ಮೇಷ: ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಕಾಡುತ್ತಿರುವ ಸಮಸ್ಯೆಗಳನ್ನು ದೂರಗೊಳಿಸಲು ನಿಮ್ಮ ಅತ್ತೆ ಮಾವಂದಿರೊಂದಿಗೆ ಮಾತನಾಡುವುದು ಅಗತ್ಯ. ಆದರೆ ಇದರ ಫಲಿತಾಂಶ ಪಡೆಯಲು ಸಮಯ ಬೇಕಾದೀತು. ಪ್ರೇಮ ಜೀವನ ಸಾಗಿಸುತ್ತಿರುವ ಜನರ ಮನದಲ್ಲಿ ಪ್ರೇಮ ನೆಲೆಸಲಿದೆ. ಆದರೆ ಇದೆಲ್ಲವನ್ನು ಅವರ ಪ್ರೇಮಿಗೆ ವ್ಯಕ್ತಪಡಿಸುವಲ್ಲಿ ಅವರು ಸಮಸ್ಯೆ ಎದುರಿಸಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೊರಬಂದು ಎಲ್ಲವನ್ನೂ ಅವರಿಗೆ ಸ್ಪಷ್ಟವಾಗಿ ಹೇಳಿ ಬಿಡಿ. ಆಗ ಮಾತ್ರವೇ ನಿಮ್ಮ ಪ್ರೇಮದ ಬಂಡಿಯು ಮುಂದೆ ಸಾಗಲಿದೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಸಹೋದರರು ಮತ್ತು ಸಹೋದರಿಯರ ಪ್ರೇಮವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ಶೀಘ್ರ ಪ್ರಗತಿ ದೊರೆಯಲಿದೆ. ಬಾಕಿ ಉಳಿದಿರುವ ಕೆಲಸದಿಂದ ನೀವು ದೂರ ಹೋಗಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ನಿಮ್ಮ ಕೆಲಸವನ್ನು ಜನರು ಗುರುತಿಸಲಿದ್ದಾರೆ. ಇದರಿಂದ ನಿಮಗೆ ಪ್ರಯೋಜನ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಬಹುದು.
ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈಯಕ್ತಿಕ ಬದುಕಿನಲ್ಲಿ ನೀವು ಸಂತಸ ಅನುಭವಿಸಲಿದ್ದೀರಿ. ಏಕೆಂದರೆ ಸಮಯವು ನಿಮ್ಮ ಪರವಾಗಿದೆ. ನೀವು ಪ್ರೇಮ ಸಂಬಂಧದಲ್ಲಿದ್ದರೂ ಅಥವಾ ವೈವಾಹಿಕ ಸಂಬಂಧದಲ್ಲಿದ್ದರೂ ನಿಮ್ಮ ಬದುಕನ್ನು ನೀವು ಆನಂದಿಸಲಿದ್ದೀರಿ. ಜೀವನ ಸಂಗಾತಿ ಅಥವಾ ಪ್ರೇಮಿಯ ಜೊತೆಗಿನ ಆಪ್ತತೆಯಲ್ಲಿ ವೃದ್ಧಿ ಉಂಟಾಗಲಿದೆ. ನೀವು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇದು ಭವಿಷ್ಯದಲ್ಲಿ ನಿಮ್ಮ ಪ್ರಯೋಜನಕ್ಕೆ ಬರಲಿದೆ. ಆದರೆ ನಿಮ್ಮಲ್ಲಿ ಅಹಂ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ಗೆಳೆಯರ ಜೊತೆಗಿನ ಸಂಬಂಧವನ್ನು ಹಾಳು ಮಾಡಬಹುದು. ಹೀಗಾಗಿ ಇದರಿಂದ ದೂರವಿರಲು ಯತ್ನಿಸಿ. ಕೆಲವೊಂದು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇದರಿಂದಾಗಿ ಮನೆಯ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದಾಯದ ಕುರಿತು ಮಾಡಿದ ಪ್ರಯತ್ನಗಳಿಗೆ ತಕ್ಕುದಾದ ಫಲ ದೊರೆಯಲಿದೆ. ಆದರೆ ನಿಮ್ಮ ನಿರೀಕ್ಷೆಗೂ ಮಿಕ್ಕಿ, ಆದಾಯಕ್ಕೆ ಪ್ರತಿಯಾಗಿ ಖರ್ಚಿನಲ್ಲೂ ಹೆಚ್ಚಳ ಉಂಟಾಗಬಹುದು. ಈ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮವನ್ನು ಮುಂದುವರಿಸಲಿದ್ದಾರೆ ಹಾಗೂ ತಮ್ಮ ಕಠಿಣ ಶ್ರಮದ ಪ್ರಯೋಜನವನ್ನು ಪಡೆಯಲಿದ್ದಾರೆ. ಆದರೆ ಸಹೋದ್ಯೋಗಿಗಳ ಬೆಂಬಲ ಪಡೆಯುವುದು ಕಷ್ಟಕರ.
