ETV Bharat / bharat

ಹಿರಿಯ ನಟನ ಬಂಗಲೆಯಲ್ಲಿ ಕೊಹ್ಲಿಯ ಹೊಸ ರೆಸ್ಟೋರೆಂಟ್​!

author img

By

Published : Sep 2, 2022, 7:21 PM IST

ಉನ್ನತ ದರ್ಜೆಯ ರೆಸ್ಟೋರೆಂಟ್​ನ್ನು ಪ್ರಾರಂಭಿಸಲು ದಿವಂಗತ ನಟ ಕಿಶೋರ್​ ಕುಮಾರ್​ ಅವರ ಬಂಗಲೆಯನ್ನು ಗುತ್ತಿಗೆ ಪಡೆದ ಕೊಹ್ಲಿ.

Kohli took this bungalow on lease for 5 years
ವಿರಾಟ್ ಕೊಹ್ಲಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮುಂಬೈನಲ್ಲಿ ಉನ್ನತ ದರ್ಜೆಯ ರೆಸ್ಟೋರೆಂಟ್​ ತೆರೆಯಲು ತಯಾರಿ ನಡೆಸಿದ್ದಾರೆ.

  • Cricketer Virat Kohli to start a restaurant in the bungalow of Legendary singer late Kishore Kumar in Mumbai: Amit Kumar, Kishore Kumar's son

    (File Pics) pic.twitter.com/CR4fE5wqVj

    — ANI (@ANI) September 2, 2022 " class="align-text-top noRightClick twitterSection" data=" ">

ಇದಕ್ಕಾಗಿ ಕೊಹ್ಲಿ, ನಗರದ ಜುಹುದಲ್ಲಿರುವ ದಿವಂಗತ ಬಾಲಿವುಡ್​ನ ಖ್ಯಾತ ನಟ ಹಾಗೂ ಗಾಯಕ ಕಿಶೋರ್ ಕುಮಾರ್​ ಅವರ ಬಂಗಲೆಯ ಆವರಣದ ಪ್ರಮುಖ ಭಾಗವನ್ನು 5 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿದ್ದು, ಉನ್ನತ ದರ್ಜೆಯ ರೆಸ್ಟೋರೆಂಟ್​ನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ರೆಸ್ಟೋರೆಂಟ್​ನ ಕೆಲಸಗಳೂ ಆರಂಭವಾಗಿವೆ ಎಂದು ಕಿಶೋರ್ ಕುಮಾರ್ ಅವರ ಪುತ್ರ ಅಮಿತ್ ಕುಮಾರ್ ತಿಳಿಸಿದ್ದಾರೆ. ಇನ್ನು ರೆಸ್ಟೋರೆಂಟ್​ ಪ್ರದೇಶದಲ್ಲೇ ಬಾಲಿವುಡ್​ನ ಸ್ಟಾರ್ ನಟರ ಮನೆಗಳು ಇರುವುದು ವಿಶೇಷ.​

ವಿರಾಟ್​ ಒಡೆತನದ ಮೂರನೇ ಹೋಟಲ್​ ಇದಾಗಿದ್ದು, 2017ರಲ್ಲಿ ದೆಹಲಿಯ ಆರ್‌ಕೆ ಪುರಂನಲ್ಲಿ ಮೊದಲ ರೆಸ್ಟೋರೆಂಟ್ ಅನ್ನು ತೆರದಿದಿದ್ದರು. ಇದಲ್ಲದೇ ದೆಹಲಿಯಲ್ಲಿಯೇ one8 ಹೆಸರಿನ ರೆಸ್ಟೋರೆಂಟ್​​ನ್ನು ಹೊಂದಿದ್ದಾರೆ. ಕೋಹ್ಲಿ ಕೇವಲ ರೆಸ್ಟೋರೆಂಟ್​ ಮಾತ್ರವಲ್ಲದೇ ವ್ರೋಗ್ನ್ ಎಂಬ ಬಟ್ಟೆ ಕಂಪನಿಯನ್ನೂ ಹೊಂದಿದ್ದಾರೆ. ಈ ಮೂಲಕ ಕ್ರೀಡೆ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕೊಹ್ಲಿ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: 1.5 ಕೋಟಿ ಕೊಟ್ಟು ನೀರಜ್ ಚೋಪ್ರಾ ಜಾವೆಲಿನ್ ಖರೀದಿಸಿದ್ಯಾರು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.