ETV Bharat / bharat

ಈ ವಾರ ಯಾರಿಗೆ ಶುಭ ದಿನಗಳು?: ನೋಡಿ ನಿಮ್ಮ ವಾರದ ರಾಶಿ ಫಲ - ವಾರದ ರಾಶಿ ಭವಿಷ್ಯ

ಈ ವಾರದ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Weekly Horoscope
ವಾರದ ರಾಶಿ ಭವಿಷ್ಯ
author img

By

Published : Jun 19, 2022, 6:59 AM IST

ಮೇಷ: ಈ ವಾರ ನಿಮಗೆ ಒಟ್ಟಾರೆ ಫಲದಾಯಕ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ನೀವು ಗಮನ ನೀಡಲಿದ್ದೀರಿ. ನೀವು ಮಾಡಿರುವ ತಪ್ಪುಗಳನ್ನು ಅರಿತುಕೊಳ್ಳುವ ಮೂಲಕ ಹಾಗೂ ಈ ತಪ್ಪುಗಳಿಗಾಗಿ ನಿಮ್ಮ ಪ್ರೇಮಿಯ ಬಳಿ ಕ್ಷಮೆ ಯಾಚಿಸುವ ಮೂಲಕ ನಿಮ್ಮ ಪ್ರೇಮದ ಬದುಕನ್ನು ವೃದ್ಧಿಸಲು ಯತ್ನಿಸಲಿದ್ದೀರಿ. ಇದು ಅವರ ಕಣ್ಣುಗಳಲ್ಲಿ ನಿಮ್ಮ ಮೌಲ್ಯವನ್ನು ಎತ್ತಿ ಹಿಡಿಯಲಿದೆ ಹಾಗೂ ನಿಮ್ಮ ಸಂಬಂಧವನ್ನು ಸದೃಢ ಮತ್ತು ಸಂತಸದಾಯಕವಾಗಿ ಮಾಡಲಿದೆ. ವಿವಾಹಿತ ವ್ಯಕ್ತಿಗಳು ಈ ವಾರದಲ್ಲಿ ಸಾಮಾನ್ಯ ವೈವಾಹಿಕ ಬದುಕನ್ನು ನಡೆಸಲಿದ್ದಾರೆ. ನಿಮ್ಮ ಜೀವನ ಸಂಗಾತಿ ಕೌಟುಂಬಿಕ ಜವಾಬ್ದಾರಿಯನ್ನು ಅರಿತುಕೊಳ್ಳಲಿದ್ದಾರೆ ಹಾಗೂ ಒಂದಷ್ಟು ಸಲಹೆಗಳನ್ನು ನೀಡಲಿದ್ದು, ಅದು ನಿಮ್ಮ ಪಾಲಿಗೆ ಸಾಕಷ್ಟು ಉಪಯುಕ್ತವೆನಿಸಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರವಲ್ಲ.

ವೃಷಭ: ಈ ವಾರವು ವೃಷಭ ರಾಶಿಯವರಿಗೆ ಫಲದಾಯಕ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೆಲಸದ ಬಗ್ಗೆ ಏನಾದರೂ ವಿಚಾರದಲ್ಲಿ ನಿಮಗೆ ಅತೃಪ್ತಿ ಕಾಡಬಹುದು. ನೀವು ಅನಗತ್ಯವಾಗಿ ಹಾಗೂ ಕೊನೆಯಿಲ್ಲದೆ ಕೆಲಸ ಮಾಡುತ್ತಿದ್ದು, ಯಾವುದೇ ಫಲಿತಾಂಶವನ್ನು ಪಡೆಯುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಬಹುದು. ಆದರೆ ನಿಮ್ಮ ಭಾವನೆ ಮತ್ತು ವಾಸ್ತವಿಕತೆಯ ನಡುವೆ ಭಿನ್ನತೆ ಇರಬಹುದು. ನೀವು ಒಂದಷ್ಟು ಶುಭ ಸುದ್ದಿಯನ್ನೂ ಪಡೆಯಬಹುದು. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ ಹಾಗೂ ನಿಮ್ಮ ಕೆಲಸಕ್ಕೆ ಚಾಲನೆ ದೊರೆಯುತ್ತಿರುವುದನ್ನು ನೀವು ಗಮನಿಸಬಹುದು. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ ಹಾಗೂ ನಿಮ್ಮ ಖರ್ಚು ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನೀವು ಸಂತೃಪ್ತಿ ಅನುಭವಿಸಲಿದ್ದು, ನಿಮ್ಮ ಸಂತಸವನ್ನು ಇತರರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಪ್ರಣಯ ಹಾಗೂ ಪರಸ್ಪರ ಅರ್ಥೈಸುವಿಕೆಯಲ್ಲಿ ವೃದ್ಧಿ ಉಂಟಾಗಿರುವುದನ್ನು ನೀವು ಗಮನಿಸಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ನೀವು ಮುಕ್ತ ಮನಸ್ಸಿನಿಂದ ಮಾತನಾಡಬೇಕು. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು.

ಮಿಥುನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಅದೃಷ್ಟ ನಿಮ್ಮ ಪಾಲಿಗೆ ಇರಲಿದ್ದು, ನೀವು ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಸಮಯ ನಿರ್ವಹಣೆಯು ಚೆನ್ನಾಗಿರಲಿದ್ದು, ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ಅಲ್ಲದೆ ನಿಮ್ಮ ಕುಟುಂಬದ ಸದಸ್ಯರ ಜೊತೆ ಸಾಕಷ್ಟು ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಅಸಾಧಾರಣ ಫಲ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಲಾಭ ದೊರೆಯಲಿದೆ ಹಾಗೂ ಕಡಿಮೆ ಶ್ರಮದಿಂದ ಹೆಚ್ಚು ಲಾಭ ದೊರೆಯಲಿದೆ. ನಿಮ್ಮೊಳಗೆ ಅಹಂ ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ಅದರಿಂದ ದೂರವಿರಲು ಯತ್ನಿಸಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಎಲ್ಲವೂ ಸರಿ ಇರುವಂತಾಗಲು ನಿಮ್ಮ ವರ್ತನೆಯ ಮೇಲೆ ಕಣ್ಣಿಡಿ. ಸಂಬಂಧದಲ್ಲಿರುವ ವ್ಯಕ್ತಿಗಳ ಬದುಕಿನಲ್ಲಿ ಹೆಚ್ಚೇನೂ ಏರುಪೇರು ಉಂಟಾಗದು. ಅರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದಾಯದಲ್ಲಿ ಸ್ಥಿರತೆ ಇರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಅಲ್ಪ ಮಟ್ಟದ ಸುಧಾರಣೆಯನ್ನು ಗಮನಿಸಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕರ್ಕಾಟಕ: ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ವಾರದ ಆರಂಭಿಕ ದಿನಗಳಲ್ಲಿ ಯಾವುದೇ ದೊಡ್ಡ ಕೆಲಸಕ್ಕೆ ಕೈ ಹಾಕಬೇಡಿ. ಏಕೆಂದರೆ ಒಂದಷ್ಟು ಅಡ್ಡಿ ಆತಂಕಗಳು ಉಂಟಾಗುವ ಸಾಧ್ಯತೆ ಇದೆ. ವಾರದ ನಡುವಿನ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮವೆನಿಸಲಿವೆ. ಅದೃಷ್ಟವು ನಿಮ್ಮ ಪರವಾಗಿ ಇದ್ದರೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಹೆಚ್ಚಿನ ಕೆಲಸದ ಒತ್ತಡದೊಂದಿಗೆ ವರ್ಗಾವಣೆ ಮತ್ತು ಬಡ್ತಿ ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮನರಂಜನೆಗಾಗಿ ನೀವು ಸಮಯ ಮೀಸಲಿಡಬಹುದು. ಹಳೆಯ ಮಿತ್ರರನ್ನು ಭೇಟಿಯಾಗಿ ಅವರೊಂದಿಗೆ ಸಮಯವನ್ನು ಮೋಜಿನಿಂದ ಕಳೆಯುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಪ್ರೇಮಿಗಳ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ನಡುವಿನ ದಿನಗಳು ಪ್ರಯಾಣಿಸಲು ಅನುಕೂಲಕರ.

