ಇಂದೋರ್(ಮಧ್ಯಪ್ರದೇಶ): ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆಗಳ ಭರದಲ್ಲಿ ಇಂದೋರ್‌ನಲ್ಲಿ ಕಾಂಗ್ರೆಸಿಗರು ಪ್ರಚಾರ ಸಮಯದಲ್ಲಿ ಕುರಾನ್ ಪಠಿಸುವ ಮೂಲಕ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಒಂದು ವೈರಲ್ ಆಗಿದೆ.
ವೈರಲ್ ಆಗಿರೋ ವಿಡಿಯೋದಿಂದ ರಾಜ್ಯ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ವಿಡಿಯೋ ಕುರಿತು ಮುಸ್ಲಿಂ ಸಮಾಜದ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೂ ಈ ವಿಷಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ನಗರ ಸಂಸ್ಥೆ ಚುನಾವಣೆ ನಿಮಿತ್ತ ಚಂದನ್ ನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ನಗರ ಅಧ್ಯಕ್ಷ ವಿನಯ್ ಬಕಲಿವಾಲ್ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕುರಾನ್ ಪಠಿಸುವ ಮೂಲಕ ಪ್ರತಿಜ್ಞೆ ಮಾಡಿಸಿದ್ದಾರೆ. ಅವರಿಗೆ ಬೆಂಬಲ ನೀಡಿ ಅವರೂ ಪ್ರಮಾಣವಚನ ಸ್ವೀಕರಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರೆ ಕಾರ್ಯಕರ್ತರಿಗೆ ಇದು ಆಕ್ರೋಶವನ್ನುಂಟು ಮಾಡಿತ್ತು.