ಸಮಷ್ಟಿಪುರ(ಬಿಹಾರ): ಭಾರಿ ಮಳೆಯಿಂದ ಬಿಹಾರದಲ್ಲಿ ಹಲವು ಹಳ್ಳಿಗಳು ಮುಳುಗಡೆಯಾಗಿದ್ದು, ಹಲವು ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲೇ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಹೊಸದಾಗಿ ವಿವಾಹವಾಗಿದ್ದ ವ್ಯಕ್ತಿಯೋರ್ವ ವಧುವಿನ ಮನೆಗೆ ಬೋಟ್ ಮೂಲಕ ಮೆರವಣಿಗೆ ತೆರಳಿದ್ದು, ಮತ್ತೆ ತನ್ನ ಮನೆಗೆ ವಾಪಸ್ ಮೆರವಣಿಗೆ ಬರುವಾಗ ಮತ್ತೆ ಅದೇ ಬೋಟ್ ಬಳಸಿ ಬಂದಿದ್ದಾನೆ. ಈ ವೇಳೆ ಮೂರು ಬೋಟ್ಗಳಲ್ಲಿ ಗ್ರಾಮಸ್ಥರು, ಸಂಬಂಧಿಕರು ಸಾಥ್ ನೀಡಿದ್ದಾರೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ಗೊಬರ್ಸಿತ್ತಾ ಎಂಬ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಭಾಗಮತಿ ನದಿ ಮಾನ್ಸೂನ್ ಮಳೆ ಹೇರಳವಾಗಿ ಬಿದ್ದ ಕಾರಣ ತುಂಬಿ ಹರಿಯುತ್ತಿದ್ದು, ನವ ದಂಪತಿಯ ಮೆರವಣಿಗೆ ಕಾರ್ಯಕ್ರಮಕ್ಕೆ ಅಡಚಣೆಯುಂಟಾಗಿದೆ.
ಇನ್ನು, ಬಿಹಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ದರ್ಬಾಂಗಾ, ಮಧುಬನಿ, ಸಮಷ್ಟಿಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಎಂ ನಿತೀಶ್ಕುಮಾರ್ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. ರೈಲ್ವೆ ಸೇವೆಯೂ ಕೆಲವೆಡೆ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