ETV Bharat / bharat

ಮಮತಾ ಬ್ಯಾನರ್ಜಿಗೆ 51 ಸಾವಿರ ರಾಮನ ಹೆಸರಿರುವ ವರ್ಣಚಿತ್ರ ಬಿಡಿಸಿ ಗಿಫ್ಟ್​ ನೀಡಿದ ಮಹಿಳೆ! - ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಸಾರ್ವಜನಿಕ ಸಭೆಯೊಂದರಲ್ಲಿ ಜನರು 'ಜೈ ಶ್ರೀ ರಾಮ್'ಎಂದು ಕೂಗಿದಾಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅದನ್ನು ಆಕ್ಷೇಪಿಸಿ ಸಭೆಯಿಂದ ಹೊರನಡೆದಿದ್ದು ನನಗೆ ಬಹಳ ನಿರಾಶೆ ಉಂಟು ಮಾಡಿತು. ಹೀಗಾಗಿ ದೀದಿಗೆ ಒಂದು ಸಂದೇಶವನ್ನು ನೀಡುವ ಸಲುವಾಗಿ, ಭಗವಾನ್ ರಾಮನ ಹೆಸರನ್ನು ಜಪಿಸಲು, ರಾಮ ದರ್ಬಾರ್​ನ ವರ್ಣಚಿತ್ರವನ್ನು ರಚಿಸಿ ಅದನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ್ದೇನೆ ಎಂದು ತಿಳಿಸಿದ್ರು.

Lord Ram to Mamata Banerjee
ರಾಮ ದರ್ಬಾರ್​ನ ವರ್ಣಚಿತ್ರ
author img

By

Published : Mar 9, 2021, 6:50 AM IST

ವಾರಾಣಸಿ(ಉತ್ತರಪ್ರದೇಶ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಟಿಎಂಸಿ ಮತ್ತು ಬಿಜೆಪಿ ನಡುವಿನ ವಾಕ್​ಸಮರ ಮುಂದುವರಿದಿದೆ. ಈ ಮಧ್ಯೆ 26 ವರ್ಷದ ಮಹಿಳೆಯೊಬ್ಬರು, ರಾಮ​ ದರ್ಬಾರ್​ನ ವಿಶೇಷ ಪೇಂಟಿಂಗ್ ಒಂದನ್ನು ಮಮತಾ ಬ್ಯಾನರ್ಜಿಗೆ ಗಿಫ್ಟ್​ ನೀಡಿದ್ದಾರೆ. ಈ ಪೇಟಿಂಗ್​ ಮೇಲೆ 'ರಾಮ್' ಎಂದು 51,000 ಬಾರಿ ಕೆತ್ತಲಾಗಿದೆ.

ಮಮತಾ ಬ್ಯಾನರ್ಜಿಗೆ ರಾಮ ದರ್ಬಾರ್​ನ ವರ್ಣಚಿತ್ರ ಗಿಫ್ಟ್​

ರಾಮ ದರ್ಬಾರ್​​ನ ರಾಮ, ತಾಯಿ ಸೀತಾ, ಭಾರತ್, ಲಕ್ಷ್ಮಣ, ಬ್ರಹ್ಮ, ವಿಷ್ಣು, ಭಗವಾನ್ ಮಹೇಶ್ ಮತ್ತು ಹನುಮಾನ್ ಅವರ ಚಿತ್ರಗಳನ್ನು ಹೊಂದಿರುವ ಈ ಸ್ಕೆಚ್ ತಯಾರಿಸಲು ಒಂದೂವರೆ ತಿಂಗಳು ಬೇಕಾಯಿತು ಅಂತಾರೆ ರಾಮ ದರ್ಬಾರ್​ನ ಪೇಟಿಂಗ್​ ರಚಿಸಿದ ಶಾಲಿನಿ ಮಿಶ್ರಾ.

ತಮ್ಮ ಪೇಟಿಂಗ್​ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ ಶಾಲಿನಿ ಮಿಶ್ರಾ, ಸಾರ್ವಜನಿಕ ಸಭೆಯೊಂದರಲ್ಲಿ ಜನರು 'ಜೈ ಶ್ರೀ ರಾಮ್'ಎಂದು ಕೂಗಿದಾಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅದನ್ನು ಆಕ್ಷೇಪಿಸಿ ಸಭೆಯಿಂದ ಹೊರನಡೆದಿದ್ದು ನನಗೆ ಬಹಳ ನಿರಾಸೆ ಉಂಟು ಮಾಡಿತು. ಹೀಗಾಗಿ ದೀದಿಗೆ ಒಂದು ಸಂದೇಶವನ್ನು ನೀಡುವ ಸಲುವಾಗಿ, ಭಗವಾನ್ ರಾಮನ ಹೆಸರನ್ನು ಜಪಿಸಲು, ರಾಮ ದರ್ಬಾರ್​ನ ವರ್ಣಚಿತ್ರವನ್ನು ರಚಿಸಿ ಅದನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ್ದೇನೆ ಎಂದು ತಿಳಿಸಿದ್ರು. ಹಾಗೆಯೇ ಆ ಪೇಟಿಂಗ್​ ಜೊತೆಗೆ ಬಂಗಾಳ ಸಿಎಂಗೆ ಪತ್ರವೊಂದನ್ನ ಸಹ ಬರೆದಿದ್ದು, ಭಗವಾನ್​ ರಾಮ ಎಲ್ಲರಿಗೂ ಸೇರಿದವನು, ನೀವು ರಾಮನನ್ನು ಜಪಿಸಿ ಎಂದು ಮನವಿ ಮಾಡಿದ್ದೇನೆ. ಹಾಗೂ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಗೆ ಮಮತಾ ಬ್ಯಾನರ್ಜಿಗೆ ಶುಭ ಕೋರಿರುವುದಾಗಿ ಶಾಲಿನಿ ಮಿಶ್ರಾ ತಿಳಿಸಿದ್ರು.

Lord Ram to Mamata Banerjee
ರಾಮ ದರ್ಬಾರ್​ನ ವರ್ಣಚಿತ್ರ

ಇದೇ ವೇಳೆ, ಪಟ್ಟಭದ್ರಾ ಹಿತಾಸಕ್ತಿಗಳು ಚುನಾವಣೆ ಗೆಲ್ಲಲು ರಾಮನ ಹೆಸರನ್ನು ಬಳಸಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಭಗವಾನ್ ರಾಮನನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ಶಾಲಿನಿ ಹೇಳಿದ್ರು.

ಇದನ್ನೂ ಓದಿ:ಶಾಲೆಯ ಗೋಡೆ ಕುಸಿದು 6 ಕಾರ್ಮಿಕರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.