ETV Bharat / bharat

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ - ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪದ ಮೇಲೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯವು ಶೋಕಾಸ್ ನೋಟಿಸ್ ನೀಡಿದೆ.

visva-bharati-authorities-send-warning-notice-over-land-dispute-to-amartya-sen
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ
author img

By

Published : Mar 19, 2023, 8:57 PM IST

ಬೋಲ್ಪುರ್ (ಪಶ್ಚಿಮ ಬಂಗಾಳ): ಭೂ ವಿವಾದ ಸಂಬಂಧ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯವು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ವಿಶ್ವವಿದ್ಯಾಲಯದ ಒಡೆತನದ ಸುಮಾರು 13 ದಶಮಾಂಶ (ಡೆಸಿಮಲ್) ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪದ ಮೇಲೆ ಈ ನೋಟಿಸ್​ ನೀಡಲಾಗಿದ್ದು, ಈ ಕುರಿತು ತೆರವು ಆದೇಶವನ್ನು ಏಕೆ ಹೊರಡಿಸಬಾರದು ಎಂದು ಪ್ರಶ್ನಿಸಲಾಗಿದೆ.

ಭೂ ವಿಚಾರದ ಸಂಬಂಧ ಮಾರ್ಚ್ 29ರಂದು ಬಿರ್ಭೂಮ್ ಜಿಲ್ಲೆಯ ಬೋಲ್ಪುರ್‌ನಲ್ಲಿರುವ ವಿಶ್ವಭಾರತಿಯ ಕೇಂದ್ರ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಅಮರ್ತ್ಯ ಸೇನ್ ಅವರಿಗೆ ಈ ನೋಟಿಸ್​ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳು ಸೂಚಿಸಿದ್ದಾರೆ. ತಮ್ಮ ನಿಲುವನ್ನು ತಿಳಿಸಲು ಮತ್ತು ಅದರ ಪ್ರಸ್ತುತಿಗಾಗಿ ಬಯಸುವ ಸಾಕ್ಷ್ಯಗಳು ಮತ್ತು ದಾಖಲೆಗಳೊಂದಿಗೆ ಆಗಮಿಸುವಂತೆಯೂ ಸೂಚಿಸಲಾಗಿದೆ.

ಅಲ್ಲದೇ, ಒಂದು ವೇಳೆ ಸೇನ್ ಖುದ್ದು ಹಾಜರಾಗಲು ಅಥವಾ ಅಧಿಕೃತ ಪ್ರತಿನಿಧಿಯನ್ನು ಕಳುಹಿಸಲು ವಿಫಲವಾದಲ್ಲಿ ವಿಚಾರಣೆಯನ್ನು ಏಕಪಕ್ಷೀಯ ಆಧಾರದ ಮೇಲೆ ನಡೆಸಲಾಗುವುದು. ಅದರ ಪ್ರಕಾರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. "ನೀವು ಅಥವಾ ನಿಮ್ಮ ಅಧಿಕೃತ ಪ್ರತಿನಿಧಿಯು ಹೇಳಿದ ದಿನಾಂಕ ಮತ್ತು ಸಮಯದಲ್ಲಿ ಹಾಜರಾಗಲು ವಿಫಲವಾದಲ್ಲಿ ಪ್ರಕರಣವನ್ನು ಏಕಪಕ್ಷೀಯ ಆಧಾರಕ್ಕೆ ಒಳಪಡಿಸಬಹುದು" ಎಂದು ವಿಶ್ವಭಾರತಿ ಅಧಿಕಾರಿಗಳು ತಮ್ಮ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ವಿವಾದ?: ಅಮರ್ತ್ಯ ಸೇನ್ ಅವರ ಅಜ್ಜ ಖಿತಿಮೋಹನ್ ಸೇನ್ ಅವರು ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ನಿಕಟ ಸಹಾಯಕರಾಗಿ ಕೆಲಸ ಮಾಡಿದ್ದರು. ಟ್ಯಾಗೋರರ ಕಾಲದಿಂದಲೂ ಸೇನ್ ಅವರ ಕುಟುಂಬ ಶಾಂತಿನಿಕೇತನದ 'ಪ್ರತಿಚಿ' ನಿವಾಸದಲ್ಲಿ ನೆಲೆಸಿದೆ. 1943ರಲ್ಲಿ ಸೇನ್ ಅವರ ದಿವಂಗತ ತಂದೆ ಅಶುತೋಷ್ ಸೇನ್ ಅವರ ಪರವಾಗಿ 99 ವರ್ಷಗಳ ಕಾಲ ಭೂಮಿಯನ್ನು ಗುತ್ತಿಗೆ ನೀಡಲಾಗಿತ್ತು.