ಸಿಂಹ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ನೀವು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಏಕೆಂದರೆ ನೀವು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳಿಗೆ ಇದು ಅದ್ಭುತ ವಾರ ಎನಿಸಲಿದೆ. ಹಠಾತ್‌ ಆಗಿ ನೀವು ಕೆಲವೊಂದು ಹೊಸ ಪ್ರಾಜೆಕ್ಟ್​​​ಗಳನ್ನು ಪಡೆಯಲಿದ್ದು, ದೀರ್ಘ ಕಾಲದಲ್ಲಿ ಇದರಿಂದ ನಿಮಗೆ ಲಾಭ ದೊರೆಯಲಿದೆ. ಉದ್ಯೋಗಿಗಳ ಕೆಲಸದಲ್ಲಿ ಧನಾತ್ಮಕತೆ ಕಂಡು ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಹಳೆಯ ಕಾಯಿಲೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಅದ್ಭುತ ಭವಿಷ್ಯದ ಕನಸನ್ನು ಕಾಣಬಹುದು ಮತ್ತು ಮುಂದೆ ಸಾಗಬಹುದು. ಸಂಬಂಧದಲ್ಲಿರುವ ಜನರು ಒಂದಷ್ಟು ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕನ್ಯಾ: ಈ ವಾರ ನಿಮಗೆ ಬಹುತೇಕ ಫಲದಾಯಕ ಎನಿಸಲಿದೆ. ನಿಮ್ಮ ಖರ್ಚು ವೆಚ್ಚಗಳಲ್ಲಿ ಶೀಘ್ರ ಏರಿಕೆ ಉಂಟಾಗುವುದರಿಂದ ನಿಮಗೆ ಮಾನಸಿಕ ಒತ್ತಡ ಉಂಟಾಗಬಹುದು. ಆದರೆ ನೀವು ಭೀತಿಗೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಹಣಕಾಸನ್ನು ನೀವು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಒಟ್ಟಾರೆ ಹಣಕಾಸಿನ ಸ್ಥಿತಿಯ ಮೇಲೆ ಯಾವುದೇ ಗಂಭೀರ ಪರಿಣಾಮ ಉಂಟಾಗುವುದಿಲ್ಲ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಶಾಂತಿ ಉಂಟು ಮಾಡುವುದಕ್ಕಾಗಿ ತಮ್ಮೆಲ್ಲ ಪ್ರಯತ್ನ ಮಾಡಲಿದ್ದಾರೆ ಹಾಗೂ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಕುರಿತು ಕಾಳಜಿ ವಹಿಸಲಿದ್ದಾರೆ. ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಹಾಗೂ ತಮ್ಮ ಮನದಾಳದಿಂದ ನಿಮ್ಮನ್ನು ಪ್ರೀತಿಸಲಿದ್ದಾರೆ. ಇದು ನಿಮ್ಮ ಸಂಬಂಧವು ಸುಗಮವಾಗಿ ಮುಂದುವರಿಯುವಂತೆ ಮಾಡಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಜಾಣ್ಮೆಯಿಂದ ಮುಂದುವರಿಯಲಿದ್ದಾರೆ. ಅದೃಷ್ಟ ನಿಮ್ಮ ಪರವಾಗಿರಲಿದೆ ಹಾಗೂ ಕಾರ್ಯಸ್ಥಳದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಕೆಲಸದಲ್ಲಿನ ಹುದ್ದೆಯಲ್ಲಿ ಬಡ್ತಿ ಉಂಟಾಗಬಹುದು. ವ್ಯಾಪಾರೋದ್ಯಮಿಗಳು ತಮ್ಮ ಕೆಲಸವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕು. ಹೆಚ್ಚಿನ ಯಶಸ್ಸು ದೊರೆಯಬೇಕಾದರೆ ಹೊಸ ಯೋಜನೆಗಳು ಮತ್ತು ಅವುಗಳ ಸೂಕ್ತ ಅನುಷ್ಠಾನದ ಅಗತ್ಯವಿದೆ. ಆರೋಗ್ಯವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ತುಲಾ: ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ವಾರದ ಆರಂಭದಲ್ಲಿ ನಿಮ್ಮ ಆದಾಯದ ಮೇಲೆ ನೀವು ಗಮನ ಹರಿಸಲಿದ್ದೀರಿ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದ ಕುರಿತು ಚಿಂತೆ ಹೊಂದಿರುವಿರಿ. ಖಿನ್ನತೆಗೆ ಬಲಿಯಾಗದಂತೆ ನೋಡಿಕೊಳ್ಳಿ. ನೀವು ಕಠಿಣವಾಗಿ ಕೆಲಸ ಮಾಡಿದರೆ ಎಲ್ಲವೂ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಪ್ರೇಮ ಸಂಬಂಧದಲ್ಲಿರುವ ಜನರಿಗೆ ಈ ವಾರವು ಒಂದಷ್ಟು ಹತಾಶೆಯಿಂದ ಕೂಡಿದ್ದರೂ ಭರವಸೆ ಕಳೆದುಕೊಳ್ಳಬೇಡಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನೀವು ಹಠಾತ್‌ ಆಗಿ ಎಲ್ಲಿಂದ ಆದರೂ ಹಣ ಪಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಒಳ್ಳೆಯದು. ವ್ಯವಹಾರದ ಪ್ರಗತಿಗಾಗಿ ನೀವು ಒಂದಷ್ಟು ಹೂಡಿಕೆ ಮಾಡಬೇಕು. ಈ ವಾರದಲ್ಲಿ ಪ್ರಯಾಣಿಸಬೇಡಿ. ಏಕೆಂದರೆ ಸಮಯವು ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ.

