ಕೊಟ್ಟಾಯಂ(ಕೇರಳ): ಕೇರಳದ ಪ್ರಸಿದ್ಧ ಉರಗ ತಜ್ಞ ವಾವಾ ಸುರೇಶ್ ಅವರಿಗೆ ನಾಗರಹಾವು ಕಡಿತದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಮವಾರ ಕೊಟ್ಟಾಯಂನ ಕುರಿಚಿಯಲ್ಲಿ ಕಂಡುಬಂದಿದ್ದ ನಾಗರ ಹಾವನ್ನು ಹಿಡಿಯುವ ವೇಳೆ ಹಾವು ಸುರೇಶ್‌ಗೆ ಕಚ್ಚಿತ್ತು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