ಕಿಶನ್ಗಂಜ್( ಬಿಹಾರ) : ಹೊಸದಾಗಿ ಮದುವೆಯಾದ ಜೋಡಿ ಕಂಕೈ ನದಿಯಲ್ಲಿ ದೋಣಿ ಮೂಲಕ ಪ್ರಯಾಣಿಸಬೇಕಾದರೆ, ಬಲವಾದ ಪ್ರವಾಹ ಉಂಟಾಗಿದೆ.
ಈ ವೇಳೆ ನವದಂಪತಿ ಸೇರಿ, ದೋಣಿಯಲ್ಲಿದ್ದವರಿಗೆಲ್ಲ ಗಾಬರಿಯಾಗಿದೆ. ಎಲ್ಲರೂ ದೋಣಿಯಿಂದ ಇಳಿದು, ನದಿಯಲ್ಲೇ ನಡೆದು ಹೋಗಲು ಮುಂದಾಗಿದ್ದಾರೆ. ಆದರೆ, ನವ ವಧು ನೀರಿಗೆ ಇಳಿಯಲು ಅಂಜಿದ್ದು, ತನ್ನ ಪತಿಗೆ ತಿಳಿಸಿದ್ದಾಳೆ. ಆ ಸಮಯದಲ್ಲಿ ಪತಿ ತನ್ನ ಪತ್ನಿಯನ್ನು ನೀರಿಗೆ ಇಳಿಯಲು ಬಿಡದೇ, ಹೆಗಲ ಮೇಲೆ ಹೊತ್ತು ನದಿ ದಾಟಿಸಿದ್ದಾನೆ.
ಈ ಘಟನೆಯ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪತಿ ಪ್ರೀತಿಗೆ ನೆಟ್ಟಿಗರು ಫಿದಾ ಕೂಡಾ ಆಗಿದ್ದಾರೆ.
ಇದನ್ನೂ ಓದಿ: No Selfies Please: ಗುಜರಾತ್ನ ಈ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಅಪರಾಧ!