ನವದೆಹಲಿ : ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ದೇಶದ ಜನರಿಗೆ ನ್ಯೂ ಇಯರ್ ಈವ್ (ಹೊಸ ವರ್ಷದ ಮುನ್ನಾ ದಿನ ಸಂಜೆ ) ನ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷ 2021 ಕ್ಕೆ ಕಾಲಿಡುತ್ತಿರುವ ದೇಶದ ಎಲ್ಲ ನಾಗರಿಕರಿಗೆ ಆತ್ಮೀಯ ಶುಭಾಶಯ. ಇದು ನಾವೆಲ್ಲರೂ ಹೊಸ ವರ್ಷವನ್ನು ಎದುರು ನೋಡುತ್ತಿರುವ ಸಂದರ್ಭವಾಗಿದೆ. ಇದು ನಮ್ಮ ಆಶಾವಾದ, ಭರವಸೆ ಮನೋಭಾವವನ್ನು ಬಲಪಡಿಸುವ ಒಂದು ಸಂದರ್ಭವಾಗಿದೆ. ವಿಚಿತ್ರ ಸಾಂಕ್ರಾಮಿಕ ರೋಗದ ಮೂಲಕ ನಮಗೆ ಅನೇಕ ಜೀವನ ಪಾಠಗಳನ್ನು ಕಲಿಸಿದ ವರ್ಷಕ್ಕೆ ವಿದಾಯ ಹೇಳುವಾಗ, ಹೊಸ ವರ್ಷವನ್ನು ಹೊಸ ಭರವಸೆಯ ಮನೋಭಾವದಿಂದ ಸ್ವಾಗತಿಸೋಣ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.
ಓದಿ : ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್
ನಾವು ಸವಾಲುಗಳನ್ನು ಆತ್ಮ ವಿಶ್ವಾಸ, ಒಗ್ಗಟ್ಟಿನ ಮೂಲಕ ಜಯಿಸುತ್ತೇವೆ ಎಂದು ಉತ್ಸಾಹದಿಂದ ಆಶಿಸೋಣ. 2021 ಕಳೆದ ವರ್ಷಕ್ಕಿಂತ ಹೆಚ್ಚು ಆರೋಗ್ಯಕರ, ಸಂತೋಷ ಮತ್ತು ಸಾಮರಸ್ಯದ ಕೂಡಿ ಬರಲಿ ಆಶಿಸಿದ್ದಾರೆ.