ವೃಶ್ಚಿಕ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ. ಆದರೆ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಯಾರಾದರೂ ವ್ಯಕ್ತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಸಂಬಂಧದಲ್ಲಿರುವವರು ಈ ವಾರವನ್ನು ಸಂತಸದಿಂದ ಕಳೆಯಲಿದ್ದಾರೆ. ದೀರ್ಘ ಡ್ರೈವ್‌ ಗೆ ಹೋಗಲು ಅಥವಾ ಡಿನ್ನರ್‌ ಡೇಟ್​​ಗೆ ಹೋಗಲು ನಿಮಗೆ ಅವಕಾಶ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯವು ಹೆಚ್ಚಲಿದೆ. ನಿಮ್ಮ ಬಂಧದಲ್ಲಿರುವ ಮಂಕುತನವು ಕೊನೆಯಾಗಲಿದೆ. ನಿಮ್ಮ ಜೀವನ ಸಂಗಾತಿಯನ್ನು ಇನ್ನಷ್ಟು ಇಷ್ಟಪಡಲಿದ್ದೀರಿ. ಉದ್ಯೋಗದಲ್ಲಿರುವ ಜನರಿಗೆ ಈ ವಾರವು ಸ್ವಲ್ಪ ದುರ್ಬಲ ಎನಿಸಲಿದೆ. ಕೆಲಸದಲ್ಲಿ ಏರುಪೇರು ಉಂಟಾಗಬಹುದು. ಅಥವಾ ಯಾರಾದರೂ ವ್ಯಕ್ತಿಗಳು ನಿಮ್ಮ ವಿರುದ್ಧ ಷಡ್ಯಂತ್ರ ರೂಪಿಸಬಹುದು. ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನಿಮ್ಮ ಚಾಣಾಕ್ಷತೆಯ ಮೂಲಕ ನಿಮ್ಮ ವ್ಯವಹಾರದಲ್ಲಿ ವೇಗ ಸಾಧಿಸಲಿದ್ದೀರಿ ಮತ್ತು ಯಶಸ್ಸು ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಈ ವಾರದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಆರಂಭಿಕ ದಿನಗಳು ಉತ್ತಮ.

