ETV Bharat / bharat

ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ: ಆರೋಪಿ ಬಂಧನ, ಆರ್​ಪಿಎಫ್​ ಐಜಿ ಹೇಳಿದ್ದೇನು?

author img

By

Published : Jul 31, 2023, 9:18 PM IST

Updated : Jul 31, 2023, 9:55 PM IST

ಆರ್‌ಪಿಎಫ್ ಕಾನ್ಸ್‌ಟೇಬಲ್‌ವೊಬ್ಬ ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿತ್ತು. ಈ ದಾಳಿಯಲ್ಲಿ ಓರ್ವ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಸಹಿತ ನಾಲ್ವರು ಮೃತಪಟ್ಟಿದ್ದಾರೆ. ಈಗ ಈ ಕುರಿತು ವಿಡಿಯೋವೊಂದು ವೈರಲ್​ ಆಗ್ತಿದ್ದು, ಆರೋಪಿ ಚಿಕ್ಕಪ್ಪ ತನ್ನ ಮಗನ ಬಗ್ಗೆ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

RPF jawan kills four people  RPF jawan justifying killing  video of RPF jawan justifying killing  Video of RPF jawan killing  Jaipur Mumbai Express viral video  ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ  ಆರೋಪಿ ವಿಡಿಯೋ ವೈರಲ್  ಅವನ ಕೈಯಲ್ಲಿ ಅಸ್ತ್ರ ಕೊಡಬಾರದಿತ್ತು ಎಂದ ಚಿಕ್ಕಪ್ಪ  ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ  ಆರ್‌ಪಿಎಫ್ ಕಾನ್ಸ್‌ಟೇಬಲ್‌ವೊಬ್ಬ ರೈಲಿನಲ್ಲಿ ಗುಂಡಿನ ದಾಳಿ  ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಸಹಿತ ನಾಲ್ವರು ಮೃತ  ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್  ಎಕ್ಸ್‌ಪ್ರೆಸ್‌ನಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ದಾಳಿ  ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್  ಮನಬಂದಂತೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಕೊಂದಿದ್ದಾರೆ
ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ

ಮುಂಬೈ (ಮಹಾರಾಷ್ಟ್ರ): ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ದಾಳಿ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ರಾಜಸ್ಥಾನದ ಜೈಪುರದಿಂದ ಮುಂಬೈಗೆ ಹೋಗುತ್ತಿದ್ದ ರೈಲಿನಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮನಬಂದಂತೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಕೊಂದಿದ್ದಾನೆ. ಪಾಲ್ಘರ್ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿಯ ವರ್ತನೆಯ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಈ ಘಟನೆ ಕುರಿತು ವಿಡಿಯೋವೊಂದು ವೈರಲ್​ ಸಹ ಆಗ್ತಿದೆ.

ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ರೈಲ್ವೇ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಎಎಸ್‌ಐ ಟಿಕಾರಾಂ ಮೀನಾ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಮತ್ತೊಂದು ಬೋಗಿಯಲ್ಲಿದ್ದ ಮೂವರು ಪ್ರಯಾಣಿಕರ ಮೇಲೆ ಗುಂಡು ಹಾರಿಸಲಾಗಿದ್ದು, ಅವರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬಳಿಕ ಮುಂದಿನ ನಿಲ್ದಾಣದಲ್ಲಿ ರೈಲು ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ (ಪಶ್ಚಿಮ ರೈಲ್ವೆ) ಪ್ರವೀಣ್ ಸಿನ್ಹಾ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಅವನದು ಅಲ್ಪ ಕೋಪ. ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾನೆ. ಆ ಸಮಯದಲ್ಲಿ ದೊಡ್ಡ ಜಗಳ ಇರಲಿಲ್ಲ. ಆದರೆ ಕೋಪದ ಕ್ಷಣದಲ್ಲಿ ಅವನು ತನ್ನ ಹಿರಿಯ ಅಧಿಕಾರಿಯನ್ನು ಹೊಡೆದು ಹಾಕಿದ್ದಾರೆ. ನಂತರ ಕಾಣಿಸಿಕೊಂಡವರಿಗೆ ಗುಂಡು ಹಾರಿಸುತ್ತಲೇ ಇದ್ದ ಎಂದು ಅಧಿಕಾರಿ ಹೇಳಿಕೆ ನೀಡಿದ್ದಾರೆ.

