ETV Bharat / bharat

ದಡೂತಿ ಹಾಗೂ ಮದ್ಯವ್ಯಸನಿ ಪೊಲೀಸರಿಗೆ ವಿಆರ್​ಎಸ್​: ಅಸ್ಸೋಂ ಸರ್ಕಾರದ ದಿಟ್ಟ ಕ್ರಮ - Voluntary Retirement Scheme for Assam Police

ಅಸ್ಸೋಂ ಸರ್ಕಾರ ಪೊಲೀಸ್​ ಇಲಾಖೆಗೆ ಯುವ ತರುಣರ ಸೇರ್ಪಡೆಗೆ ಮುಂದಾಗಿದೆ. ಅಸಮರ್ಥ ಪೊಲೀಸರಿಗೆ ವಿಆರ್​ಎಸ್​ ನೀಡುತ್ತಿದೆ. ಇಲಾಖೆಯಲ್ಲಿ ಸ್ಮಾರ್ಟ್​ ಪೊಲೀಸ್​ ಪರಿಕಲ್ಪನೆ ತರುತ್ತಿದೆ.

ಮದ್ಯವ್ಯಸನಿ ಪೊಲೀಸರಿಗೆ ವಿಆರ್​ಎಸ್
ಮದ್ಯವ್ಯಸನಿ ಪೊಲೀಸರಿಗೆ ವಿಆರ್​ಎಸ್
author img

By

Published : May 1, 2023, 4:07 PM IST

ಗುವಾಹಟಿ(ಅಸ್ಸೋಂ): ಸಿಎಂ ಹಿಮಂತ್​ ಬಿಸ್ವಾ ಶರ್ಮಾ ನೇತೃತ್ವದ ಅಸ್ಸೋಂ ಸರ್ಕಾರ ಪೊಲೀಸ್​ ಇಲಾಖೆಗೆ ಭರ್ಜರಿ ಸರ್ಜರಿ ಶುರು ಮಾಡಿದೆ. ಮದ್ಯಪ್ರಿಯ ಮತ್ತು ಹೆಚ್ಚಿನ ಕೊಬ್ಬು ಹೊಂದಿರುವ ಸಿಬ್ಬಂದಿಗೆ ಸ್ವಯಂ ನಿವೃತ್ತಿ (ವಿಆರ್​ಎಸ್)​ ನೀಡುತ್ತಿದೆ. ಈ ಮೂಲಕ ಇಲಾಖೆಯಲ್ಲಿ ಸ್ಮಾರ್ಟ್​ ಪೊಲೀಸ್​ ಪರಿಕಲ್ಪನೆಯನ್ನು ಕಾರ್ಯಗತಗೊಳಿಸುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಹಿಮಂತ್​ ಬಿಸ್ವಾ ಶರ್ಮಾ, ಪೊಲೀಸ್​ ಇಲಾಖೆ ಲವಲವಿಕೆಯಿಂದ ಕೂಡಿರಬೇಕು. ಜಡ್ಡುಗಟ್ಟಿದ ವಾತಾವರಣದಿಂದ ಮುಕ್ತವಾಗಬೇಕು. ಪೊಲೀಸ್​ ಅಧಿಕಾರಿ, ಸಿಬ್ಬಂದಿ ದೈಹಿಕವಾಗಿ ಫಿಟ್​ ಆಗಿರಬೇಕು. ಹೀಗಾಗಿ ಮದ್ಯವ್ಯಸನಿ ಮತ್ತು ಅಧಿಕ ಕೊಬ್ಬು ಹೊಂದಿರುವ ಪೊಲೀಸರಿಗೆ ನಿವೃತ್ತಿ ನೀಡಲಾಗುತ್ತಿದೆ. ಈ ಮೂಲಕ ಇಲಾಖೆಗೆ ಹೊಸ ರೂಪ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಮೊದಲ ಹಂತದಲ್ಲಿ 300 ಪೊಲೀಸರಿಗೆ ವಿಆರ್​ಎಸ್​ ನೀಡಲಾಗುತ್ತಿದೆ. ಇವರು ಅತ್ಯಧಿಕ ಕೊಬ್ಬು, ಮದ್ಯವ್ಯಸನಿಗಳಾಗಿದ್ದಾರೆ. ಇದರಿಂದ ಅವರ ಕಾರ್ಯವೈಖರಿಯೂ ಕುಂದಿ ಹೋಗಿದೆ. ಅವರೆಲ್ಲರೂ ಸೇವೆಯಿಂದ ನಿವೃತ್ತರಾದರೂ, ಸರ್ಕಾರದ ನಿಯಮಾವಳಿಗಳಂತೆ ನಿಯಮಿತವಾಗಿ ಸಂಬಳ, ಸೌಲಭ್ಯ ಪಡೆಯಲಿದ್ದಾರೆ. ಅವರ ಜಾಗಕ್ಕೆ ಯುವ ಸಿಬ್ಬಂದಿಯ ನೇಮಕಕ್ಕೆ ಅವಕಾಶ ಸಿಗಲಿದೆ ಎಂದು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಸ್ಪಷ್ಟ ಪಡಿಸಿದ್ದಾರೆ.

