ETV Bharat / bharat

ಗಾಯಕಿ ಲತಾ ಮಂಗೇಶ್ಕರ್​ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆದಿದೆ: ವೈದ್ಯರ ಮಾಹಿತಿ - ಮತ್ತೆ ಹದಗೆಟ್ಟ ಲತಾ ಮಂಗೇಶ್ಕರ್ ಆರೋಗ್ಯ

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್​ ಅವರ ಆರೋಗ್ಯದ ಮೇಲೆ ನಾನು ನಿಗಾ ವಹಿಸಿದ್ದೇನೆ ಎಂದು ಡಾ.ಪ್ರತೀತ್ ಸಮ್ದಾನಿ ಹೇಳಿದ್ದಾರೆ.

singer Lata Mangeshkar
ಗಾಯಕಿ ಲತಾ ಮಂಗೇಶ್ಕರ್
author img

By

Published : Feb 6, 2022, 9:33 AM IST

ಮುಂಬೈ (ಮಹಾರಾಷ್ಟ್ರ) : ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರಾದ ಡಾ.ಪ್ರತೀತ್ ಸಮ್ದಾನಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ ಟಾಲಿವುಡ್​ ಹಾಸ್ಯ ನಟ ರಾಹುಲ್ ರಾಮಕೃಷ್ಣ

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್​ ಅವರ ಆರೋಗ್ಯದ ಮೇಲೆ ನಾನು ನಿಗಾ ವಹಿಸಿದ್ದೇನೆ ಎಂದು ಡಾ.ಪ್ರತೀತ್ ಸಮ್ದಾನಿ ಹೇಳಿದ್ದಾರೆ. ಶನಿವಾರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ವೈದ್ಯರು ಲತಾ ಮಂಗೇಶ್ಕರ್​ ಅವರ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ಕಿವಿಗೊಡಬೇಡಿ, ಅವರ ಆರೋಗ್ಯದಲ್ಲಿ ಸ್ಥಿರತೆ ಇದ್ದು, ಐಸಿಯುನಲ್ಲೇ ಚಿಕಿತ್ಸೆ ಮುಂದುವರೆದಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದರು.

ಜನವರಿ 9ರಂದು ಕೋವಿಡ್​ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್​ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸುಧಾರಿಸಿದ ಹಿನ್ನೆಲೆ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್​ ಅನ್ನು ಹಿಂದಿನ ವಾರವಷ್ಟೇ ತೆಗೆದು ಹಾಕಲಾಗಿತ್ತು.

ಇದನ್ನೂ ಓದಿ: ಗೊಂದಲಗಳಿಗೆ ಕಿವಿಗೊಡಬೇಡಿ : ಲತಾ ಮಂಗೇಶ್ಕರ್​ ಆರೋಗ್ಯ ಸ್ಥಿತಿ ಸ್ಥಿರ ಎಂದ ಆಸ್ಪತ್ರೆ ವೈದ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.