ಚೇತನ್ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಮೀತೈ ಗ್ರಾಮದ ನಿವಾಸಿ. ಈ ಘಟನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಎಎಸ್​ಐ ಅಧಿಕಾರಿ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಶ್ಯಾಮಪುರ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅವರು 2025 ರಲ್ಲಿ ನಿವೃತ್ತರಾಗಲಿದ್ದರು. ಎಎಸ್‌ಐ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. ಮೃತ ಮೂವರು ಪ್ರಯಾಣಿಕರಿಗೆ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ಭದ್ರತೆಗಾಗಿ ಆರ್‌ಪಿಎಫ್ ಸಿಬ್ಬಂದಿಗೆ ಎಸ್ಕಾರ್ಟ್ ಡ್ಯೂಟಿ ನೀಡಲಾಗುತ್ತದೆ. ಎಎಸ್‌ಐ ಅವರನ್ನು ಜೈಪುರದಿಂದ ಮುಂಬೈಗೆ ಹೋಗುವ ರೈಲಿನಲ್ಲಿ ಎಸ್ಕಾರ್ಟ್ ಇನ್‌ಚಾರ್ಜ್ ಆಗಿ ನಿಯೋಜಿಸಲಾಗಿತ್ತು ಮತ್ತು ಕಾನ್‌ಸ್ಟೆಬಲ್ ಚೇತನ್ ಸಹ ಬೆಂಗಾವಲು ಕರ್ತವ್ಯದಲ್ಲಿದ್ದರು. ಜೈಪುರ ರೈಲಿನಲ್ಲಿ ಎಎಸ್‌ಐ, ಚೇತನ್ ಸೇರಿದಂತೆ ನಾಲ್ವರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಗುಜರಾತ್‌ನ ಸೂರತ್‌ನಲ್ಲಿ ರೈಲು ಹತ್ತಿದರು. ಈ ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಕುಟುಂಬ ಸದಸ್ಯರಿಗೆ ಪರಿಹಾರ ಘೋಷಣೆ: ಚಲಿಸುತ್ತಿದ್ದ ರೈಲಿನಲ್ಲಿ ಯಾವುದೋ ವಿಚಾರಕ್ಕೆ ಎಎಸ್​ಐ ಮತ್ತು ಚೇತನ್​ ನಡುವೆ ಜಗಳ ನಡೆದಿದೆ. ಬಳಿಕ ಚೇತನ್ ಸರ್ವೀಸ್ ಗನ್​ನಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಎಎಸ್​ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರಿಗೆ ಮಗನೊಬ್ಬನಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಮಗಳನ್ನು ವಿವಾಹ ಮಾಡಿಕೊಟ್ಟಿದ್ದಾರೆ. ಎಎಸ್‌ಐ ಅವರು 6 ತಿಂಗಳ ನಂತರ ನಿವೃತ್ತಿ ಹೊಂದಲಿದ್ದರು.

ಈ ಘಟನೆಯ ನಂತರ, ಆರ್‌ಪಿಎಫ್‌ನ ದಿವಂಗತ ಎಎಸ್‌ಐ ಅವರ ಕುಟುಂಬ ಸದಸ್ಯರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ. ಇದರ ಪ್ರಕಾರ ಮೃತರ ಸಂಬಂಧಿಕರಿಗೆ ರೈಲ್ವೆ ಸುರಕ್ಷತಾ ಕಲ್ಯಾಣ ನಿಧಿಯಿಂದ 15 ಲಕ್ಷ ರೂ. ಇದಲ್ಲದೆ ಮರಣ ಅಥವಾ ನಿವೃತ್ತಿ ನಿಧಿಯಿಂದ 15 ಲಕ್ಷ ರೂ. ಸಂಬಂಧಿಕರಿಗೆ ಅಂತಿಮ ಸಂಸ್ಕಾರಕ್ಕಾಗಿ 20 ಸಾವಿರ ರೂ., ವಿಮಾ ಯೋಜನೆಯಡಿ 65 ಸಾವಿರ ರೂ. ಪರಿಹಾರ ಘೋಷಿಸಿದೆ.