ಧನು: ಈ ರಾಶಿಯವರ ಪಾಲಿಗೆ ಈ ವಾರವು ಅತ್ಯುತ್ತಮ. ನಿಮ್ಮ ಇಚ್ಛೆಗಳು ಈಡೇರುತ್ತವೆ. ನೀವು ಸಾಕಷ್ಟು ಪ್ರಯತ್ನ ಪಡಲಿದ್ದು ಕಠಿಣ ಶ್ರಮ ಪಡಲಿದ್ದೀರಿ. ಇದರಿಂದಾಗಿ ನಿಮಗೆ ಅದ್ಭುತ ಯಶಸ್ಸು ದೊರೆಯಲಿದೆ. ನೆನಪಿಡಿ, ಪ್ರಯತ್ನ ಮತ್ತು ಕಠಿಣ ಶ್ರಮ ಎಂದೂ ವ್ಯರ್ಥವಾಗುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ಪ್ರಗತಿ ಉಂಟಾಗಲಿದೆ. ರಿಯಲ್‌ ಎಸ್ಟೇಟ್​​​ಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಕಠಿಣ ಶ್ರಮದ ಮೂಲಕ ನಿಮ್ಮ ಮನೆಯನ್ನು ರೂಪಿಸುವಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಏಕೆಂದರೆ ಗ್ರಹಗಳ ಸ್ಥಾನವು ನಿಮ್ಮ ಜೀವನ ಸಂಗಾತಿಯ ಮನಸ್ಸನ್ನು ಕೆಡಿಸಬಹುದು. ಸಂಬಂಧದಲ್ಲಿನ ಹಿನ್ನೆಡೆಗೆ ಇದು ಕಾರಣವಾಗಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಸಕಾಲ. ಸರ್ಕಾರದಿಂದ ಪ್ರಯೋಜನ ದೊರೆಯಬಹುದು. ಆದರೆ ನಿಮ್ಮ ಪಾಲುದಾರರೊಂದಿಗೆ ಯಾವುದೇ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿರುವವರಿಗೆ ಈ ಸಮಯವು ನಿರ್ಣಾಯಕ ಎನಿಸಲಿದೆ. ಏಕೆಂದರೆ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದರ ಮೇಲೆ ಪರಿಸ್ಥಿತಿ ಹೊಂದಿಕೊಂಡಿದೆ. ನಿಮ್ಮ ಕಠಿಣ ಶ್ರಮವು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲಿದ್ದು, ಇದು ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಬೇಕಾದರೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ: ಈ ವಾರ ನಿಮಗೆ ಭಾಗಶಃ ಫಲದಾಯಕ ಎನಿಸಲಿದೆ. ವಾರದ ಆರಂಭದಲ್ಲಿ ಕೌಟುಂಬಿಕ ಒತ್ತಡ ನಿಮ್ಮನ್ನು ಕಾಡಬಹುದು. ಅಲ್ಲದೆ ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇತರರ ಸಾಂಗತ್ಯದಲ್ಲಿ ಕಾಲ ಕಳೆಯುವುದರ ಮೂಲಕ ಒತ್ತಡದಿಂದ ದೂರವಿರುವುದು ಒಳ್ಳೆಯದು. ಉದ್ಯೋಗದಲ್ಲಿರುವವರು ತಾವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ಅಲ್ಲದೆ ಕೆಲಸವನ್ನು ಬದಲಾಯಿಸಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಇಷ್ಟದ ಕೆಲಸ ನಿಮಗೆ ದೊರೆಯಲಿದೆ. ವ್ಯಾಪಾರಿಗಳಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಯೋಜನೆಗಳು ಮುಂದೆ ಸಾಗಲಿವೆ. ಇದರಿಂದ ನಿಮಗೆ ಸಂತಸ ದೊರೆಯಲಿದೆ. ಆದರೆ ಕೆಲಸದಲ್ಲಿ ಪ್ರಗತಿ ಸಾಧಿಸಿದಂತೆ ಲಾಭ ದೊರೆಯಲಿದೆ. ಪ್ರೇಮದ ಬದುಕನ್ನು ಸಾಗಿಸುವವರಿಗೆ ಇದು ತುಂಬಾ ಪ್ರಣಯಭರಿತ ವಾರ ಎನಿಸಲಿದೆ. ನಿಮ್ಮ ಸಂಗಾತಿಯ ಜೊತೆಗೆ ಗರಿಷ್ಠ ಸಮಯವನ್ನು ಕಳೆಯಲಿದ್ದೀರಿ. ಅಲ್ಲದೆ ನೀವು ಅನೇಕ ಅವಕಾಶಗಳನ್ನು ಪಡೆಯಲಿದ್ದೀರಿ. ನಿಮ್ಮ ಪ್ರೇಮ ಬದುಕು ಸಂತಸ ಹಾಗೂ ಉಲ್ಲಾಸದಿಂದ ತುಂಬಿರಲಿದ್ದು, ಈ ಸಮಯವನ್ನು ನೀವು ಆನಂದಿಸಲಿದ್ದೀರಿ. ವಿವಾಹಿತರಿಗೆ ಈ ವಾರವು ತುಂಬಾ ಒಳ್ಳೆಯದು. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲಿದ್ದಾರೆ ಹಾಗೂ ಹೊಸ ವಿಚಾರಗಳನ್ನು ಕಲಿಯುವುದನ್ನು ಆನಂದಿಸಲಿದ್ದಾರೆ. ಇದು ಅಧ್ಯಯನದ ಮೇಲಿನ ಅವರ ಗಮನ ಮತ್ತು ನಿಯಂತ್ರಣವನ್ನು ವೃದ್ದಿಸಲಿದೆ. ಈ ವಾರವು ಪ್ರಯಾಣಕ್ಕೆ ಅನುಕೂಲಕರ. ಆದರೆ ಕೊನೆಯ ದಿನದಂದು ಪ್ರಯಾಣಿಸಬೇಡಿ.

