ ಹೊರಗಿನವರು ಯಾರಾದರೂ ಹಸ್ತಕ್ಷೇಪ ನಡೆಸಬಹುದು. ಇದರಿಂದಾಗಿ ಸಮಸ್ಯೆ ಉಂಟಾಗಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಉತ್ತಮ.
ತುಲಾ: ಈ ವಾರದಲ್ಲಿ ನಿಮ್ಮ ಮನಸ್ಸಿನ ಒತ್ತಡ ಹೆಚ್ಚಾಗಬಹುದು. ಅನೇಕ ವಿಚಾರಗಳ ಕುರಿತು ಯೋಚಿಸುವುದರಿಂದ ನಿಮಗೆ ಚಿಂತೆ ಕಾಡಬಹುದು. ಹೀಗಾಗಿ ನಿಮ್ಮ ಜೀವನ ಸಂಗಾತಿಯ ಸಲಹೆಯನ್ನು ನೀವು ಪಾಲಿಸಬೇಕು. ಅವರ ಸಲಹೆಯು ನಿಮಗೆ ಉಪಯುಕ್ತವೆನಿಸಲಿದ್ದು, ಅದರಿಂದ ಪ್ರಯೋಜನ ಗಳಿಸಲಿದ್ದೀರಿ. ಈ ಸಮಯವು ವ್ಯವಹಾರದ ವಿಚಾರದಲ್ಲಿ ಚೆನ್ನಾಗಿರಲಿದೆ. ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ವರ್ಗಾಯಿಸಿ ಹಾಗೂ ಬಾಕಿ ಉಳಿದಿರುವ ದೊಡ್ಡ ಕೆಲಸವನ್ನು ಮತ್ತೆ ಪ್ರಾರಂಭಿಸಲು ಯತ್ನಿಸಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಕ್ರಿಯರಾಗಲಿದ್ದಾರೆ ಹಾಗೂ ಸಾಕಷ್ಟು ಓಡಾಟ ಮಾಡಲಿದ್ದಾರೆ. ಕುಟುಂಬದ ಹಿರಿಯರ ಬೆಂಬಲವು ನಿಮಗೆ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳಲಿದೆ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ಉತ್ತಮ ಸಂವಹನವನ್ನು ಸಾಧಿಸಲು ಯತ್ನಿಸಿ. ಈ ವಾರವು ಪ್ರೇಮಿಗಳಿಗೆ ಅನುಕೂಲಕರ. ಪ್ರೇಮ ವಿವಾಹದ ಪ್ರಸ್ತಾಪವನ್ನು ನೀವು ಮುಂದಿರಿಸಬಹುದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ.
ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚು ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಆರೋಗ್ಯವು ದುರ್ಬಲವಾಗಿರಲಿದ್ದು, ಇದಕ್ಕೆ ನೀವು ಗಮನ ಹರಿಸಬೇಕು. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ವೆಚ್ಚವೂ ಇರಲಿದೆ. ಒಟ್ಟಾರೆಯಾಗಿ ಆದಾಯ ಮತ್ತು ಖರ್ಚು ಎರಡೂ ಇರಲಿವೆ. ಆದರೂ ನೀವು ಚಿಂತಿಸುವ ಅಗತ್ಯವಿಲ್ಲ. ಆದರೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವೆಚ್ಚಗಳು ಉಂಟಾಗಬಹುದು. ಪ್ರಯಾಣಿಸದೆ ಇರುವುದು ಒಳ್ಳೆಯದು. ನೃತ್ಯ ಮತ್ತು ಅಧ್ಯಯನಕ್ಕೆ ಗಮನ ನೀಡಿ ಹಾಗೂ ಅಧ್ಯಯನಕ್ಕೆ ಅಡ್ಡಿಯನ್ನುಂಟು ಮಾಡುವ ಗೆಳೆಯರಿಂದ ದೂರವಿರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರ ಅನುಕೂಲಕರ. ನಿಮ್ಮ ಸಂಬಂಧದ ಕುರಿತು ನೀವು ಅಭಿಮಾನ ಪಡಲಿದ್ದೀರಿ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕನ್ನು ಅರಿತುಕೊಳ್ಳಲಿದ್ದಾರೆ ಹಾಗೂ ತಮ್ಮ ಜೀವನ ಸಂಗಾತಿಯನ್ನು ಬೆಂಬಲಿಸಲಿದ್ದಾರೆ. ಅಲ್ಲದೆ ಅವರ ವಿಶೇಷ ಆಸೆಯನ್ನು ಈಡೇರಿಸಲು ಯತ್ನಿಸಲಿದ್ದಾರೆ. ವ್ಯಾಪಾರೋದ್ಯಮಿಗಳಿಗೆ ಇದು ಸಾಮಾನ್ಯ ಸಮಯವಾಗಿದ್ದು, ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ.
