ಚಂಡೀಗಢ : ಚುನಾವಣೆಗಳಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಗಳು ನೂರಾರು ಭರವಸೆಗಳನ್ನು ನೀಡಿ ಗೆದ್ದಿರುತ್ತಾರೆ. ಆದರೆ, ಗೆದ್ದ ನಂತರ ಏನು ಮಾಡಿದ್ದೀರಿ ಅಂತಆ ಪ್ರಶ್ನಿಸುವಂತಿಲ್ಲ. ಒಂದು ವೇಳೆ ಪ್ರಶ್ನಿಸಿದ್ರೆ ಏನಾಗುತ್ತೆ ಎಂಬುದಕ್ಕೆ ಪಂಜಾಬ್‌ನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ.
-
Madam @priyankagandhi the man who slapped the youth is Your Party’s Punjab MLA Joginder Pal. He got violent with youth because he questioned him, I hope you understand that Democracy is in Danger. @DGPPunjabPolice any action against these police officers? pic.twitter.com/CUBHiK4BWH
— Singh Varun (@singhvarun) October 20, 2021 " class="align-text-top noRightClick twitterSection" data="
">Madam @priyankagandhi the man who slapped the youth is Your Party’s Punjab MLA Joginder Pal. He got violent with youth because he questioned him, I hope you understand that Democracy is in Danger. @DGPPunjabPolice any action against these police officers? pic.twitter.com/CUBHiK4BWH
— Singh Varun (@singhvarun) October 20, 2021Madam @priyankagandhi the man who slapped the youth is Your Party’s Punjab MLA Joginder Pal. He got violent with youth because he questioned him, I hope you understand that Democracy is in Danger. @DGPPunjabPolice any action against these police officers? pic.twitter.com/CUBHiK4BWH
— Singh Varun (@singhvarun) October 20, 2021
ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ತನ್ನ ಕ್ಷೇತ್ರದಲ್ಲಿ ಮಾಡಿದ ಕೆಲಸದ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿರುವ ಘಟನೆ ಪಠಾಣ್‌ಕೋಟ್ ಜಿಲ್ಲೆಯ ಭೋವಾದಲ್ಲಿ ನಡೆದಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಾಸಕ ಜೋಗಿಂದರ್‌ಗೆ ಯುವಕನೊರ್ವ ಕಳೆದ 4.5 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಾದ ಎಂಎಲ್‌ಎ, ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಜೊತೆಗೆ ಪಕ್ಕದಲ್ಲಿ ನಿಂತಿದ್ದ ಶಾಸಕನ ಬೆಂಬಲಿಗರು ಹಾಗೂ ಕೆಲ ಪೊಲೀಸರು ಯುವಕನನ್ನು ಥಳಿಸಿದ್ದಾರೆ. ಆಗಲೂ ಕೂಡ ಯುವಕ ನೀನು ನಿಜವಾಗಿಯೂ ಏನು ಮಾಡಿರುವೆ ಎಂದು ಮತ್ತೆ ಮತ್ತೆ ಪ್ರಶ್ನಿಸಿದ್ದಾನೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಗೃಹ ಸಚಿವ ಸುಖಜಿಂದರ್ ಸಿಂಗ್ ರಾಂಧವಾ, ಶಾಸಕರು ಈ ರೀತಿ ವರ್ತಿಸಬಾರದಿತ್ತು. ನಾವು ಜನಪ್ರತಿನಿಧಿಗಳು ಮತ್ತು ಅವರ ಸೇವೆಗಾಗಿ ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ.