ಆದಿಲಾಬಾದ್: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದ ಬೆಳಕಿಗೆ ಬಂದಿದೆ. ಕೋವಿಡ್ ಸೋಂಕು ತಗುಲಿರುವ ವಿದ್ಯಾರ್ಥಿನಿಯೊಬ್ಬರು ಗ್ರಾಮದೊಳಗೆ ಬಿಡದೇ ಊರಿನ ಜನ ಅಡ್ಡಪಡಿಸಿರುವ ಘಟನೆ ಇಂದ್ರಪೆಲ್ಲಿ ತಾಲೂಕಿನ ಸಾಲೇಗೂಡ್ನಲ್ಲಿ ನಡೆದಿದೆ.
ಈ ಗ್ರಾಮದ ಮಗಳು ಗುರುಕುಲಂನಲ್ಲಿ ಇಂಟರ್ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಗೆ ಕೋವಿಡ್ ಸೋಂಕು ತಗುಲಿದ್ದು, ಕೂಡಲೇ ಆ ವಿದ್ಯಾರ್ಥಿನಿ ತನ್ನ ಗ್ರಾಮಕ್ಕೆ ತೆರಳಿದ್ದಾಳೆ. ಈ ಸುದ್ದಿ ತಿಳಿದ ಗ್ರಾಮಸ್ಥರು ಆಕೆಯನ್ನು ಊರಿನೊಳಗೆ ಬಿಡದೇ ಅಡ್ಡಿಪಡಿಸಿದ್ದಾರೆ.
ಈ ಸುದ್ದಿ ತಿಳಿದ ಎಟಿಡಬ್ಲ್ಯೂಒ ಕಾಂತ್ರಿಕುಮಾರ್, ಗುರುಕುಲಂ ಆರ್ಸಿಒ ಗಂಗಾಧರ್ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಒಳ ಪ್ರವೇಶಿಸುವಂತೆ ಮನವಿ ಮಾಡಿದರು. ಆದರೂ ಗ್ರಾಮಸ್ಥರು ಇದಕ್ಕೆ ನಿರಾಕರಿಸಿದರು. ಮುಂದಿನ ನಾಲ್ಕು ದಿನಗಳು ಕಳೆದ ಬಳಿಕವೇ ಆಕೆಗೆ ಊರಿನೊಳಗೆ ಪ್ರವೇಶ ನೀಡಲಾಗುವುದು ಎಂದು ಗ್ರಾಮೀಣ ಮುಖ್ಯಸ್ಥರು ಹೇಳಿದ್ದಾರೆ.
ಗ್ರಾಮದೊಳಗೆ ಪ್ರವೇಶ ನಿರಾಕರಣೆಯಾದ ಹಿನ್ನೆಲೆ ವಿದ್ಯಾರ್ಥಿನಿಗೆ ಊರಿನ ಹೊರ ಭಾಗದ ಹೊಲದಲ್ಲಿ ಆಶ್ರಯ ಪಡೆಯುವಂತ ಸ್ಥಿತಿ ನಿರ್ಮಾಣವಾಗಿದೆ.