ಸರ್ಕಾರದ ನಿಯಮಾನುಸಾರವಾಗಿಯೇ ಅವರಿಗೆ ವಿಆರ್​ಎಸ್​ ನೀಡಲಾಗಿದೆ. ಪೊಲೀಸ್​ ಇಲಾಖೆ ಖಡಕ್​ ಯುವ ಸಿಬ್ಬಂದಿಯನ್ನು ಹೊಂದಿರಬೇಕು ಎಂಬುದು ಸರ್ಕಾರದ ಆಶಯ. ಭದ್ರತಾ ದೃಷ್ಟಿಯಿಂದ ಮತ್ತು ಇಲಾಖೆಯೂ ಪೂರ್ಣ ಸಾಮರ್ಥ್ಯ ಹೊಂದಿರಬೇಕಾದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರಿ ಇದೇ ವೇಳೆ ಸ್ಪಷ್ಟಪಡಿಸಿದರು. ಗೃಹ ಇಲಾಖೆಯ ಹೊಣೆ ಹೊತ್ತಿರುವ ಸಿಎಂ ಬಿಸ್ವಾ ಶರ್ಮಾ, ಈ ಕುರಿತಂತೆ ಅಗತ್ಯ ಸಿದ್ಧತೆ ನಡೆಸಲು ಸೂಚಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ, ಪೊಲೀಸ್​ ಇಲಾಖೆಯಲ್ಲಿ 4 ಸಾವಿರಕ್ಕೂ ಅಧಿಕ ಅಸಮರ್ಥ ಅಧಿಕಾರಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಅವರು ಅತ್ಯಧಿಕ ಕೊಬ್ಬು ಮತ್ತು ಮದ್ಯವ್ಯಸನಿಗಳಾಗಿದ್ದಾರೆ ಎಂದು ಹೇಳಲಾಗಿದೆ. ಅಂತಹ ಅನರ್ಹ ಪೊಲೀಸರನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ ಎಂದು ಸರ್ಕಾರ ತಿಳಿಸಿದೆ.

ಸಚಿವ ಸಂಪುಟ ಪುನಾರಚನೆ: ಇನ್ನೂ, ಸರ್ಕಾರ ರಚನೆಯಾಗಿ 2 ವರ್ಷ ಪೂರೈಸುತ್ತಿರುವ ಕಾರಣ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂಬ ಸುದ್ದಿ ಜೋರಾಗಿದ್ದು, ಅದಕ್ಕೆ ಸಿಎಂ ಬ್ರೇಕ್​ ಹಾಕಿದ್ದಾರೆ. ಲೋಕಸಭೆ ಚುನಾವಣೆವರೆಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಬದಲಾವಣೆ ಮಾಡಲಾಗುವುದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ ಮೇ 10 ಕ್ಕೆ 2 ವರ್ಷ ಪೂರೈಸಲಿದೆ. ಹೀಗಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಿಸಲಾಗುವುದು ಎಂದು ಹೇಳಿದರು. ಮೇ 9 ರಿಂದ ಮೇ 11 ರವರೆಗೆ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಂ ಇದೇ ವೇಳೆ ಮಾಹಿತಿ ನೀಡಿದರು.

ಓದಿ: ಟ್ವಿಟರ್​ನಲ್ಲಿ ಪೇ ಸಿಎಂ ಬಳಿಕ ’ಕ್ರೈ‘ಪಿಎಂ ಟ್ರೆಂಡಿಂಗ್​: ರಾಜಕೀಯ ಅಖಾಡದಲ್ಲಿ ಜೋರಾದ ಏಟು- ಎದಿರೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.