ವೈರಲ್​ ವಿಡಿಯೋ ಬಗ್ಗೆ ಅಧಿಕಾರಿಗಳು ಹೇಳಿದ್ದು ಹೀಗೆ..: ಆರೋಪಿ ಕಾನ್‌ಸ್ಟೆಬಲ್ ಹತ್ಯೆಯನ್ನು ಸಮರ್ಥಿಸುವ ವಿಡಿಯೋ ಕುರಿತು ಅಧಿಕಾರಿಗಳಿಗೆ ಕೇಳಿದಾಗ, ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಮಿಷನರ್ ರವೀಂದ್ರ ಶಿಶ್ವೆ ಮಾತನಾಡಿ, ವಿಡಿಯೋ ಕ್ಲಿಪ್ ಅನ್ನು ಇತರ ವಸ್ತುಗಳ ಜೊತೆಗೆ ಪರಿಶೀಲಿಸಲಾಗುತ್ತಿದೆ. ಯಾವುದೇ ತೀರ್ಮಾನಗಳಿಗೆ ಹೋಗುವ ಮುಂಚೆಯೇ ಈ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಈ ವಿಡಿಯೋ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಲಿಸುತ್ತಿರುವ ರೈಲಿನಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ ಎಂದು ಹೇಳಿದರು.

ನಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದ: ಇತ್ತೀಚಿನ ದಿನಗಳಲ್ಲಿ ಚೇತನ್ ಮಾನಸಿಕ ಅಸ್ವಸ್ಥನಾಗಿದ್ದ. ರಿವರ್ಸ್ ಡ್ಯೂಟಿ ವಿಧಿಸಿದ್ದರಿಂದ ತುಂಬಾ ನೊಂದಿದ್ದರು. ಇದರೊಂದಿಗೆ ಮಾನಸಿಕವಾಗಿ ನೊಂದಿರುವಾಗ ಇಷ್ಟು ದೊಡ್ಡ ಅಸ್ತ್ರ ಕೊಡಬಾರದಿತ್ತು ಎಂದು ಚೇತನ್ ಚಿಕ್ಕಪ್ಪ ಭಗವಾನ್ ಸಿಂಗ್ ಹೇಳುತ್ತಾರೆ.

ಚೇತನ್​ನನ್ನು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪದೇ ಪದೇ ವರ್ಗಾವಣೆ ಮಾಡಿದ್ದರಿಂದ ಮತ್ತಷ್ಟು ನೊಂದುಕೊಂಡಿದ್ದರು. ತೌಜಿ ನನ್ನನ್ನು ಮತ್ತೆ ವರ್ಗಾವಣೆ ಮಾಡಿದ್ದಾರೆ ಎಂದು ಹಿಂದೆಯೇ ಹೇಳಿದ್ದನು. ಕೆಲಸ ಮಾಡಲೇಬೇಕು, ಕೆಲಸದಲ್ಲಿಯೇ ಇರಬೇಕು ಎಂದು ನಾನು ಹೇಳಿದ್ದೆ. ನಾವು ಸಾಕಷ್ಟು ವಿವರಿಸಿದ್ದೆವು. ಆದರೆ ಇಲ್ಲಿನ ಕೆಲಸ ಸ್ವಲ್ಪ ಟೆನ್ಷನ್ ಇದೆ, ನನಗೆ ರಿವರ್ಸ್ ಡ್ಯೂಟಿ ಹಾಕುತ್ತಿದ್ದರು. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನಮ್ಮ ಮುಂದೆ ಹೇಳುತ್ತಿದ್ದ ಎಂದು ಅವರ ಚಿಕ್ಕಪ್ಪ ಹೇಳಿಕೆ ನೀಡಿದ್ದಾರೆ.

ಚೇತನ್ ತಪ್ಪು ಹೆಜ್ಜೆ ಇಟ್ಟಿದ್ದಾನೆ. ಅಂತಹ ಕೃತ್ಯಕ್ಕೆ ಮುಂದಾಗಬಾರದಿತ್ತು. ಅಧಿಕಾರಿಗಳು​ ಮಾನಸಿಕವಾಗಿ ನೊಂದಿರುವವರ ಕೈಗೆ ದೊಡ್ಡ ಅಸ್ತ್ರ ನೀಡಬಾರದಿತ್ತು ಎಂದು ಭಗವಾನ್ ಸಿಂಗ್ ಹೇಳಿದ್ದಾರೆ.

ಓದಿ: RPF Jawan: ಜೈಪುರ-ಮುಂಬೈ ರೈಲಿನಲ್ಲಿ ಗುಂಡು ಹಾರಿಸಿದ RPF ಕಾನ್ಸ್‌ಟೇಬಲ್‌; ನಾಲ್ವರು ಸಾವು!

Last Updated : Jul 31, 2023, 9:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.