ಕೊಯಮತ್ತೂರು (ತಮಿಳುನಾಡು): ಸ್ವಾರ್ಥ, ಲಾಲಸೆ, ಅಪನಂಬಿಕೆಗಳಿಂದಾಗಿ ಮನುಷ್ಯ ಸಂಬಂಧಗಳು ನೆಲೆ ಬೆಲೆ ಕಳೆದು ಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಾಕು ಪ್ರಾಣಿಗಳು ಮಾತ್ರ ಬದಲಾಗದೇ ತಮ್ಮ ನಿಷ್ಠೆ, ಪ್ರಾಮಾಣಿಕತೆ ಉಳಿಸಿಕೊಂಡಿವೆ.
ಈ ಮೂಲಕ ಇಂದಿಗೂ ಮನುಷ್ಯರೊಂದಿಗಿನ ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡಿವೆ ಎನ್ನುವುದಕ್ಕೆ ನಿದರ್ಶನದಂತಿದೆ ಭಾನುವಾರ ಕೊಯಮತ್ತೂರಿನ ಮನೆಯೊಂದರಲ್ಲಿ ನಡೆದ ಸಾಕು ಬೆಕ್ಕುಗಳ ಸೀಮಂತ ಕಾರ್ಯಕ್ರಮ.
ಕೊಯಮತ್ತೂರಿನ ಮಹಿಳೆಯೊಬ್ಬರು ತಾವು ಸಾಕಿ ಬೆಳೆಸಿದ ಬೆಕ್ಕುಗಳಿಗೆ ಗರ್ಭಿಣಿಯರಿಗೆ ಸೀಮಂತ ಮಾಡುವ ರೀತಿಯಲ್ಲಿಯೇ ಅದ್ಧೂರಿಯಾಗಿ ಕಾರ್ಯ ಮಾಡಿದ್ದಾರೆ. ವಿಶೇಷ ಆಹಾರ, ಸಿಹಿತಿಂಡಿಗಳು ಮತ್ತು ಇತರ ವಸ್ತುಗಳೊಂದಿಗೆ ಹೊಸ ಬಟ್ಟೆಗಳನ್ನು ಧರಿಸಿ ಸೀಮಂತ ಕಾರ್ಯ ಮಾಡಿದ್ದಾರೆ.
ನಮ್ಮ ಗರ್ಭಿಣಿ ಬೆಕ್ಕುಗಳಿಗೆ ಆಶೀರ್ವಾದ ಮಾಡಲು ನಾವು ಇದನ್ನು ಮಾಡಿದ್ದೇವೆ. ನಾವು ಅವುಗಳಿಗೆ ವಿಶೇಷ ಆಹಾರ, ತಿಂಡಿಗಳನ್ನು ನೀಡುತ್ತೇವೆ. ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುತ್ತಾರೆ. ಆದ್ದರಿಂದ ಬೆಕ್ಕುಗಳಿಗೆ ನಮ್ಮ ಕುಟುಂಬದ ಸದಸ್ಯರಾಗಿರುವ ಕಾರಣ ನಾವು ಅವುಗಳಿಗೆ ಸೀಮಂತ ಮಾಡಿದ್ದೇವೆ ಎಂದು ಮಹಿಳೆ ತಿಳಿಸಿದ್ದಾರೆ.
ಗರ್ಭಿಣಿ ಬೆಕ್ಕುಗಳಿಗೆ ಈ ರೀತಿ ಸೀಮಂತ ಮಾಡಿರುವುದು ಇದೇ ಮೊದಲು. ಈ ವಿಚಾರ ಗರ್ಭಿಣಿಯರಿಗೆ ಸಂತಸ ತಂದಿದೆ ಎನ್ನುತ್ತಾರೆ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಶುವೈದ್ಯರು.
ಇದನ್ನೂ ಓದಿ: ನಿರ್ಮಾಣ ಹಂತದ ಸೇತುವೆ ಕುಸಿದು 27 ಜನರಿಗೆ ಗಾಯ!