ETV Bharat / bharat

ಪೆನ್ನು, ಪೆನ್ಸಿಲ್​ ಹಿಡಿಯಬೇಕಾದ ಮಕ್ಕಳ ಕೈಗೆ ಹಾರೆ, ಕೊಡಲಿ.. ಮುಖ್ಯಶಿಕ್ಷಕ ನಡೆಗೆ ಖಂಡನೆ - ವಿಡಿಯೋ ವೈರಲ್​ - ಜಿಲ್ಲಾಧಿಕಾರಿ ರಿಷಿ ಪಾಂಡೆ

ವಿಡಿಯೋ ವೈರಲ್​ ಆಗುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶ ರಿಚಿ ಪಾಂಡೆ ಹಾಗೂ ಬ್ಲಾಕ್​ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್​ ಕೂಡ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Children working in school
ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು
author img

By

Published : Jul 30, 2022, 5:36 PM IST

ಜೆಹಾನಾಬಾದ್(ಬಿಹಾರ​): ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲೆಯಲ್ಲೇ ಮಕ್ಕಳ ಕೈಗೆ ಹಾರೆ, ಕೊಡಲಿ ಕೊಟ್ಟು ಕೆಲಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್​ ಆಗುತ್ತಿದೆ. ಬಿಹಾರದ ಜೆಹಾನಾಬಾದ್​ ಜಿಲ್ಲೆಯ ಕಾಕೋ ಬ್ಲಾಕ್‌ನಲ್ಲಿರುವ ಶಾಲೆಯೊಂದರಲ್ಲಿ ಪುಸ್ತಕ ಪೆನ್ಸಿಲ್​ ಹಿಡಿಯಬೇಕಾದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿರುವ ಆರೋಪ ಹೆಡ್​ಮಾಸ್ತರ್​ ವಿರುದ್ಧ ಕೇಳಿಬಂದಿದೆ.

ಮುಖ್ಯಶಿಕ್ಷಕರ ಭಯದಿಂದ ವಿದ್ಯಾರ್ಥಿಗಳು ಏನನ್ನೂ ಮಾತನಾಡದೆ, ಅವರು ಹೇಳಿದ ಕೆಲಸವನ್ನು ಮಾಡಿದ್ದಾರೆ. ಕೆಲಸ ಮಾಡದೇ ಇದ್ದಾಗ ತನಗೂ ಥಳಿಸಿದ್ದಾರೆ ಎಂದು ಬಾಲಕನೋರ್ವ ಹೇಳುವ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು

ಓದುವ ಬದಲು ಕೆಲಸ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಓದಲು ಕಳುಹಿಸಿದರೆ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಮರ ಕಡಿಯುವುದು, ಗುಂಡಿ ತೋಡುವುದು ಮುಂತಾದ ಕೆಲಸಗಳನ್ನು ಶಾಲೆಯ ಮುಖ್ಯಶಿಕ್ಷಕರು ಮಾಡಿಸುತ್ತಾರೆ ಎನ್ನಲಾಗ್ತಿದೆ. ಶಾಲೆಯ ಪಕ್ಕದ ತಾರಸಿಯಿಂದ ಯಾರೋ ಈ ವಿಡಿಯೋ ಮಾಡಿದ್ದು, ಅದರಲ್ಲಿ ಮಕ್ಕಳು ಈ ಎಲ್ಲಾ ಕೆಲಸಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಇಟ್ಟಿಗೆಗಳನ್ನು ಕೊಂಡುಹೋಗಲು ಹೇಳಲಾಗುತ್ತದೆ. ನಾವು ಎಲ್ಲರೂ ಒಟ್ಟಾಗಿ ಮಾಡುತ್ತೇವೆ. ಬಹಳಷ್ಟು ಬಾರಿ ನಾವು ಕೆಲಸ ಮಾಡುವುದಿಲ್ಲ ಎಂದು ವಿರೋಧಿಸಿದ್ದೂ ಇದೆ ಎಂದು ಶಾಲೆಯ ವಿದ್ಯಾರ್ಥಿಯೋರ್ವ ಹೇಳುತ್ತಾನೆ.

ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ವಿಡಿಯೋ ವೈರಲ್​ ಆಗುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶ ರಿಷಿ ಪಾಂಡೆ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಇವರೊಂದಿಗೆ ಬ್ಲಾಕ್​ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್​ ಕೂಡ ಶಾಲೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಮುಖ್ಯಶಿಕ್ಷಕರು ವ್ಯಾಸಂಗದ ಹೆಸರಿನಲ್ಲಿ ಮಕ್ಕಳನ್ನು ಪ್ರತಿದಿನ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಈ ಹಿಂದೆಯೂ ಈ ಬಗ್ಗೆ ಹಲವು ಬಾರಿ ದೂರು ಬಂದಿದ್ದು, ಸಂಪೂರ್ಣ ತನಿಖೆ ನಡೆಸುತ್ತಿದ್ದೇನೆ. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಮತ್ತು ಮುಖ್ಯಶಿಕ್ಷಕರಿಂದಲೂ ಹೇಳಿಕೆ ತೆಗೆದುಕೊಳ್ಳಲಾಗಿದೆ. ಮಕ್ಕಳ ಪೋಷಕರನ್ನೂ ವಿಚಾರಿಸಲಾಗಿದೆ. ಈ ರೀತಿ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ ಎಂದು ನ್ಯಾಯಾಧೀಶ ರಿಷಿ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ : ಯಾರೋ ಮಾಡಿದ್ದ ಸಾಲಕ್ಕೆ ಸಚಿವ, ಮಾಜಿ ಸಚಿವರಿಗೆ ಕರೆ ಮಾಡಿ ಕಿರುಕುಳ.. ಲೋನ್​ ಆ್ಯಪ್​ ಸಿಬ್ಬಂದಿ ಅರೆಸ್ಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.