ETV Bharat / bharat

ಮೃತಪಟ್ಟ ಸಂಗಾತಿಯ ಬಿಡಲೊಪ್ಪದ ನವಿಲು.. ಮನಕಲಕುವಂತಿದೆ ವಿಡಿಯೋ

Peacock Refuses to leave "Long Time Partner" after its death: ರಾಜಸ್ಥಾನದ ಕುಚೇರಾದಲ್ಲಿ ನವಿಲೊಂದು ಸಾವನ್ನಪ್ಪಿದ್ದು, ವ್ಯಕ್ತಿಗಳಿಬ್ಬರು ಅದನ್ನು ಹೊತ್ತು ತೆರಳುತ್ತಿದ್ದಾಗ ಇನ್ನೊಂದು ನವಿಲು ಸಂಗಾತಿಯನ್ನು ಕಳೆದುಕೊಂಡ ನೋವಿನಲ್ಲಿ ಹಿಂದೆಯೇ ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

peacock
ನವಿಲು
author img

By

Published : Jan 5, 2022, 3:57 PM IST

ಹೈದರಾಬಾದ್: ಸಂಬಂಧಗಳು ಮನುಷ್ಯರಲ್ಲಿ ಮಾತ್ರವಲ್ಲ.. ಪ್ರಾಣಿ- ಪಕ್ಷಿಗಳಲ್ಲೂ ಅತ್ಯುತ್ಕೃಷ್ಟವಾಗಿರುತ್ತವೆ ಎಂಬುದಕ್ಕೆ ಇಲ್ಲಿಯ ಎರಡು ನವಿಲುಗಳ ನಡುವಿನ ಸಂಬಂಧವೇ ಸಾಕ್ಷಿ. ರಾಜಸ್ಥಾನದ ಕುಚೇರಾದಲ್ಲಿ ನವಿಲೊಂದು ಸಾವನ್ನಪ್ಪಿದ್ದು, ವ್ಯಕ್ತಿಗಳಿಬ್ಬರು ಅದನ್ನು ಹೊತ್ತು ತೆರಳುತ್ತಿದ್ದಾಗ ಇನ್ನೊಂದು ನವಿಲು ಸಂಗಾತಿಯನ್ನು ಕಳೆದುಕೊಂಡ ನೋವಿನಲ್ಲಿ ಹಿಂದೆಯೇ ಸಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

4 ವರ್ಷಗಳಿಂದ ಈ ಎರಡು ನವಿಲುಗಳು ಜೊತೆಯಾಗಿದ್ದವಂತೆ. ಈ ವೇಳೆ ಅದರಲ್ಲೊಂದು ನವಿಲು ಮೃತಪಟ್ಟಿದೆ. ಅದನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಾಗ ಇನ್ನೊಂದು ನವಿಲು ಅದನ್ನೇ ಹಿಂಬಾಲಿಸುತ್ತ ಬಂದಿದೆ. ಇದನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ, 'ನವಿಲು ತನ್ನ ಸಂಗಾತಿ ಮರಣದ ನಂತರವೂ ಅದನ್ನು ಬಿಡಲೊಪ್ಪಿಲ್ಲ.. ಈ ಘಟನೆ ಮನಕಲಕುವಂತಿದೆ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು 'ಈ ನವಿಲುಗಳು 4 ವರ್ಷಗಳಿಂದ ಜೊತೆಗಿದ್ದವು' ಎಂಬುದನ್ನು ತಿಳಿಸಿದ್ದಾರೆ.

19 ಸೆಕೆಂಡ್​ಗಳುಳ್ಳ ಈ ವಿಡಿಯೋ 1.26 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ಅಲ್ಲದೇ ಹಲವರು ಇದೊಂದು 'ಹೃದಯಸ್ಪರ್ಶಿ ಘಟನೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಇಲ್ಲಿ ಬೋರ್​ವೆಲ್​ ಪೈಪ್​ನಿಂದಲೇ ಬರುತ್ತೆ ಗ್ಯಾಸ್​.. ಒಂದು ರೂಪಾಯಿ ಖರ್ಚಿಲ್ಲ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.