ಹೈದರಾಬಾದ್: ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ವಿಜಯ್ ದೇವರಕೂಂಡ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ನಟ ವಿಜಯ್ ದೇವರಕೊಂಡ ಸಹ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ್ದು, ಜೀವನದಲ್ಲಿ ಕೆಲ ಗಂಟೆ ಅವರೊಂದಿಗೆ ನಾನು ಕಳೆದಿರುವ ಸಮಯ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ.
ವಿಜಯ್ ಸಹೋದರ ಆನಂದ ದೇವರಕೊಂಡ ಅಭಿನಯದ 'ಪುಷ್ಟಕ ವಿಮಾನ' ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಅವರು, ನಿನ್ನೆ ಪುನೀತ್ ಅಣ್ಣ ನಮ್ಮನ್ನ ಅಗಲಿದ್ದಾರೆ. ನಾನು ಅವರ ಜೊತೆ ಜೀವನದಲ್ಲಿ 2-3 ಗಂಟೆ ಕಳೆದಿದ್ದೇನೆ. ಅವರು ನನ್ನನ್ನು ಮನೆಗೆ ಕರೆದಿದ್ದರು. ಧೀಡಿರ್ ಅಂತ ಅವರು ನಮ್ಮನ್ನ ಅಗಲಿದ್ದು, ನನಗೆ ನಂಬೋಕೆ ಅಗ್ತಿಲ್ಲ. ಅಲ್ಲು ಅರ್ಜುನ್ ಅಣ್ಣನು ಸಹ ಅವರ ಬಗ್ಗೆ ಹೇಳಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.