ನವದೆಹಲಿ: ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಕೊಲೆ ಸಂಚು ನಡೆದಿರುವ ಪ್ರಕರಣದ ಭಾಗವಾಗಿ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಆತ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇದ್ದಾನೆ.
"ನಾಲ್ವರು ರೈತ ಮುಖಂಡರಿಗೆ ಗುಂಡಿಕ್ಕುವ ಯೋಜನೆ ರೂಪಿಸಲಾಗಿತ್ತು. ಅಲ್ಲದೇ, ಜನವರಿ 26ರಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸುವ ಮೂಲಕ ಟ್ರ್ಯಾಕ್ಟರ್ ಪರೇಡ್ ಸಮಯದಲ್ಲಿ ಗಲಭೆ ಸೃಷ್ಟಿಸುವ ಯೋಜನೆ ಇತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ಮತ್ತೆ ರೈತರ ಮೇಲೆ ಗುಂಡು ಹಾರಿಸುತ್ತಾರೆ. ಈ ಮೂಲಕ ರೈತರ ಆಂದೋಲನವನ್ನು ಹಿಂಸಾತ್ಮಕವಾಗಿಸಲು ಸಂಚು ರೂಪಿಸಲಾಗಿತ್ತು." ಎಂದು ಬಾಲಕ ಕಳೆದ ರಾತ್ರಿ ಹೇಳಿಕೆ ನೀಡಿದ್ದ.
ಇದೀಗ ಆತ ತನ್ನ ಹೇಳಿಕೆ ಬದಲಾಯಿದ್ದಾನೆ. ರೈತರು ನನ್ನನ್ನು ಬಲವಂತವಾಗಿ ಕರೆಸಿಕೊಂಡಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದು, ಇದರ ಅನುಮಾನಾಸ್ಪದ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ಪ್ರಕಾರ, ಆತನನ್ನು 2 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿ, ಥಳಿಸಲಾಯಿತು ಮತ್ತು ಕೊಲ್ಲುತ್ತೇವೆ ಎಂಬ ಬೆದರಿಕೆಯೂ ಹಾಕಲಾಗಿತ್ತು. ಜೀವ ಉಳಿಸಬೇಕಾದರೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಕಥೆ ಕಟ್ಟಿ ಹೇಳಿಕೆ ನೀಡಬೇಕೆಂದು ಬಲವಂತಪಡಿಸಿದ್ದರು ಎಂದು ಆರೋಪಿ ಹೇಳಿದ್ದಾನೆ.
ಪೊಲೀಸ್ ತನಿಖೆಯ ನಂತರವಷ್ಟೇ ಎಲ್ಲಾ ವಿಷಯಗಳು ಸ್ಪಷ್ಟವಾಗಬೇಕಿವೆ.