ಅಹ್ಮದ್‌ನಗರ: ಜಿಲ್ಲೆಯ ಅಂಬಿ - ಡುಮಾಲಾ ಗ್ರಾಮದ ಹೊಸದಾಗಿ ಚುನಾಯಿತರಾದ ಸರ್ಪಂಚ್ ಜಲಿಂದರ್ ಗಗರೆ ಪ್ರಮಾಣ ವಚನ ಸ್ವೀಕಾರಿಸಲು ಹೆಲಿಕಾಪ್ಟರ್ ಮೂಲಕ ಆಗಮಿಸಿದರು.
ಬುಧವಾರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಗಗರೆ ಶ್ರೀಮಂತ ಸರ್ಪಂಚರಲ್ಲಿ ಒಬ್ಬರು. ಇಲ್ಲಿನ ಜನ ಗಗರೆಗೆ ಆತ್ಮೀಯ ಸ್ವಾಗತ ಕೋರಿದರು.
ಮಹಾತ್ಮ ಗಾಂಧಿಯವರ ಘೋಷಣೆಯಾದ ಗವಕಡೆ ಚಲಾ (ಗ್ರಾಮಕ್ಕೆ ಹಿಂತಿರುಗಿ) ಅನುಸರಿಸಲಾಗುವುದು ಮತ್ತು ಗ್ರಾಮದ ಅಭಿವೃದ್ಧಿಯ ನನ್ನ ಗುರಿ ಎಂದು ಗಗರೆ ಹೇಳಿದರು.