ಪಾಲ್ಘರ್(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ ಜೋರಾಗಿದೆ. ಪಾಲ್ಘರ್ ಜಿಲ್ಲೆಯ ವಸಯಿ ಪಟ್ಟಣದಲ್ಲಿ ಗುಡ್ಡ ಕುಸಿದು ಮನೆಗಳ ಬಿದ್ದ ಕಾರಣ 6 ಜನರು ಮಣ್ಣಿನಡಿ ಸಿಲುಕಿದ್ದಾರೆ. ಇದರಲ್ಲಿ 4 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರಾಜೀವ್ಲಿ ವಘರಾಲ್ ಪ್ರದೇಶದಲ್ಲಿ ಭೂ ಮಾಫಿಯಾ ಜೋರಾಗಿದೆ. ಬೃಹತ್ ಗುಡ್ಡಗಳನ್ನು ಕೊರೆದು ಮಣ್ಣನ್ನು ಸಾಗಿಸಲಾಗುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ.
ಗುಡ್ಡದ ಕೆಳಗೆ ಇರುವ ಮನೆಗಳ ಮೇಲೆ ಮಣ್ಣು ಬಿದ್ದಿದೆ. ಇದರಿಂದ 2 ಕುಟುಂಬದ 6 ಮಂದಿ ಒಳಗೆ ಸಿಲುಕಿದ್ದರು. ಮಾಹಿತಿ ಅರಿತ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಸಿಲುಕಿದ್ದ 6 ಮಂದಿಯ ಪೈಕಿ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನಿಬ್ಬರು ಒಳಗಡೆಯೇ ಸಿಲುಕಿದ್ದು, ಅವರ ರಕ್ಷಣೆಗೆ ಭರದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಓದಿ: ₹100 ಲಾಟರಿ ಟಿಕೆಟ್ಗೆ ₹10 ಲಕ್ಷ ಬಂಪರ್.. ಪಂಜಾಬ್ ಬಾಲಕಿಗೆ ಒಲಿದ ಅದೃಷ್ಟ