ಪುಣೆ(ಮಹಾರಾಷ್ಟ್ರ): ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಅವರು ನಿನ್ನೆ ವಿಧಿವಶರಾಗಿದ್ದು, ಅವರ ಪಾರ್ಥಿವ ಶರೀರವನ್ನು ಅಕುರ್ಡಿಯಲ್ಲಿರುವ ನಿವಾಸಕ್ಕೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಪುಣೆಯಲ್ಲಿರುವ ವೈಕುಂಠ ಸ್ಮಶಾನದಲ್ಲಿಂದು ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.
ಕಳೆದ 5 ದಶಕಗಳಲ್ಲಿ ಬಜಾಜ್ ಸಮೂಹವನ್ನು ಮುನ್ನಡೆಸುವಲ್ಲಿ ರಾಹುಲ್ ಬಜಾಜ್ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ, ಹುವಾರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದ ಬಜಾಜ್, 2001ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು.
ಇದನ್ನೂ ಓದಿ: ಹಿಜಾಬ್ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದ್ದರೂ ಇಸ್ಲಾಂಗಿದು ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