ETV Bharat / bharat

ಅಂಗಡಿ ತೆರವುಗೊಳಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ, ಸ್ಥಳದಿಂದ ಕಾಲ್ಕಿತ್ತ ಖಾಕಿ ಪಡೆ - ಕೋವಿಡ್ ಮಾರ್ಗಸೂಚಿ

ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎಂದು ಅಂಗಡಿ ತೆರವುಗೊಳಿಸಲು ಮುಂದಾದ ಪೊಲೀಸರ ಮೇಲೆ ವ್ಯಾಪಾರಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

attack on police
attack on police
author img

By

Published : May 10, 2021, 9:05 PM IST

ಸಿಂಗ್ರೌಲಿ(ಮಧ್ಯಪ್ರದೇಶ): ಇಲ್ಲಿನ ಮಾರುಕಟ್ಟೆವೊಂದರಲ್ಲಿ ಪೊಲೀಸರು ಹಾಗೂ ವ್ಯಾಪಾರಸ್ಥರ ನಡುವೆ ಮಾರಾಮಾರಿ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಮೇಲೆ ಕಲ್ಲು ತೂರಾಟ, ಸ್ಥಳದಿಂದ ಕಾಲ್ಕಿತ್ತ ಖಾಕಿ ಪಡೆ

ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ತರಕಾರಿ ಮಾರುಕಟ್ಟೆಯಲ್ಲಿ ಈ ವಿವಾದ ನಡೆದಿದೆ. ತರಕಾರಿ ಅಂಗಡಿ ಸ್ಥಳಾಂತರ ಮಾಡುವಂತೆ ಪೊಲೀಸರು ವ್ಯಾಪಾರಿಗಳಿಗೆ ಹೇಳಲು ಮುಂದಾಗುತ್ತಿದ್ದಂತೆ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಮಾರಾಟಗಾರರು ಕಲ್ಲು ಎಸೆದಿದ್ದಾರೆ. ಇದರಿಂದ ಖಾಕಿ ಪಡೆ ಅಲ್ಲಿಂದ ಕಾಲ್ಕಿತ್ತಿದೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟ: ಹೆಂಡ್ತಿ, ಮೂವರು ಮಕ್ಕಳಿಗೆ ವಿಷ ನೀಡಿ ಪರಾರಿಯಾದ ಪಾಪಿ ಗಂಡ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಹಾನಗರ ಪಾಲಿಕೆ ತರಕಾರಿ ವ್ಯಾಪಾರಿಗಳಿಗೆ ಅಂಗಡಿ ತೆರೆವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ವ್ಯಾಪಾರಸ್ಥರು ಅದಕ್ಕೆ ಸಿದ್ಧರಿರಲಿಲ್ಲ. ಹೀಗಾಗಿ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಅಂಗಡಿ ಮುಚ್ಚಲು ಮುಂದಾಗುತ್ತಿದ್ದಂತೆ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.