ಮಿಥುನ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಆದರೂ ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೇಮ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ಸದ್ಯಕ್ಕೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಅಲ್ಲದೆ ಭವಿಷ್ಯದ ಕುರಿತು ಧನಾತ್ಮಕವಾಗಿ ಯೋಚಿಸಿ. ಅನಗತ್ಯವಾಗಿ ವಾದ ಮಾಡುವುದರಿಂದ ಯಾವುದೇ ಪ್ರಯೋಜನ ದೊರೆಯದು. ಉದ್ಯೋಗದಲ್ಲಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಹಿರಿಯರ ಜೊತೆಗೆ ಉತ್ತಮ ಸಂಬಂಧವನ್ನು ರೂಪಿಸಲು ನೀವು ಯತ್ನಿಸಬೇಕು. ಯಾವುದೇ ವಿಷಯದ ಕುರಿತು ಅವರ ಜೊತೆಗೆ ವಾಗ್ವಾದ ಮಾಡಬೇಡಿ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರ ಏಕಾಗ್ರತೆಯು ದುರ್ಬಲಗೊಳ್ಳಲಿದೆ. ಇದು ಅಧ್ಯಯನದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಆಡಬೇಕು. ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಮೊದಲು ನಿಮ್ಮ ಎದುರಿನ ವ್ಯಕ್ತಿಯ ಮನೋಸ್ಥಿತಿ ಹೇಗಿದೆ ಎಂಬುದನ್ನು ಅನೇಕ ಬಾರಿ ಯೋಚಿಸಿ. ನೀವು ವ್ಯಕ್ತಪಡಿಸುವ ಮಾತುಗಳನ್ನು ಅವರು ತಪ್ಪಾಗಿ ಅರ್ಥೈಸಬಹುದು. ಹೀಗಾಗಿ ತಾಳ್ಮೆಯಿಂದ ವರ್ತಿಸಿ. ವಾರದ ಆರಂಭದಿಂದಲೇ ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ. ಆತ್ಮವಿಶ್ವಾಸದ ಆಧಾರದಲ್ಲಿ ಅನೇಕ ಕಷ್ಟಕರ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ. ಕೆಲಸದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದು ನಿಮ್ಮ ಬಾಸ್ ಬೆಂಬಲವನ್ನು ಪಡೆಯಲಿದ್ದೀರಿ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಹಣಕಾಸಿನ ಮೇಲೆ ಒತ್ತಡ ಉಂಟಾಗಬಹುದು. ನೀವು ಸರ್ಕಾರಿ ಕ್ಷೇತ್ರದಿಂದ ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಸಮಯವು ಸ್ವಲ್ಪ ದುರ್ಬಲವಾಗಿದೆ. ಏಕೆಂದರೆ ನಿಮ್ಮ ಕೆಲಸವನ್ನು ಮುಂದುವರಿಯಲು