ETV Bharat / bharat

ಮಧ್ಯಪ್ರದೇಶ: ಶಿವಪುರಿ ಎಡಿಎಂ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್​​ - ಶಿವಪುರಿ ಎಡಿಎಂ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್​​

ಇಂದು ಮಧ್ಯಪ್ರದೇಶದಲ್ಲಿ ನಗರ ಸಂಸ್ಥೆಗಳ ಚುನಾವಣೆಯ ಕೊನೆಯ ಹಂತದ (ಸ್ಥಳೀಯ ಸಂಸ್ಥೆ ಚುನಾವಣೆ 2022) ಮತದಾನ ನಡೆದಿದೆ. ಈ ಸಂದರ್ಭದಲ್ಲಿ ಚುನಾವಣೆಗೆ ಒಂದು ದಿನ ಮೊದಲು, ಶಿವಪುರಿ ಎಡಿಎಂ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಜಾಪ್ರಭುತ್ವವೇ ಈ ದೇಶದ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ ಎನ್ನಲಾಗ್ತಿದೆ.

ಶಿವಪುರಿ ಎಡಿಎಂ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್​​

author img

By

Published : Jul 13, 2022, 7:50 PM IST

ಶಿವಪುರಿ: ಮಧ್ಯಪ್ರದೇಶದ ಶಿವಪುರಿಯ ಎಡಿಎಂ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ಜಿಲ್ಲಾ ಚುನಾವಣಾಧಿಕಾರಿ ಉಮೇಶ್ ಪ್ರಕಾಶ್ ಶುಕ್ಲಾ ಅವರು, "ಈ ದೇಶದ ದೊಡ್ಡ ತಪ್ಪೆಂದರೇ ಅದು ಪ್ರಜಾಪ್ರಭುತ್ವ" ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಚುನಾವಣೆಗೆ ಒಂದು ದಿನ ಮುಂಚಿತವಾಗಿ ಮಂಗಳವಾರ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ 'ಈಟಿವಿ ಭಾರತ' ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ.

ಭ್ರಷ್ಟ ನಾಯಕರು ಮತ ಹಾಕುವ ಮೂಲಕವೇ ಹುಟ್ಟುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವವೇ ದೇಶದ ದೊಡ್ಡ ತಪ್ಪಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಮತ್ತೊಂದೆಡೆ ಶಿವಪುರಿ ಕಲೆಕ್ಟರ್ ಅಕ್ಷಯ್ ಕುಮಾರ್ ಸಿಂಗ್ ಅವರು ಗರಿಷ್ಠ ಮತದಾನ ಮಾಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಸಹೋದ್ಯೋಗಿ ಶುಕ್ಲಾ ಮತದಾನದ ಕಲ್ಪನೆಯನ್ನು ವಿರೋಧಿಸಿದರು. ವಿಡಿಯೋದಲ್ಲಿ, ಮತದಾನ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಬಗ್ಗೆ ದೂರು ನೀಡಲು ಬಂದ ಜನರನ್ನು ಸಮಾಧಾನಪಡಿಸಲು ಶುಕ್ಲಾ ಪ್ರಯತ್ನಿಸಿದರು. ಕೇವಲ ಭ್ರಷ್ಟ ನಾಯಕರನ್ನು ಮತ ಚಲಾಯಿಸುವ ಮೂಲಕ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು ಎನ್ನಲಾಗ್ತಿದೆ.

ಸೋಮವಾರ ಕರ್ತವ್ಯನಿರತ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯ ಮತಯಂತ್ರ (ಇಡಿವಿ) ಮೂಲಕ ಮತದಾನದ ಹಕ್ಕು ನೀಡಲಾಗಿತ್ತು. ತಹಶೀಲ್ದಾರ್​​ ಕಚೇರಿಯಲ್ಲಿ ಮತಯಂತ್ರಗಳ ಕೊರತೆಯಿಂದ ಹಲವು ನೌಕರರು ಮತದಾನದಿಂದ ವಂಚಿತರಾದರು. ಈ ಬಗ್ಗೆ ದೂರು ನೀಡುವ ಸಲುವಾಗಿ ಅಭ್ಯರ್ಥಿಯೊಬ್ಬರು ಮತ್ತು ಕೆಲವು ಉದ್ಯೋಗಿಗಳು ಶುಕ್ಲಾ ಅವರೊಂದಿಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಲಡಾಖ್​ನ ಲೇಹ್‌ನಲ್ಲಿ ರಫೇಲ್ ಫೈಟರ್​ ಜೆಟ್​ ನಿಯೋಜನೆ.. ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನೆ

ವೈರಲ್ ಆಗಿರುವ ವಿಡಿಯೋದಲ್ಲಿ ಶುಕ್ಲಾ, "ಮತದಾರರ ಪಟ್ಟಿಗೆ ಹೆಸರು ಸೇರಿಸದಿದ್ರೆ ನಿಮಗೇನು ಹಾನಿಯಾಗುತ್ತದೆ?. ಇವತ್ತಿನವರೆಗೂ ಮತ ಚಲಾಯಿಸಿ ಏನು ಮಾಡಿದ್ದೀರಿ? ಎಷ್ಟು ಭ್ರಷ್ಟ ನಾಯಕರನ್ನು ಹುಟ್ಟು ಹಾಕಿದ್ದೀರಿ? ನಾನು ಮತದಾನ ಮತ್ತು ಪ್ರಜಾಪ್ರಭುತ್ವ ಈ ದೇಶದ ದೊಡ್ಡ ತಪ್ಪುಗಳೆಂದು ಪರಿಗಣಿಸುತ್ತೇನೆಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.