ಮುಂಬೈ: ನಾನು ನಟರಾದ ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ವಿರುದ್ಧ ಮಾತನಾಡಿಲ್ಲ. ಆದರೆ, ಅವರ ಕೆಲಸಗಳ ವಿರುದ್ಧ ಇದ್ದೇನಷ್ಟೇ. ಅವರೆಲ್ಲ ನಮ್ಮ ಹೀರೋಗಳಲ್ಲ. ಅವರು ಜನರ ಪರ ಇದ್ದಿದ್ದರೆ ಜನರ ಕಷ್ಟಗಳ ಸಂದರ್ಭದಲ್ಲಿ ಪಕ್ಕಕ್ಕೆ ನಿಲ್ಲುತ್ತಿರಲಿಲ್ಲ. ಅವರು ಕಾಗದದ ಹುಲಿಗಳಾಗಿ ಮುಂದುವರಿಯಲು ಮುಂದಾದರೆ ಅದನ್ನ ನನ್ನದೇನೂ ಅಭ್ಯಂತರ ಇಲ್ಲ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
-
I didn't speak against Akshay Kumar&Amitabh Bachchan but against their work. They're not real heroes. If they were, they would've stood beside people during their sufferings. If they want to continue being 'kagaz ke sher', then we don't have any problem:Maharashtra Congress chief pic.twitter.com/ryozCkjnLs
— ANI (@ANI) February 20, 2021 " class="align-text-top noRightClick twitterSection" data="
">I didn't speak against Akshay Kumar&Amitabh Bachchan but against their work. They're not real heroes. If they were, they would've stood beside people during their sufferings. If they want to continue being 'kagaz ke sher', then we don't have any problem:Maharashtra Congress chief pic.twitter.com/ryozCkjnLs
— ANI (@ANI) February 20, 2021I didn't speak against Akshay Kumar&Amitabh Bachchan but against their work. They're not real heroes. If they were, they would've stood beside people during their sufferings. If they want to continue being 'kagaz ke sher', then we don't have any problem:Maharashtra Congress chief pic.twitter.com/ryozCkjnLs
— ANI (@ANI) February 20, 2021
ನಾವು ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ. ಅವರ ಸಿನಿಮಾಗಳು ಬಿಡುಗಡೆ ಆದಾಗ ಕಪ್ಪು ಬಾವುಟ ಹಾರಿಸಿಯೇ ಹಾರಿಸುತ್ತೇವೆ. ಅಥವಾ ಅವತ್ತು ಆ ಸ್ಥಳದಲ್ಲಿ ಇರುತ್ತೇವೆ. ನಾವು ಪ್ರಜಾಪ್ರಭುತ್ವ ಮಾರ್ಗದಲ್ಲೇ ನಡೆಯುತ್ತೇವೆ. ನಾವು ಗೋಡ್ಸೆ ಭಕ್ತರಲ್ಲ ಆದರೆ ನಾವು ಗಾಂಧಿ ವಾದಿಗಳು ಎಂದು ನಾನಾ ಪಟೋಲೆ ಹೇಳಿದ್ದಾರೆ.
ಓದಿ: ಜೂಮ್ ಕಾಲ್ನಲ್ಲಿದ್ದ ಗಂಡನಿಗೆ ಕಿಸ್ ಮಾಡಲು ಮುಂದಾದ ಪತ್ನಿ..ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!
ತೈಲ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಕಾರಣಕ್ಕಾಗಿ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಗಡುಗಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಇದೀಗ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅವರ ಚಿತ್ರಗಳ ಚಿತ್ರೀಕರಣಕ್ಕೆ ತಾವು ಅವಕಾಶ ನೀಡುವುದಿಲ್ಲ ಜತೆಗೆ ಚಿತ್ರ ಬಿಡುಗಡೆ ಮಹಾರಾಷ್ಟ್ರದಲ್ಲಿ ಅವಕಾಶ ನೀಡಲ್ಲ ಎಂದು ಪಟೋಲೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.