ನೀವು ಮಾನಸಿಕವಾಗಿ ಸಿದ್ಧರಾಗಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ವರ್ತಿಸಬೇಕು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಇದೇ ವೇಳೆ ನಿಮ್ಮ ಮನಸ್ಸಿನಲ್ಲಿರುವುದೆಲ್ಲವನ್ನು ನಿಮ್ಮ ಪ್ರೇಮಿಗೆ ತಿಳಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಪ್ರಯಾಣದಿಂದ ಲಾಭ ಗಳಿಸಲಿದ್ದಾರೆ. ಏನಾದರೂ ಹೊಸತನ್ನು ಮಾಡಲು ಯತ್ನಿಸಿ. ದೂರದ ಪ್ರದೇಶಗಳಿಗೆ ಪ್ರಯಾಣಕ್ಕೆ ಹೋಗುವ ಅನಿವಾರ್ಯತೆ ಉಂಟಾದೀತು. ಕೆಲವೊಂದು ಹೊಸ ಜನರನ್ನು ಭೇಟಿ ಮಾಡುವುದರಿಂದ ಹೊಸತನ ದೊರೆಯಲಿದೆ. ಗೆಳೆಯರು ಸಹ ಬೆಂಬಲ ನೀಡಲಿದ್ದಾರೆ. ನಿಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದೀರಿ. ಸರ್ಕಾರದಿಂದ ದೊಡ್ಡ ಮಟ್ಟದ ಪ್ರಯೋಜನ ದೊರೆಯಬಹುದು. ನೀವು ಸರ್ಕಾರಿ ಉದ್ಯೋಗಿ ಆಗಿದ್ದರೆ ನಿಮಗೆ ಅದ್ಭುತ ಲಾಭ ದೊರೆಯಲಿದೆ. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ನೀವು ವೇಳಾಪಟ್ಟಿಯನ್ನು ರಚಿಸಿ ಅದರಂತೆಯೇ ಮುಂದುವರಿಯಬೇಕು. ಆಗ ಮಾತ್ರವೇ ಯಶಸ್ಸು ಲಭಿಸಲಿದೆ.
ಕನ್ಯಾ: ಈ ವಾರ ನಿಮಗೆ ನಿರಾಳತೆ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಯಾವುದಾದರೂ ಕಾರಣಕ್ಕೆ ಒಂದಷ್ಟು ಸಮಸ್ಯೆ ಉಂಟಾಗಬಹುದು. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಮುಂದುವರಿಯಿರಿ. ಅವರಿಗೆ ಸುಂದರ ಉಡುಗೊರೆಯನ್ನು ಖರೀದಿಸಿ. ನೀವು ಕೆಲಸ ಮಾಡುವಲ್ಲಿ ಪರಿಸ್ಥಿತಿಯು ನಿಮ್ಮ ಪರವಾಗಿ ಇರಲಿದೆ. ನಿಮ್ಮ ಕೆಲಸವನ್ನು ಶಕ್ತಿಯಿಂದ ನೆರವೇರಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ತಪ್ಪು ಗ್ರಹಿಕೆಗಳು ಇದ್ದರೂ ಅವು ದೂರಗೊಳ್ಳಲಿದ್ದು, ಕೆಲಸದಲ್ಲಿ ಮೋಜು ಅನುಭವಿಸಲಿದ್ದೀರಿ. ನಿಮ್ಮ ತಂಡದ ಸದಸ್ಯರು ನಿಮಗೆ ಉತ್ತಮ ಬೆಂಬಲ ಒದಗಿಸಲಿದ್ದಾರೆ. ಇದರಿಂದಾಗಿ ಬಡ್ತಿ ದೊರೆಯಲು ಸುಲಭ ಅವಕಾಶ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿದೆ.