ಕುಂಭ: ಈ ವಾರ ನಿಮಗೆ ಒಟ್ಟಾರೆ ಫಲದಾಯಕ ಎನಿಸಲಿದೆ. ವಾರದ ಅರಂಭದಲ್ಲಿ ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಿರುವುದನ್ನು ನೀವು ಗಮನಿಸಬಹುದು. ಅಲ್ಲದೆ ಏಕಾಂಗಿತನವು ನಿಮ್ಮನ್ನು ಕಾಡಬಹುದು. ಆದರೆ ನಿಜವಾಗಿ ಪರಿಸ್ಥಿತಿ ಆ ರೀತಿ ಇರುವುದಿಲ್ಲ. ಧನಾತ್ಮಕವಾಗಿ ಯೋಚಿಸಿ ಹಾಗೂ ಪ್ರಪಂಚ ಎಷ್ಟು ಸುಂದರವಾಗಿದೆ ಎಂಬುದನ್ನು ಗಮನಿಸಿ. ಜನರೊಂದಿಗೆ ಕಾಲ ಕಳೆಯಿರಿ. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಲಭಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ಯೋಜನೆಗಳು ಮತ್ತು ನಿರ್ಧಾರಗಳು ನಿಮ್ಮ ವ್ಯವಹಾರದ ಮುಂದಿನ ನಡೆಯನ್ನು ನಿರ್ಧರಿಸಲಿವೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಪ್ರೇಮವು ಅರಳಲಿದೆ. ಪ್ರಣಯ ಸಂಬಂಧದಲ್ಲಿರುವ ಜನರಿಗೆ ತಮ್ಮ ಪ್ರೇಮಿಯ ಅಹಂನ ಕಾರಣ ಒಂದಷ್ಟು ಬೇಸರ ಉಂಟಾಗಬಹುದು. ಪರಸ್ಪರ ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಅದರೆ ದುರ್ಬಲ ಆರೋಗ್ಯದ ಕಾರಣ ಏಕಾಗ್ರತೆಗೆ ಭಂಗ ಉಂಟಾಗಬಹುದು. ಈ ವಾರವು ಪ್ರಯಾಣಕ್ಕೆ ಅನುಕೂಲಕರ.

ಮೀನ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದ್ದು, ನಿಮ್ಮ ಚಿಂತೆಗೆ ಕಾರಣವಾಗಲಿದೆ. ವಾರದ ಮಧ್ಯದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದ್ದು ನೀವು ಆರಾಮದಾಯಕತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಸಹಕಾರ ನಿಮಗೆ ದೊರೆಯಲಿದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿಯೂ ವೃದ್ಧಿ ಉಂಟಾಗಲಿದೆ. ಹಣ ಉಳಿಸಲು ನಿಮಗೆ ಸಾಧ್ಯವಾಗಲಿದೆ. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಅವರ ವರ್ತನೆಯ ಕಾರಣ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾದೀತು. ಅವರ ವ್ಯವಹಾರದಲ್ಲಿ ಬೆಳವಣಿಗೆ ಉಂಟಾಗಲಿದೆ. ಅಲ್ಲದೆ ಪ್ರಯಾಣದಿಂದಾಗಿ ಅವರಿಗೆ ಲಾಭ ಉಂಟಾಗಬಹುದು. ವಿವಾಹಿತ ವ್ಯಕ್ತಿಗಳು ಸರಿಯಾಗಿ ವರ್ತಿಸಿದರೆ ಅವರ ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರಣಯ ಸಂಬಂಧದಲ್ಲಿರುವವರಿಗೆ ಅವರ ಪ್ರೇಮಿಯ ವರ್ತನೆಯ ಕಾರಣ ಚಿಂತೆ ಕಾಡಬಹುದು. ಏಕೆಂದರೆ ಇದರಿಂದಾಗಿ ಅವರಿಗೆ ಕಿರಿಕಿರಿ ಉಂಟಾಗಬಹುದು. ನಿಮ್ಮ ಕುಟುಂಬದಲ್ಲಿ ಯಾರಾದರೂ ವ್ಯಕ್ತಿಯ ಆರೋಗ್ಯ ಹದಗೆಡುವ ಕಾರಣ ನಿಮಗೆ ಚಿಂತೆ ಕಾಡಲಿದೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.