ಧನು: ನಿಮ್ಮ ಆದಾಯದಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದ್ದು, ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ಹೊಟ್ಟೆ ಮತ್ತು ಹೊಕ್ಕುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯವಹಾರದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ನೀವು ದಕ್ಷತೆಯಿಂದ ಕೆಲಸ ಮಾಡುವುದರಿಂದ ನಿಮಗೆ ಒಳ್ಳೆಯ ಸ್ಥಾನಮಾನ ದೊರೆಯಲಿದೆ. ಕೆಲಸದ ಸ್ಥಳದಲ್ಲಿಯೂ ಒಳ್ಳೆಯ ಸ್ಥಾನಮಾನ ದೊರೆಯಲಿದೆ. ಆದರೆ ಬಾಸ್ ಜೊತೆಗೆ ಚೆನ್ನಾಗಿ ವರ್ತಿಸಿ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ವ್ಯವಹಾರದಲ್ಲಿ ನೀವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕೆಲವೊಂದು ಸವಾಲುಗಳು ನಿಮಗೆ ಎದುರಾಗಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಿಮ್ಮ ಕೆಲಸಕ್ಕೆ ಹೆಚ್ಚು ಸಮಯವನ್ನು ನೀವು ಮೀಸಲಿಡಲಿದ್ದು, ಜೀವನ ಸಂಗಾತಿಗೆ ಕಡಿಮೆ ಸಮಯ ನೀಡಲಿದ್ದೀರಿ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರು ಕಾಣಲಿದ್ದಾರೆ. ವಿಪರೀತ ವಾಗ್ವಾದ ಅಥವಾ ಸಂಘರ್ಷವು ಸಂಬಂಧವನ್ನು ಹಾಳುಗೆಡವಬಹುದು. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಗಮನ ನೀಡುವುದಕ್ಕಾಗಿ ಯಾರಾದರೂ ಹೊರಗಿನ ಗುರು ಅಥವಾ ಮಾರ್ಗದರ್ಶಕರ ಅಗತ್ಯವಿದೆ.
ಮಕರ: ಈ ವಾರವು ನಿಮಗೆ ಬಲ ನೀಡಲಿದೆ. ಕೆಲಸದಲ್ಲಿ ಬಡ್ತಿ ಮತ್ತು ವರ್ಚಸ್ಸು ಹೆಚ್ಚುವ ಸಾಧ್ಯತೆ ಇದೆ. ನೀವು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡದಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಅಲ್ಲದೆ ನಿಮ್ಮ ಗೌರವವು ಹೆಚ್ಚುತ್ತದೆ. ಮನಸ್ಸಿನಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಚಾರಗಳು ನೆಲೆಸಲಿವೆ. ಒಳ್ಳೆಯ ಕೆಲಸಕ್ಕಾಗಿ ನಿಮಗೆ ಮನ್ನಣೆ ಮತ್ತು ಗೌರವ ದೊರೆಯಲಿದೆ. ವ್ಯವಹಾರಕ್ಕೆ ಈ ಸಮಯ ಒಳ್ಳೆಯದು. ಆದರೆ ನಿಮ್ಮ ಮೇಲೆ ನಿಯಂತ್ರಣವಿರಲಿ. ಅಲ್ಲದೆ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಲು ಯತ್ನಿಸಿ. ಯಾರೊಂದಿಗೂ ಅನಗತ್ಯವಾಗಿ ಸಂಘರ್ಷಕ್ಕೆ ಇಳಿಯಬೇಡಿ. ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಸೋಂಕುಭರಿತ ರೋಗಗಳು ಅಥವಾ ರಕ್ತದಿಂದ ನಿಮಗೆ ಸಮಸ್ಯೆಯುಂಟಾಗಬಹುದು. ಈ ಕಾಲವು ವೈವಾಹಿಕ ಬದುಕಿಗೆ ಅನುಕೂಲಕರ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಅನ್ಯೋನ್ಯತೆಯಿಂದ ಇರಲಿದ್ದು, ನಿಮ್ಮ ಸಂಗಾತಿಯು ನಿಮ್ಮನ್ನು ಸಂತೋಷದಿಂದ ಇಡಲಿದ್ದಾರೆ. ವಾರದ ಅರಂಭದಲ್ಲಿ ಒಂದಷ್ಟು ಮುಂಜಾಗರೂಕತೆಯನ್ನು ತೆಗೆದುಕೊಳ್ಳಿ. ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ವಿಳಂಬ ಉಂಟಾಗಬಹುದು.
ಕುಂಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಒಂದಷ್ಟು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಆದರೆ ಈ ಸಮಸ್ಯೆಯು ಬೇಗನೇ ಬಗೆಹರಿಯಲಿದ್ದು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಸಂತುಲಿತ ಆಹಾರವನ್ನು ಸೇವಿಸಿ ಮತ್ತು ಚೆನ್ನಾಗಿ ವ್ಯಾಯಾಮ ಮಾಡಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ನಡುವಿನ ದಿನಗಳು ಉತ್ತಮ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕುರಿತು ಜಾಗರೂಕರಾಗಿರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ಆದರೂ ನಿಮ್ಮ ಗಮನಭಂಗ ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಾಧಾರಣ ವಾರ ಎನಿಸಲಿದೆ. ನಿಮ್ಮ ಕೆಲಸದಲ್ಲಿ ನಿಮ್ಮನ್ನು ಅತೃಪ್ತಿ ಕಾಡಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ನೀವು ಬೇಗನೆ ಪ್ರಗತಿ ಸಾಧಿಸಲಿದ್ದೀರಿ. ಯಾರನ್ನೂ ನೋಯಿಸಬೇಡಿ.
ಮೀನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಈ ವಾರದ ಆರಂಭದಲ್ಲಿ ನಿಮ್ಮಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸಲು ಯತ್ನಿಸಲಿದ್ದೀರಿ. ಏಕೆಂದರೆ ನಿಮ್ಮ ಕುಂದುಕೊರತೆಗಳ ಬಗ್ಗೆ ನಿಮಗೆ ಅರಿವಿದೆ. ಈ ಮೂಲಕ ನಿಮ್ಮೊಳಗೆ ಹೊಸ ಬದಲಾವಣೆಯನ್ನು ಕಾಣಲಿದ್ದೀರಿ. ವಾರದ ನಡುವೆ ದೃಢತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಜನರು ನಿಮ್ಮನ್ನು ಹೊಗಳಲಿದ್ದಾರೆ. ಇದು ನಿಮಗೆ ಸಾಕಷ್ಟು ತೃಪ್ತಿಯನ್ನು ನೀಡಲಿದ್ದು, ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಕೆಲಸವನ್ನು ಸಾಕಷ್ಟು ಗಮನವಿಟ್ಟು ಮಾಡಲಿದ್ದೀರಿ. ಹೀಗಾಗಿ ದಕ್ಷ ವ್ಯಕ್ತಿಗಳ ನಡುವೆ ನಿಮ್ಮನ್ನು ಗುರುತಿಸಲಾಗುತ್ತದೆ. ನಿಮ್ಮ ಬಾಸ್ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಹಾಗೂ ನಿಮ್ಮನ್ನು ಬೆಂಬಲಿಸಿದ್ದಾರೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಅವರು ಸಹಾಯ ಮಾಡಲಿದ್ದಾರೆ. ನಿಮ್ಮ ಪ್ರೇಮ ಬದುಕು ಸಾಧಾರಣವಾಗಿರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಾರದ ನಡುವೆ ಪ್ರಯಾಣಿಸಬೇಡಿ.