ತುಲಾ: ಈ ವಾರದಲ್ಲಿ ನಿಮ್ಮ ಪಾಲಿಗೆ ಬೆಳಕು ಮತ್ತು ನೆರಳಿನ ಸನ್ನಿವೇಶ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳ ಕುರಿತು ನಾವು ಮಾತನಾಡುವುದಾದರೆ, ಅವರಿಗೆ ಕೌಟುಂಬಿಕ ಬದುಕಿನಲ್ಲಿ ತೃಪ್ತಿ ದೊರೆಯಲಿದೆ. ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ನಡುವಿನ ಅನ್ಯೋನ್ಯತೆ ಉತ್ತಮಗೊಳ್ಳಲಿದೆ. ಇದರಿಂದಾಗಿ ನೀವು ಸಂತಸ ಅನುಭವಿಸಲಿದ್ದೀರಿ. ನೀವು ಇದನ್ನು ಇನ್ನೂ ಉತ್ತಮಪಡಿಸಬಹುದು. ಇದಕ್ಕಾಗಿ ನೀವು ಸ್ವಲ್ಪ ಆಸಕ್ತಿ ತೆಗೆದುಕೊಳ್ಳಬೇಕು. ನಿಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದೀರಿ. ಸದ್ಯಕ್ಕೆ ನೀವು ಕೋಪದಲ್ಲಿ ನಿಮ್ಮ ಗೆಳೆಯರಿಗೆ ಏನನ್ನಾದರೂ ಹೇಳಬಹುದು. ಹೀಗೆ ಆಗದಂತೆ ನೋಡಿಕೊಳ್ಳಿ. ಕೆಲಸದ ಸ್ಥಳದಲ್ಲಿಯೂ ನೀವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಹಾಗೂ ಸಾಕಷ್ಟು ಯೋಚಿಸಿ ಮುಂದೆ ಸಾಗಬೇಕು. ಸದ್ಯಕ್ಕೆ ಕೆಲಸವನ್ನು ಬದಲಾಯಿಸಬೇಡಿ. ಏಕೆಂದರೆ ಸದ್ಯಕ್ಕೆ ನಿಮಗೆ ಹೊಸ ಹುದ್ದೆ ದೊರೆಯಲಿದೆ. ಈ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಕೆಲಸದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಆಗ ಕೆಲಸದ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನೀವು ಈ ತನಕ ಮಾಡಿರುವ ಕಠಿಣ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ.
ವೃಶ್ಚಿಕ: ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಒತ್ತಡವನ್ನು ಎದುರಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ವಾಗ್ವಾದ ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಬದುಕಿನಲ್ಲಿ ಮುಂದೆ ಸಾಗುವುದಕ್ಕಾಗಿ ನಿಮ್ಮ ಪ್ರೇಮಿಯು ಕೆಲವೊಂದು ವಿಶೇಷ ಸಲಹೆಗಳನ್ನು ನೀಡಬಹುದು. ಕುಟುಂಬದ ವಾತಾವರಣವು ಶಾಂತಿಯಿಂದ ಕೂಡಿರಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ವ್ಯವಹಾರದಲ್ಲಿ ನಿಮ್ಮ ನೀತಿ ನಿಯಮಗಳ ಲಾಭ ದೊರೆಯಲಿದೆ. ದೊಡ್ಡ, ಅನುಭವಿ ಮತ್ತು ಪ್ರಭಾವಿ ವ್ಯಕ್ತಿಯಿಂದ ನಿಮಗೆ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ನೀವು ಉದ್ಯೋಗದಲ್ಲಿದ್ದರೆ, ಇದು ನಿಮಗೆ ಸಕಾಲ. ಬಡ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಸಮಯದ ಸಂಪೂರ್ಣ ಲಾಭ ಪಡೆಯಿರಿ. ಬಾಸ್ ಜೊತೆಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ಅವರ ಕಠಿಣ ಶ್ರಮಕ್ಕೆ ಸಂಪೂರ್ಣ ಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ. ಆದರೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗದು.
