ETV Bharat / bharat

ಭಾರತೀಯ ಚಿತ್ರರಂಗದ​ ಹಿರಿಯ ನಟ ಅನುಪಮ್​ ಶ್ಯಾಂ ಇನ್ನಿಲ್ಲ - actor Anupam Shyam latest News

ಭಾರತೀಯ ಚಿತ್ರರಂಗದ​ ಹಿರಿಯ ನಟ ಅನುಪಮ್​ ಶ್ಯಾಂ ಅಂಗಾಗ ವೈಫಲ್ಯದಿಂದ ಕೊನೆಯುಸಿರೆಳೆದರು.

Anupam Shyam
ಹಿರಿಯ ನಟ ಅನುಪಮ್​ ಶ್ಯಾಂ
author img

By

Published : Aug 9, 2021, 6:59 AM IST

ಮುಂಬೈ: ಕಿಡ್ನಿ ವೈಫಲ್ಯದಿಂದ ಕಳೆದ ವಾರ ಗೋರೆಗಾಂವ್‌ನ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಚಿತ್ರರಂಗದ​ ಹಿರಿಯ ನಟ ಅನುಪಮ್​ ಶ್ಯಾಂ (63) ಇಂದು ನಸುಕಿನ ಜಾವ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

'ಮನ್ ಕೀ ಆವಾಜ್: ಪ್ರತಿಜ್ಞಾ', 'ಸ್ಲಮ್‌ಡಾಗ್ ಮಿಲಿಯನೇರ್' ಮತ್ತು 'ಬ್ಯಾಂಡಿಟ್ ಕ್ವೀನ್'ನಂತಹ ಜನಪ್ರಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಇವರು ಅನೇಕ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದರು.

ಅನುಪಮ್ ಶ್ಯಾಂ ನಿಧನದ ಬಗ್ಗೆ ಮಾತನಾಡಿದ ಆಪ್ತ ಯಶ್​ಪಾಲ್​ ಶರ್ಮಾ, '40 ನಿಮಿಷಗಳ ಹಿಂದೆ ಶ್ಯಾಂ ಸಾವಿನ ಬಗ್ಗೆ ವೈದ್ಯರು ನಮಗೆ ಮಾಹಿತಿ ನೀಡಿದರು. ಅವರ ಮೃತದೇಹ ಆಸ್ಪತ್ರೆಯಲ್ಲಿದ್ದು, ಬೆಳಗ್ಗೆ ಎಂಎಚ್​ಎಡಿಎ ಕಾಲೋನಿಯಲ್ಲಿರುವ ನ್ಯೂ ದಿಂಡೋಶಿ ನಿವಾಸಕ್ಕೆ ತರಲಾಗುವುದು. ಅಂತ್ಯಕ್ರಿಯೆ ನಾಳೆ ನೆರವೇರಲಿದೆ" ಎಂದರು.

ಸುಮಾರು ಮೂರು ದಶಕಗಳ ಸುದೀರ್ಘ ಸಿನಿ ಜೀವನದಲ್ಲಿ ಶ್ಯಾಂ ಜನಪ್ರಿಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವುಗಳಲ್ಲಿ ಸತ್ಯ, ದಿಲ್ ಸೇ, ಲಗಾನ್, ಹಜಾರೊನ್ ಕ್ವಾಯಿಶೇನ್​ ಏಸಿ ಮತ್ತು ಮನ್ ಕೀ ಆವಾಜ್ ಪ್ರತಿಜ್ಞಾ ಸಿನಿಮಾಗಳು ಸೇರಿವೆ.

ಕಳೆದ ವರ್ಷ ಅನುಪಮ್​ ಅವರ ಸಹೋದರ ಅನುರಾಗ್, "ಶ್ಯಾಮ್ ಡಯಾಲಿಸಿಸ್‌ಗೆ ಒಳಗಾಗಿದ್ದಾರೆ. ಅವರನ್ನು ಗೋರೆಗಾಂವ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ" ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ, ಚಿಕಿತ್ಸೆ ವೆಚ್ಚ ಭರಿಸುವಂತೆ ಚಿತ್ರರಂಗದ ಬಳಿ ಸಹಾಯ ಕೋರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.