2005ರಲ್ಲಿ ಅಮರ್ತ್ಯ ಸೇನ್ ಪರವಾಗಿ ಭೂಮಿಯ ಮ್ಯುಟೇಶನ್ ಮಾಡಲಾಗಿತ್ತು. ಆದರೆ, ವಿಶ್ವ ಭಾರತಿ ಅಧಿಕಾರಿಗಳು ಸೇನ್ ಅವರ 'ಪ್ರತಿಚಿ' ನಿವಾಸದ ಮೂಲಕ ಸುಮಾರು 13 ದಶಮಾಂಶ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. "ನೀವು ಯಾವುದೇ ಅಧಿಕಾರವಿಲ್ಲದೆ ವಿಶ್ವಭಾರತಿ ಒಡೆತನದ ವಿಶ್ವಭಾರತಿ ಸಂಸ್ಥೆಯ ನಿಗದಿತ ಸಾರ್ವಜನಿಕ ಆವರಣದಲ್ಲಿ ಅಂದಾಜು 13 ದಶಮಾಂಶಗಳಷ್ಟು ಹೆಚ್ಚುವರಿ ಭೂಮಿಯನ್ನು (ಅಂದರೆ ಗುತ್ತಿಗೆ ಪಡೆದ ಭೂಮಿಯ ಜೊತೆಗೆ) ವಶಪಡಿಸಿಕೊಂಡಿರುವುದು ಕಂಡುಬಂದಿದೆ" ನೋಟಿಸ್​ನಲ್ಲಿ ದೂರಲಾಗಿದೆ.

ತಂದೆಯ ಇಚ್ಛೆಯ ಮೇರೆಗೆ ನನ್ನ ಹೆಸರಿಗೆ ಭೂಮಿ ಎಂದಿದ್ದ ಸೇನ್​: ಜನವರಿಯಲ್ಲಿ ಅಮರ್ತ್ಯ ಸೇನ್ ಅವರ ನಿವಾಸ ಮತ್ತು ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಅಲ್ಲದೇ, ಇತ್ತೀಚೆಗೆ ಭೂ ಮತ್ತು ಭೂಸುಧಾರಣಾ ಇಲಾಖೆಯು ತನ್ನ ತಂದೆ ದಿವಂಗತ ಅಶುತೋಷ್ ಸೇನ್ ಅವರ ಇಚ್ಛೆಯ ಮೇರೆಗೆ ಇಡೀ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿದೆ ಎಂದು ಅಮರ್ತ್ಯ ಸೇನ್ ಹೇಳಿಕೆ ನೀಡಿದ್ದರು. "ಭೂಮಿ ನನ್ನ ತಂದೆಯ ಹೆಸರಿನಲ್ಲಿತ್ತು, ನಂತರ ಭೂಮಿ ನನ್ನ ಹೆಸರಿನಲ್ಲಿ ಆಗಬೇಕಿತ್ತು. ಅದರಂತೆ, ಬ್ಲಾಕ್ ಲ್ಯಾಂಡ್ ಮತ್ತು ಲ್ಯಾಂಡ್ ರಿಫಾರ್ಮ್ಸ್ ಆಫೀಸರ್ (ಬಿಎಲ್ ಅಂಡ್​ ಆರ್‌ಒ) ತಮ್ಮ ಹೆಸರಿಗೆ ಮಾಡಿದ್ದಾರೆ ಎಂದು ಸೇನ್ ತಿಳಿಸಿದ್ದಾರೆ.

ಇದನ್ನೂ ಓದಿ: ನೊಬೆಲ್​ ಪುರಸ್ಕೃತ ಅಮರ್ತ್ಯ ಸೇನ್​​​ಗೆ ಆಧಾರ್​ ಕಾರ್ಡ್​ ವಿತರಿಸಿದ ಅಂಚೆ ಇಲಾಖೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.