ಧನು: ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಒಟ್ಟಿಗೆ ಎಲ್ಲಾದರೂ ವಾಕ್ಗೆ ಹೋಗಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಪ್ರಣಯಭರಿತ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ಈ ಅವಕಾಶ ಕೈ ತಪ್ಪಿ ಹೋಗದಂತೆ ನೀವು ನೋಡಿಕೊಳ್ಳಲಿದ್ದೀರಿ. ಇದು ನಿಮ್ಮ ಸಂಬಂಧದಲ್ಲಿ ಪ್ರೇಮವನ್ನು ಚಿಗುರಿಸಲಿದೆ. ನೀವು ಪರಸ್ಪರ ಆಪ್ತತೆಯನ್ನು ಸಾಧಿಸಲಿದ್ದೀರಿ ಹಾಗೂ ಪರಸ್ಪರ ಬೆಂಬಲಿಸಲಿದ್ದೀರಿ. ಇದು ಮನೆಯ ವಾತಾವರಣದಲ್ಲಿ ಧನಾತ್ಮಕತೆಯನ್ನು ತರಲಿದೆ. ದೀರ್ಘ ಸಮಯದ ನಂತರ ಬದುಕಿನಲ್ಲಿ ಕೆಲವೊಂದು ಒಳ್ಳೆಯ ಅವಕಾಶಗಳು ದೊರೆಯಲಿವೆ. ನಿಮ್ಮ ಸಮಸ್ಯೆಗಳು ಮತ್ತು ಮನಸ್ಸಿನ ಭಾವನೆಗಳನ್ನು ನಿಮ್ಮ ಪ್ರೇಮಿಯೊಂದಿಗೆ ಹಂಚಿ ಕೊಳ್ಳಲಿದ್ದೀರಿ. ಹೀಗಾಗಿ ನಿಮ್ಮ ನಡುವಿನ ನಂಬಿಕೆ ಮತ್ತು ಪ್ರೇಮವು ಹೆಚ್ಚಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ಮೊಬೈಲ್ ಫೋನ್ ಮಾರಾಟ, ಸಿ.ಎಸ್, ವ್ಯವಹಾರ ಇತ್ಯಾದಿಗಳಲ್ಲಿ ಕೆಲಸ ಮಾಡುವವರು ಈ ವಾರದಲ್ಲಿ ಎಲ್ಲಾ ದಾಖಲೆಯನ್ನು ಮುರಿಯಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಸಾಕಷ್ಟು ನಿರಾಳತೆ ದೊರೆಯಲಿದೆ. ಅಲ್ಲದೆ ನಿಮ್ಮ ಕೆಲಸಕ್ಕೆ ತಕ್ಕುದಾದ ಫಲಿತಾಂಶ ದೊರೆಯಲಿದ್ದು, ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ.
ಮಕರ: ಈ ವಾರ ನಿಮಗೆ ಶುಭ ಸುದ್ದಿಯನ್ನು ತರಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬರಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ತನ್ನ ಅಹಂನ ಕಾರಣ ನಿಮ್ಮ ಪ್ರೇಮಿಯು ಏನಾದರೂ ತಪ್ಪನ್ನು ಮಾಡಬಹುದು. ಇದರಿಂದಾಗಿ ನೀವು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ಳಬಹುದು. ಬ್ಯಾಂಕಿನಿಂದ ಹೊಸ ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಅಲ್ಲದೆ ಹಳೆಯ ಸಾಲದ ಪಾವತಿಯೂ ಉಂಟಾಗಬಹುದು. ಸರ್ಕಾರದ ಬೆಂಬಲವನ್ನು ಪಡೆಯುವ ಮೂಲಕ ವ್ಯವಹಾರದಲ್ಲಿ ನೀವು ಉತ್ತಮ ಡೀಲನ್ನು ಪಡೆಯಬಹುದು. ಸರ್ಕಾರಿ ವಲಯವನ್ನು ಸೇರುವ ಮೂಲಕ ನೀವು ಸಾಕಷ್ಟು ಹಣವನ್ನು ಪಡೆಯಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡಲಿದ್ದು ಕಠಿಣ ಶ್ರಮ ತೋರಲಿದ್ದೀರಿ. ಇದು ಮುಂದಿನ ದಿನದಲ್ಲಿ ನಿಮಗೆ ಅನುಕೂಲಕರ ಫಲಿತಾಂಶ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಒಂದಷ್ಟು ಸಮಸ್ಯೆಗಳು ಮತ್ತು ಅಡಚಣೆಗಳನ್ನು ಎದುರಿಸಲಿದ್ದಾರೆ.
ಕುಂಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ನೀವು ಪಡೆಯಲಿದ್ದೀರಿ. ನೀವು ಹೊಸ ಕೆಲಸವನ್ನು ಮಾಡಲು ಇಚ್ಛಿಸುವುದಾದರೆ ನೀವು ಇದನ್ನು ಮಾಡಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧದಲ್ಲಿ ಸಾಕಷ್ಟು ಪ್ರೇಮವನ್ನು ಅನುಭವಿಸಲಿದ್ದೀರಿ. ಆದರೆ ಏನಾದರೂ ವಿಷಯದ ಕುರಿತು ಮನೆಯಲ್ಲಿ ಸಂಘರ್ಷ ಉಂಟಾಗಬಹುದು. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ. ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ಉದ್ಯೋಗದಲ್ಲಿರುವವರಿಗೆ ಸಮಯವು ಚೆನ್ನಾಗಿದೆ. ನಿಮ್ಮ ಕೆಲಸದಲ್ಲಿ ಏನಾದರೂ ಹೊಸತನ್ನು ಪಡೆಯಲು ನಿಮಗೆ ಅವಕಾಶ ದೊರೆಯಲಿದೆ. ಇದು ನಿಮ್ಮ ಸಂತಸವನ್ನು ಹೆಚ್ಚಿಸಲಿದೆ. ವ್ಯವಹಾರದ ವಿಚಾರದಲ್ಲಿ ಈ ಸಮಯವು ಕಠಿಣತೆಯಿಂದ ಕೂಡಿರಲಿದೆ. ಸದ್ಯಕ್ಕೆ ನೀವು ಸಾಕಷ್ಟು ಪ್ರಯಾಣವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರವು ಅವರ ಪಾಲಿಗೆ ಒಳ್ಳೆಯದು. ಸದ್ಯಕ್ಕೆ ಅವರು ಅಧ್ಯಯನದಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆಹಾರ ಕ್ರಮಕ್ಕೆ ನೀವು ಕಾಳಜಿ ವಹಿಸಬೇಕು.
ಮೀನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಪ್ರೇಮದ ಬದುಕು ಸಾಗಿಸುವ ವ್ಯಕ್ತಿಗಳಿಗೆ ಇದು ಅನುಕೂಲಕರ ಸಮಯ. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಸಂತಸ ಕಾಣುವುದರಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಜೀವನ ಸಂಗಾತಿಯೂ ಇದಕ್ಕೆ ಸಂಪೂರ್ಣವಾಗಿ ಕೊಡುಗೆ ನೀಡಲಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ಭೇಟಿ ಮಾಡಬೇಕು. ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದೀರಿ. ಇದರಿಂದ ನಿಮ್ಮ ಸಂತಸ ಇಮ್ಮಡಿಗೊಳ್ಳಲಿದೆ. ಅಲ್ಲದೆ ಆತ್ಮವಿಶ್ವಾಸದಲ್ಲಿಯೂ ವೃದ್ಧಿ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಲಾಭದಾಯಕ. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಖರ್ಚುವೆಚ್ಚಗಳಲ್ಲಿ ಸ್ವಲ್ಪ ಹೆಚ್ಚಳ ಉಂಟಾಗಬಹುದು. ಆದರೆ ಈ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ. ಆರ್ಥಿಕ ಸ್ಥಿತಿಯಲ್ಲಿ ಮೆಲ್ಲನೆ ವೃದ್ಧಿ ಉಂಟಾಗುತ್ತದೆ.